ಕರ್ನಾಟಕ

karnataka

By

Published : May 13, 2021, 7:44 PM IST

ETV Bharat / bharat

ಕೊರೊನಾ ಗೆದ್ದ ನಂತರ ಆ ಪರೀಕ್ಷೆ ಮಾಡಿಸಿಕೊಳ್ಳಬೇಕೆ ? ಇಲ್ಲಿದೆ ವೈದ್ಯರ ಸಲಹೆ!

ಕೊರೋನಾದಿಂದ ಚೇತರಿಸಿಕೊಂಡವರಿಗೆ ಮತ್ತೊಂದು ಅಪಾಯ ಕಾದಿರುವುದು ಆತಂಕಾರಿಯಾಗಿ ಪರಿಣಮಿಸಿದೆ. ಕೋವಿಡ್​ನಿಂದ ಹೊರಬಂದವರಿಗೆ ಕೆಲ ಅಡ್ಡಪರಿಣಾಮಗಳು ಮಾರಕವಾಗುತ್ತಿವೆ. ಇದರಿಂದ ಕೆಲವರು ಸಾಯುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಶ್ವಾಸಕೋಶ, ಹೃದಯ ಮತ್ತು ಮೆದುಳಿನಲ್ಲಿ ಆಗುವ ಗಡ್ಡೆಗಳು ರೂಪುಗೊಳ್ಳುತ್ತಿರುವುದು ಎಂದು ಹೇಳಲಾಗುತ್ತಿದೆ. ಇದನ್ನು ನಿವಾರಿಸಲು, ಕೊರೊನಾ ಪೀಡಿತರು ಡಿ - ಡೈಮರ್ ಪರೀಕ್ಷೆಗೆ ಒಳಗಾಗಿ ಕಾಲಕಾಲಕ್ಕೆ ಸ್ಥಿತಿಗತಿಗಳ ಗಮನಿಸಬೇಕು ಎಂದು ತಜ್ಞರು ಸೂಚಿಸುತ್ತಿದ್ದಾರೆ.

ಡಿ-ಡೈಮರ್
ಡಿ-ಡೈಮರ್

ಕೊರೊನಾದಿಂದ ಚೇತರಿಸಿಕೊಂಡವರಿಗೆ ಮತ್ತೊಂದು ಹೊಸ ಸಮಸ್ಯೆ ಕಾಡತೊಡಗಿದೆ. ಗುಜರಾತ್‌ನ ಸೂರತ್‌ನಲ್ಲಿ ವೈರಸ್‌ನಿಂದ ಚೇತರಿಸಿಕೊಂಡಿರುವ ಯುವಕರಲ್ಲಿ ತೀವ್ರ ಅಡ್ಡಪರಿಣಾಮಗಳು ಕಂಡು ಬಂದಿರುವುದು ಆಘಾತಕಾರಿ ಸಂಗತಿ ಎಂದು ವೈದ್ಯರು ಹೇಳುತ್ತಿದ್ದಾರೆ.

ನಗರದಲ್ಲಿ ಶೇ50 ರಿಂದ 60 ರಷ್ಟು ಕೊರೋನಾ ಪೀಡಿತರು ಸೌಮ್ಯವಾದ ಡಿ - ಡೈಮರ್ ಲಕ್ಷಣ ಹೊಂದಿರುವುದನ್ನು ಗುರುತಿಸಲಾಗಿದ್ದು, ಇವರಲ್ಲಿ ಶೇ 10 ರಿಂದ 15 ರಷ್ಟು ಮಂದಿಗೆ ಅಧಿಕವಾಗಿ ಇರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಪ್ರಮುಖ ಹೃದ್ರೋಗ ತಜ್ಞ ಡಾ.ಅತುಲ್ ಅಭ್ಯಾಂಕರ್ ಇಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಡಿ-ಡೈಮರ್ ಪರೀಕ್ಷೆಯ ಬಗ್ಗೆ ಡಾ.ಅತುಲ್ ಅಭ್ಯಾಂಕರ್ ಹೇಳಿದ್ದೇನು.?

ಡಿ-ಡೈಮರ್ ಪರೀಕ್ಷೆ
ಡಿ-ಡೈಮರ್ ಪರೀಕ್ಷೆ

ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ ಅದು ಸಾವಿಗೆ ಕಾರಣವಾಗಬಹುದು. ಕೊರೊನಾ ಅಡ್ಡಪರಿಣಾಮಗಳಿಂದಾಗಿ ಅನೇಕ ಜನರು ಸಾಯುತ್ತಿದ್ದು, ಯುವ ಜನತೆಯಲ್ಲಿ ಡಿ-ಡೈಮರ್ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಹೃದಯ ಸಮಸ್ಯೆಗಳಿರುವ ಜನರ ಮೇಲೆಯೇ ಹೆಚ್ಚು ಪರಿಣಾಮ ಬೀರುತ್ತಿದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details