ಸಾಮಾನ್ಯವಾಗಿ ಆನೆ ಬಹುತೇಕರಿಗೆ ಇಷ್ಟವಾಗುವ ಪ್ರಾಣಿ. ಇತ್ತೀಚಿನ ದಿನಗಳಲ್ಲಿ ಕಾಡಾನೆಗಳು ಆಹಾರ ಹುಡುಕುತ್ತಾ ಕಾಡಿನಿಂದ ನಾಡಿನತ್ತ ಮುಖ ಮಾಡುತ್ತಿವೆ. ಒಮ್ಮೊಮ್ಮೆ ರಸ್ತೆಗಳಲ್ಲಿ ಸಂಚರಿಸುವಾಗ ಒಂಟಿ ಸಲಗ ಪ್ರತ್ಯಕ್ಷವಾಗುವುದುಂಟು. ಎಷ್ಟೋ ಬಾರಿ ಹೀಗೆ ಮಾರ್ಗಮಧ್ಯೆ ಆನೆಗಳು ಕಾಣಿಸಿಕೊಂಡರೂ ಯಾರಿಗೂ ತೊಂದರೆ ಕೊಡದೇ ಅವುಗಳ ಪಾಡಿಗೆ ಸಾಗುತ್ತವೆ. ಆದರೆ ಕೆಲವೊಮ್ಮೆ ಮಾತ್ರ ವಾಹನಗಳನ್ನು ಅಡ್ಡಗಟ್ಟಿ ನಿಲ್ಲಿಸಿ ಬಿಡುತ್ತವೆ.
ಹೌದು, ಇಲ್ಲೊಂದೆಡೆ ಮಿನಿ ಟೂರಿಸ್ಟ್ ಬಸ್ವೊಂದನ್ನು ಅಡ್ಡ ಹಾಕಿದ ದೈತ್ಯ ಕಾಡಾನೆಯೊಂದು ತನ್ನ ಸೊಂಡಿಲಿನಲ್ಲಿ ಬಸ್‌ನ ಬಾಗಿಲು ತಳ್ಳಿ ಹತ್ತಲು ಪ್ರಯತ್ನಿಸಿತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಉಮಾಶಂಕರ್ ಸಿಂಗ್ ಎಂಬುವರು ಶನಿವಾರ ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. "ಟಾಟಾ ಬಸ್‌ನ ಬಾಗಿಲುಗಳು ತುಂಬಾ ಚಿಕ್ಕದಾಗಿದ್ದು, 'ಬಿಗ್ ರೈಡ್' ಹತ್ತಲು ಸಾಧ್ಯವಾಗಲಿಲ್ಲ" ಎಂದು ತಮಾಷೆಯಾಗಿ ಶೀರ್ಷಿಕೆ ನೀಡಿದ್ದಾರೆ.
ಇದನ್ನೂ ಓದಿ:'ನಂಗೂ ಸ್ವಲ್ಪ ಪಾಠ ಹೇಳಿ ಕೊಡಿ ಮೇಸ್ಟ್ರೇ...' ಶಾಲೆಗೆ ಬಂದ ಗಜರಾಜ!