ಕರ್ನಾಟಕ

karnataka

ETV Bharat / bharat

ವಾಟ್ಸ್ಯಾಪ್ ಮೂಲಕ ಪತಿ 'ತ್ರಿವಳಿ ತಲಾಖ್': ಪಂಜಾಬ್​ ಕೋರ್ಟ್​ ಮೆಟ್ಟಿಲೇರಿದ ಸಂತ್ರಸ್ತೆ

ತ್ರಿವಳಿ ತಲಾಖ್​ನ ಮೊದಲ ಪ್ರಕರಣ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ಮೆಟ್ಟಿಲೇರಿದ್ದು, ಮುಸ್ಲಿಂ ಮಹಿಳೆಯೊಬ್ಬರು ಪತಿ ವಾಟ್ಸ್ಯಾಪ್ ಸಂದೇಶದ ಮೂಲಕ ತಲಾಖ್​ ನೀಡಿದ್ದಾರೆ ಎಂದು ಆರೋಪಿಸಿ ದೂರು ಸಲ್ಲಿಸಿದ್ದಾರೆ.

latest triple talaq cases
ತ್ರಿವಳಿ ತಲಾಖ್

By

Published : Jan 8, 2021, 12:23 PM IST

ಚಂಡೀಗಢ:ಮುಸ್ಲಿಂ ಮಹಿಳೆಯೊಬ್ಬರು ತಮ್ಮ ಪತಿ ವಾಟ್ಸ್ಯಾಪ್ ಮೂಲಕ ತ್ರಿವಳಿ ತಲಾಖ್​ ನೀಡಿದ್ದಾರೆ ಎಂದು ಆರೋಪಿಸಿ ಗಂಡನ ವಿರುದ್ಧ ಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದಾರೆ.

ಸಂತ್ರಸ್ತೆಯ ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ, ಪ್ರಕರಣ ಸಂಬಂಧ ಆರೋಪಿಯ ವಿರುದ್ಧ ಎಫ್‌ಐಆರ್ ದಾಖಲಿಸದಿರುವುದಕ್ಕೆ ಮತ್ತು ಕ್ರಮ ಕೈಗೊಳ್ಳದಿರುವುದಕ್ಕೆ ಪಂಜಾಬ್ ಸರ್ಕಾರ ಮತ್ತು ಪಂಜಾಬ್ ಡಿಜಿಪಿಯಿಂದ ಲಿಖಿತ ಉತ್ತರವನ್ನು ಕೋರಿದೆ.

ತಾನು ಮಲೆರ್ಕೊಟ್ಲಾ ಮೂಲದವಳೆಂದು ಸಂತ್ರಸ್ತೆ ಕೋರ್ಟ್​​ಗೆ ಸಲ್ಲಿಸಿದ ಅರ್ಜಿಯಲ್ಲಿ ಉಲ್ಲೇಖಿಸಿದ್ದು, ನನಗೆ 39 ವರ್ಷ ವಯಸ್ಸಾಗಿದೆ. ನನ್ನ ಪತಿ 2020 ರ ಜೂನ್ 20 ರಂದು ವಾಟ್ಸ್ಯಾಪ್ ಮೂಲಕ ಮೂರು ಬಾರಿ 'ತಲಾಖ್'​ ಎಂದು ಸಂದೇಶ ಕಳಿಸಿದ್ದಾರೆ ಎಂದು ಅರ್ಜಿಯಲ್ಲಿ ನಮೂದಿಸಿದ್ದಾರೆ. ಈ ಪ್ರಕರಣದಲ್ಲಿ ಹೊಸ ಮುಸ್ಲಿಂ ಮಹಿಳಾ ಸಂರಕ್ಷಣಾ ಕಾಯ್ದೆಯಡಿ ಪತಿಯ ವಿರುದ್ಧ ಕ್ರಮಕೈಗೊಳ್ಳಲು ಮಹಿಳೆ ಕೋರಿದ್ದಾರೆ.

ಜೂನ್ 23, 2020 ಮತ್ತು ಸೆಪ್ಟೆಂಬರ್ 22, 2020 ರಂದು ನಾನು ಪೊಲೀಸ್​ ಠಾಣೆಗೆ ತೆರಳಿ ಪತಿ ವಿರುದ್ಧ ದೂರು ದಾಖಲಿಸಿದ್ದೇನೆ. ಆದರೆ ಪೊಲೀಸರು ಎಫ್​ಐಆರ್​ ಕೂಡ ದಾಖಲಿಸಿಲ್ಲ ಹಾಗೂ ಪತಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ, ಹೀಗಾಗಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಬೇಕಾಯಿತು ಎಂದು ಸಂತ್ರಸ್ತೆ ಹೇಳಿದ್ದಾರೆ.

ಇದನ್ನೂ ಓದಿ:ಹಣ ವರ್ಗಾವಣೆ ಆರೋಪ: ಸಿಸಿಬಿ ವಿಚಾರಣೆಗೆ ನಟಿ ರಾಧಿಕಾ ಹಾಜರು

ABOUT THE AUTHOR

...view details