ನವದೆಹಲಿ: ವಿವಿಧ ವೇದಿಕೆಗಳಲ್ಲಿ ಬಾಕಿ ಇರುವ ಆದಾಯ ತೆರಿಗೆ ಮತ್ತು ನಿಗಮ ತೆರಿಗೆ ಸಂಬಂಧಿತ ವಿವಾದಗಳನ್ನು ಪರಿಹರಿಸುವಲ್ಲಿ ಮೋದಿ ಸರ್ಕಾರ ಕಳೆದ ವರ್ಷ ಪ್ರಾರಂಭಿಸಿದ 'ವಿವಾದ್ ಸೆ ವಿಶ್ವಾಸ್' ನೇರ ತೆರಿಗೆ ವಿವಾದ ಪರಿಹಾರ ಯೋಜನೆ ಶೇ 28ರಷ್ಟು ಯಶಸ್ಸಿನ ಪ್ರಮಾಣ ಹೊಂದಿದೆ ಎಂದು ಕೇಂದ್ರ ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್, ಲೋಕಸಭೆಗೆ ತಿಳಿಸಿದರು.
ಈ ಯೋಜನೆ ಯಶಸ್ವಿಯಾಗಿದೆ ಎಂದು ವಿವರಿಸಿದ ಅನುರಾಗ್ ಠಾಕೂರ್ ಅವರು 2021 ರ ಮಾರ್ಚ್ 1 ರವರೆಗೆ ತೆರಿಗೆದಾರರಿಂದ 53,346 ಕೋಟಿ ರೂ ಸಂಗ್ರಹ ಮಾಡಲಾಗಿದೆ ಎಂದಿದ್ದಾರೆ.
ಮರು ಮನವಿ ಸೇರಿದಂತೆ ಬಾಕಿ ಇರುವ 1,43,126 ತೆರಿಗೆ ವಿವಾದಗಳನ್ನು ಒಳಗೊಂಡಿರುವ ಈ ಯೋಜನೆಯಡಿ ಒಟ್ಟು 1,28,733 ಘೋಷಣೆಗಳನ್ನು ಸಲ್ಲಿಸಲಾಗಿದೆ ಎಂದು ಸಚಿವರು ತಮ್ಮ ಲಿಖಿತ ಉತ್ತರದಲ್ಲಿ ಲೋಕಸಭೆಗೆ ಮಾಹಿತಿ ನೀಡಿದರು. ಠಾಕೂರ್ ಪ್ರಕಾರ, 5,10,491 ತೆರಿಗೆ ವಿವಾದ ಪ್ರಕರಣಗಳು ತೆರಿಗೆ ವಿವಾದ ಪರಿಹಾರ ಯೋಜನೆಯನ್ನು ಪಡೆಯಲು ಅರ್ಹವಾಗಿವೆ.
"ಯೋಜನೆಯಡಿ ಪಡೆದ ಘೋಷಣೆಗಳು ಬಾಕಿ ಇರುವ ತೆರಿಗೆ ವಿವಾದಗಳಲ್ಲಿ ಶೇ 28ರಷ್ಟಕ್ಕಿಂತ ಹೆಚ್ಚು" ಎಂದು ಅವರು ಹೇಳಿದರು.
ಯೋಜನೆಯ ಪ್ರಯೋಜನಗಳ ಕುರಿತು ಮಾತನಾಡಿದ ಅನುರಾಗ್ ಠಾಕೂರ್, 'ವಿವಾದ್ ಸೆ ವಿಶ್ವಾಸ್' ಯೋಜನೆಯಡಿ ಒಟ್ಟು 1.28 ಲಕ್ಷಕ್ಕೂ ಹೆಚ್ಚು ಘೋಷಣೆಗಳ ಬಗ್ಗೆ, 1,393 ಘೋಷಣೆಗಳನ್ನು ಕೇಂದ್ರ ಪಿಎಸ್‌ಯುಗಳು ಮತ್ತು 833 ಘೋಷಣೆಗಳನ್ನು ರಾಜ್ಯ ಪಿಎಸ್‌ಯು ಮತ್ತು ಮಂಡಳಿಗಳು ಸಲ್ಲಿಸಿವೆ. ಈ ಯೋಜನೆಯಡಿ ಮಾಡಿದ ಘೋಷಣೆಗಳು 98,328 ಕೋಟಿ ರೂ.ಗಳ ತೆರಿಗೆ ವಿವಾದಗಳನ್ನು ಒಳಗೊಂಡಿವೆ ಮತ್ತು ತೆರಿಗೆದಾರರು ಈ ವರ್ಷದ ಮಾರ್ಚ್ 1 ರವರೆಗೆ 53,346 ಕೋಟಿ ರೂ ತೆರಿಗೆ ಸಲ್ಲಿಸಿದ್ದಾರೆ ಎಂದು ಅವರು ವಿವರಣೆ ನೀಡಿದ್ದಾರೆ.
ಫೇಸ್ಲೆಸ್ ಮೌಲ್ಯಮಾಪನ- ಫೇಸ್ಲೆಸ್ ಮನವಿ
ತೆರಿಗೆದಾರರ ಸ್ನೇಹಿ ಕ್ರಮಗಳ ಬಗ್ಗೆ ಮಾತನಾಡಿದ ಸಚಿವರು, ಆಯುಕ್ತರ ಮಟ್ಟದಲ್ಲಿ ಮೇಲ್ಮನವಿಗಳನ್ನು ವಿಲೇವಾರಿ ಮಾಡುವಲ್ಲಿ ದಕ್ಷತೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ತುಂಬಲು ಫೇಸ್ಲೆಸ್ಮೇಲ್ಮನವಿ ಯೋಜನೆಯನ್ನು ಕಳೆದ ಸೆಪ್ಟೆಂಬರ್‌ನಲ್ಲಿ ಜಾರಿ ತರಲಾಯಿತು.