ಕರ್ನಾಟಕ

karnataka

ದೇಶದಲ್ಲಿ ಹೊಸದಾಗಿ 1,675 ಕೋವಿಡ್‌ ಪ್ರಕರಣ ಪತ್ತೆ, 31 ಸಾವು

By

Published : May 24, 2022, 9:38 AM IST

ಕಳೆದೊಂದು ವಾರದಿಂದ ಎರಡು ಸಾವಿರದ ಗಡಿ ದಾಟುತ್ತಿದ್ದ ಕೋವಿಡ್‌-19 ಪ್ರಕರಣಗಳಲ್ಲಿ ಇಂದು ಇಳಿಕೆ ಕಂಡಿದೆ.

new Covid cases in India  India covid report  India corona news  ಭಾರತದಲ್ಲಿ ಕೋವಿಡ್​ ಹೊಸ ಪ್ರಕರಣ  ಭಾರತದ ಕೋವಡ್​ ವರದಿ  ಭಾರತ ಕೊರೊನಾ ಸುದ್ದಿ
ಕೋವಿಡ್​ ಪ್ರಕರಣದಲ್ಲಿ ಭಾರೀ ಇಳಿಕೆ

ನವದೆಹಲಿ: ದೇಶದಲ್ಲಿ ಕಳೆದೊಂದು ದಿನದಲ್ಲಿ 1,675 ಹೊಸ ಕೋವಿಡ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಇದೇ ಅವಧಿಯಲ್ಲಿ 31 ಮಂದಿ ಸೋಂಕಿಗೆ ಬಲಿಯಾಗಿದ್ದು, ಇಲ್ಲಿಯವರೆಗೆ ಒಟ್ಟು 5,24,490 ಮಂದಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ:ಭಾರತದಲ್ಲಿ 2,022 ಹೊಸ ಕೋವಿಡ್​​ ಕೇಸ್​​ ಪತ್ತೆ, 46 ಮಂದಿ ಸಾವು

ಸದ್ಯ ದೇಶದಲ್ಲಿ 14,841 ಸಕ್ರಿಯ ಸೋಂಕು ಪ್ರಕರಣಗಳಿವೆ. ಸೋಮವಾರ 1,635 ಮಂದಿ ಚೇತರಿಸಿಕೊಂಡಿದ್ದು, ಈವರೆಗೆ ಒಟ್ಟು 4,26,00,737 ಮಂದಿ ಗುಣಮುಖರಾಗಿದ್ದಾರೆ. ರಾಷ್ಟ್ರವ್ಯಾಪಿ ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ 192.5 ಕೋಟಿ ಡೋಸ್ ಲಸಿಕೆ ನೀಡಲಾಗಿದೆ.

ABOUT THE AUTHOR

...view details