ಕರ್ನಾಟಕ

karnataka

ETV Bharat / bharat

'WFI ಮುಖ್ಯಸ್ಥರ ವಿರುದ್ಧ ರಸ್ತೆಗಳಲ್ಲಿ ಅಲ್ಲ, ನ್ಯಾಯಾಲಯದಲ್ಲಿ ಹೋರಾಡುತ್ತೇವೆ': ಕುಸ್ತಿಪಟುಗಳ ಸ್ಪಷ್ಟನೆ - ಪ್ರತಿಭಟನಾ ನಿರತ ಕುಸ್ತಿಪಟುಗಳು

ಭಾರತ ಕುಸ್ತಿ ಫೆಡರೇಷನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸುವ ಭರವಸೆಯನ್ನು ಸರ್ಕಾರ ಈಡೇರಿಸಿದೆ ಎಂದು ಹೇಳುವ ಮೂಲಕ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ತಮ್ಮ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ.

Representative image
ಪ್ರತಿಭಟನಾ ನಿರತ ಕುಸ್ತಿಪಟುಗಳು

By

Published : Jun 26, 2023, 11:04 AM IST

ನವದೆಹಲಿ: ಭಾರತ ಕುಸ್ತಿ ಫೆಡರೇಷನ್(WFI) ಮುಖ್ಯಸ್ಥರ ವಿರುದ್ಧ ತಮ್ಮ ಹೋರಾಟವನ್ನು ಪುನರಾರಂಭಿಸಲು ಮತ್ತೆ ಬೀದಿಗಿಳಿಯಬಹುದು ಎಂದು ಪ್ರತಿಪಾದಿಸಿದ ಒಂದು ದಿನದ ನಂತರ ಭಾನುವಾರ(ಜೂ.25) ಪ್ರತಿಭಟನಾ ನಿರತ ಕುಸ್ತಿಪಟುಗಳು ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡಲಾಗುವುದು. ರಸ್ತೆಗಳಲ್ಲಿ ಅಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಒಂದೇ ರೀತಿಯ ಟ್ವೀಟ್ ಅನ್ನು ಪೋಸ್ಟ್ ಮಾಡಿದ್ದಾರೆ. ಟ್ವೀಟ್​​ನಲ್ಲಿ ಅವರು ಬ್ರಿಜ್ ಭೂಷಣ್ ವಿರುದ್ಧ ಆರೋಪಪಟ್ಟಿ ಸಲ್ಲಿಸುವ ಭರವಸೆಯನ್ನು ಸರ್ಕಾರ ಈಡೇರಿಸಿದೆ ಎಂದು ಹೇಳಿದ್ದಾರೆ. "ಈ ಪ್ರಕರಣದಲ್ಲಿ ನ್ಯಾಯ ಸಿಗುವವರೆಗೂ ಕುಸ್ತಿಪಟುಗಳು ಹೋರಾಟವನ್ನು ಮುಂದುವರಿಯುತ್ತಾರೆ. ಆದರೆ, ಅದು (ಹೋರಾಟ) ನ್ಯಾಯಾಲಯದಲ್ಲಿ ನಡೆಯಲಿದೆ, ರಸ್ತೆಯಲ್ಲಿ ಅಲ್ಲ" ಎಂದು ಟ್ವಿಟರ್‌ನಲ್ಲಿ ಹೇಳಿದ್ದಾರೆ. ಹೇಳಿಕೆಯನ್ನು ಪೋಸ್ಟ್ ಮಾಡಿದ ಕೆಲವೇ ನಿಮಿಷಗಳ ನಂತರ, ವಿನೇಶ್ ಮತ್ತು ಸಾಕ್ಷಿ ಅವರು ಕೆಲವು ದಿನಗಳ ಕಾಲ ಸಾಮಾಜಿಕ ಮಾಧ್ಯಮದಿಂದ ದೂರ ಇರುವುದಾಗಿ ಸಹ ಟ್ವೀಟ್ ಮೂಲಕ ತಿಳಿಸಿದ್ದಾರೆ.

"ಜೂ.7 ರಂದು ನಡೆದ ಮಾತುಕತೆಯಂತೆ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದೆ. ದೆಹಲಿ ಪೊಲೀಸರು ಜೂ.15 ರಂದು ಆರು ಮಹಿಳಾ ಕುಸ್ತಿಪಟುಗಳು ದಾಖಲಿಸಿದ ಎಫ್‌ಐಆರ್ ಆಧಾರದ ಮೇಲೆ, ನ್ಯಾಯಾಲಯದ ಮುಂದೆ ಲೈಂಗಿಕ ಕಿರುಕುಳದ ಆರೋಪಗಳ ಬಗ್ಗೆ ಚಾರ್ಜ್​ಶೀಟ್​ ಸಲ್ಲಿಸಿದ್ದರು. ನ್ಯಾಯ ಸಿಗುವವರೆಗೆ ನ್ಯಾಯಾಲಯದಲ್ಲಿ ಹೋರಾಟ ಮುಂದುವರಿಯುತ್ತದೆಯೇ ಹೊರತು ರಸ್ತೆಯಲ್ಲಲ್ಲ" ಎಂದು ಹೇಳಿದ್ದಾರೆ.

ಸರ್ಕಾರದ ಭರವಸೆಯಂತೆ ಜು.11 ರಂದು ನಡೆಯಲಿರುವ ಭಾರತ ಕುಸ್ತಿ ಫೆಡರೇಷನ್ ಚುನಾವಣೆಗಳಿಗಾಗಿ ನಾವು ಕಾಯುತ್ತೇವೆ. ಭಾರತೀಯ ರೆಸ್ಲಿಂಗ್ ಫೆಡರೇಶನ್ ಚುನಾವಣೆಗೆ ಪ್ರಕ್ರಿಯೆ ಪ್ರಾರಂಭವಾಗಿದೆ. ಸರ್ಕಾರ ನೀಡಿದ ಭರವಸೆಯಂತೆ ಜು.11 ರಂದು ಚುನಾವಣೆ ನಡೆಸಲು ನಿರ್ಧರಿಸಲಾಗಿದೆ. ಭರವಸೆಯ ಅನುಷ್ಠಾನಕ್ಕಾಗಿ ನಾವು ಕಾಯುತ್ತೇವೆ" ಎಂದು ಕುಸ್ತಿಪಟುಗಳು ಹೇಳಿದರು.

ಇದಕ್ಕೂ ಮೊದಲು ರೈತ ಮುಖಂಡರು, ಖಾಪ್ ಪಂಚಾಯತ್‌ಗಳು ಮತ್ತು ಹಲವಾರು ಇತರ ಸಂಘಟನೆಗಳಿಂದ ಭಾರಿ ಬೆಂಬಲವನ್ನು ಪಡೆದ ಕುಸ್ತಿಪಟುಗಳು 38 ದಿನಗಳ ಕಾಲ ಜಂತರ್ ಮಂತರ್ ಮೇಲೆ ಕುಳಿತುಕೊಂಡು ಪ್ರತಿಭಟಿಸಿದ್ದರು. ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಅವರು ಈ ವರ್ಷದ ಆರಂಭದಿಂದಲೂ ಲೈಂಗಿಕ ಕಿರುಕುಳದ ಆರೋಪದ ಮೇಲೆ ಸಿಂಗ್ ವಿರುದ್ಧ ಪ್ರತಿಭಟನೆಗಳನ್ನು ಮುನ್ನಡೆಸಿದ್ದರು. ಮೇ 28 ರಂದು ತಮ್ಮ ಜಂತರ್ ಮಂತರ್ ಪ್ರತಿಭಟನಾ ಸ್ಥಳದಿಂದ ಬಂಧಿಸಿದ ನಂತರ, ಬಿಜೆಪಿ ಸಂಸದ ಸಿಂಗ್ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗುವುದು ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಭರವಸೆ ನೀಡಿದ್ದರು. ಬಳಿಕ ಜೂ.15ರಣದು ಕುಸ್ತಿಪಟುಗಳು ತಮ್ಮ ಪ್ರತಿಭಟನೆಯನ್ನು ಸ್ಥಗಿತಗೊಳಿಸಿದ್ದರು.

ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOA) ಪ್ರಕಾರ ವ್ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (WFI) ಚುನಾವಣೆಗಳನ್ನು ಜುಲೈ 6 ರಿಂದ ಜುಲೈ 11ಕ್ಕೆ ಮುಂದೂಡಲಾಗಿದೆ. ಡಬ್ಲ್ಯೂಎಫ್‌ಐನ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಚುನಾವಣೆಯಲ್ಲಿ ನಿರ್ಧರಿಸಲಾಗುತ್ತದೆ. ಅಧ್ಯಕ್ಷ ಸ್ಥಾನ, ಹಿರಿಯ ಉಪಾಧ್ಯಕ್ಷ ಸ್ಥಾನ, ನಾಲ್ಕು ಉಪಾಧ್ಯಕ್ಷ ಸ್ಥಾನ, ತಲಾ ಒಂದು ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿ ಸ್ಥಾನಗಳಿವೆ. ಐಒಎ ಪತ್ರದ ಪ್ರಕಾರ ಜಂಟಿ ಕಾರ್ಯದರ್ಶಿ ಮತ್ತು ಐದು ಕಾರ್ಯಕಾರಿ ಸದಸ್ಯರ ಹುದ್ದೆಗಳಿಗೆ ಚುನಾವಣೆ ನಡೆಯಲಿದೆ. ಎಲ್ಲಾ ರಾಜ್ಯ/ಯುಟಿ ರೆಸ್ಲಿಂಗ್ ಫೆಡರೇಶನ್‌ಗಳು ಡಬ್ಲ್ಯೂಎಫ್‌ಐನ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲು ಚುನಾವಣಾ ಕೊಲಾಜ್ ಅನ್ನು ರಚಿಸಲು ಕಾರ್ಯಕಾರಿ ಅಂಗದ ಭಾಗವಾಗಿರುವ ತಮ್ಮ ಸಂಘಗಳಿಗೆ ತಲಾ ಇಬ್ಬರು ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡುತ್ತವೆ.

ಜು.11 ರಂದು ಮತ ಎಣಿಕೆ, ಫಲಿತಾಂಶ:ಚುನಾವಣೆಗೆ ನಾಮಪತ್ರಗಳ ಸಲ್ಲಿಕೆ ಜೂನ್ 29 ರಿಂದ ಜುಲೈ 1 ರವರೆಗೆ ಬೆಳಗ್ಗೆ 11 ರಿಂದ ಸಂಜೆ 5 ರವರೆಗೆ ಇರುತ್ತದೆ. ಜುಲೈ 4 ರಂದು ಬೆಳಗ್ಗೆ 11 ಗಂಟೆಗೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜುಲೈ 4 ರಿಂದ ಜುಲೈ 7 ರ ನಡುವೆ ಸಂಜೆ 5 ಗಂಟೆಯವರೆಗೆ ಅಭ್ಯರ್ಥಿಗಳು ನಾಮ ಪತ್ರ ಹಿಂಪಡೆಯಬಹುದು. ಜುಲೈ 8 ರಂದು ಬೆಳಿಗ್ಗೆ 11 ಗಂಟೆಗೆ ಅಭ್ಯರ್ಥಿಗಳ ಅಂತಿಮ ಪಟ್ಟಿ ಮಾಡಲಾಗುತ್ತದೆ ಎಂದು ಪತ್ರದಲ್ಲಿ ಹೇಳಲಾಗಿದೆ. ಜುಲೈ 11 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1:20 ರವರೆಗೆ ಮತದಾನ ನಡೆಯಲಿದೆ. ಮಧ್ಯಾಹ್ನ 1:30ಕ್ಕೆ ಮತ ಎಣಿಕೆ ಆರಂಭವಾಗಲಿದ್ದು, ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ:Brij Bhushan Singh: ಜನಪ್ರತಿನಿಧಿಗಳ ಕೋರ್ಟ್​ಗೆ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಪ್ರಕರಣ ವರ್ಗಾವಣೆ

ABOUT THE AUTHOR

...view details