ನವದೆಹಲಿ: 15 ವರ್ಷದ ಬಾಲಕಿಯರು ಮಗು ಹೆರಲು ಶಕ್ತರಿರುವಾಗ ಕನಿಷ್ಠ ಮದುವೆಯ ವಯಸ್ಸನ್ನು ಏಕೆ ಹೆಚ್ಚಿಸಬೇಕು ಎಂದು ಮಧ್ಯಪ್ರದೇಶದ ಮಾಜಿ ಸಚಿವ ಮತ್ತು ಕಾಂಗ್ರೆಸ್ ಮುಖಂಡ ಸಜ್ಜನ್ ಸಿಂಗ್ ವರ್ಮಾ ಹೇಳಿದ್ದಾರೆ.
'ಹುಡುಗಿಯರು 15 ನೇ ವಯಸ್ಸಿಗೆ ಹೆರಲು ಶಕ್ತರಿರುವಾಗ ಮದುವೆಯ ವಯಸ್ಸನ್ನು ಏಕೆ ಹೆಚ್ಚಿಸಬೇಕು?' - ಚೌಹಾಣ್
ವೈದ್ಯರ ಪ್ರಕಾರ 15 ವರ್ಷದೊಳಗೆ ಹುಡುಗಿಯರು ಸಂತಾನೋತ್ಪತ್ತಿಗೆ ಸಿದ್ಧರಾಗುತ್ತಾರೆ. ಯಾವ ಆಧಾರದ ಮೇಲೆ ಹುಡುಗಿಯರ ವಿವಾಹ ವಯಸ್ಸನ್ನು 18 ರಿಂದ 21 ಕ್ಕೆ ಹೆಚ್ಚಿಸಬೇಕು ಎಂದು ಕಾಂಗ್ರೆಸ್ ಶಾಸಕ ಪ್ರಶ್ನಿಸಿದ್ದಾರೆ.
ಸೋಮವಾರ ನಡೆದ 'ನಾರಿ ಸಮ್ಮಾನ್' ಕಾರ್ಯಕ್ರಮದಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ನೀಡಿದ ಹೇಳಿಕೆಯ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ವೈದ್ಯರ ಪ್ರಕಾರ 15 ವರ್ಷದೊಳಗೆ ಹುಡುಗಿಯರು ಸಂತಾನೋತ್ಪತ್ತಿಗೆ ಸಿದ್ಧರಾಗುತ್ತಾರೆ. ಯಾವ ಆಧಾರದ ಮೇಲೆ ಹುಡುಗಿಯರ ವಿವಾಹ ವಯಸ್ಸನ್ನು 18 ರಿಂದ 21 ಕ್ಕೆ ಹೆಚ್ಚಿಸಬೇಕು ಎಂದು ವರ್ಮಾ ಪ್ರಶ್ನಿಸಿದ್ದಾರೆ. ಹುಡುಗಿಯರ ಮದುವೆಯ ವಯಸ್ಸನ್ನು 18 ರಿಂದ 21 ಕ್ಕೆ ಹೆಚ್ಚಿಸಬೇಕು ಎಂದು ಹೇಳುವ ಹಿಂದಿನ ತರ್ಕ ಏನು ಎಂದು ಕೇಳಿದ್ದಾರೆ.
ಅಪ್ರಾಪ್ತ ವಯಸ್ಕರ ವಿರುದ್ಧದ ಅತ್ಯಾಚಾರಗಳ ಸಂಖ್ಯೆಯಲ್ಲಿ ಮಧ್ಯಪ್ರದೇಶವು ಅಗ್ರಸ್ಥಾನದಲ್ಲಿದೆ. ಅಂತಹ ಸಂದರ್ಭಗಳಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುವ ಬದಲು ಮುಖ್ಯಮಂತ್ರಿಗಳು ಬೂಟಾಟಿಕೆ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.