ಬೆಂಗಳೂರು:ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಆ್ಯಪ್ ಸ್ಟೋರ್ಗಳಿಂದ ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ (Battlegrounds Mobile India -BGMI) ಗೇಮ್ ಅನ್ನು ಕೇಂದ್ರ ಸರ್ಕಾರದ ಆದೇಶದ ಮೇರೆಗೆ ತೆಗೆದುಹಾಕಲಾಗಿದೆ. 2020ರ ಸೆಪ್ಟೆಂಬರ್ನಲ್ಲಿ ಪಬ್ ಜಿ ಗೇಮ್ ವಿರುದ್ಧ ಇದೇ ರೀತಿಯ ಕ್ರಮ ಕೈಗೊಳ್ಳಲಾಗಿತ್ತು. ಭಾರತದ ಸಾರ್ವಭೌಮತ್ವ ಮತ್ತು ಸುರಕ್ಷತೆಗೆ ಧಕ್ಕೆ ತರುತ್ತಿರುವ ಆರೋಪದ ಮೇಲೆ ಪಬ್ಜಿ ಸೇರಿದಂತೆ ಒಟ್ಟು 11 ಚೀನಾ ಮೂಲದ ಆ್ಯಪ್ಗಳನ್ನು ಬ್ಯಾನ್ ಮಾಡಲಾಗಿತ್ತು. ಇನ್ಫಾರ್ಮೇಶನ್ ಟೆಕ್ನಾಲಜಿ ಕಾಯ್ದೆ, 2000ರ ಸೆಕ್ಷನ್ 69A ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು.
ಆಗ ಪಬ್ಜಿ 33 ಮಿಲಿಯನ್ ಫಾಲೋವರ್ಗಳನ್ನು ಹೊಂದಿತ್ತು ಹಾಗೂ ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಗೇಮ್ಗಳಲ್ಲಿ ಒಂದಾಗಿತ್ತು. ನಂತರ ನವೆಂಬರ್ನಲ್ಲಿ ಗೇಮ್ ರಿ-ಲಾಂಚ್ ಆಗಿತ್ತು. ಚೀನಾದಲ್ಲಿರುವ ಟೆನ್ಸೆಂಟ್ ಸರ್ವರ್ಗಳಿಗೆ ಡೇಟಾ ಕಳುಹಿಸುತ್ತಿರುವ ಆರೋಪದ ಮೇಲೆ ಜೂನ್ 2021ರಲ್ಲಿ ಮತ್ತೆ ಗೇಮ್ ನಿಷೇಧಿಸಲಾಯಿತು.