ಕರ್ನಾಟಕ

karnataka

By

Published : Sep 10, 2021, 10:00 PM IST

ETV Bharat / bharat

WhatsApp ಗೌಪ್ಯತೆ, ಭದ್ರತೆಗಾಗಿ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಬ್ಯಾಕಪ್‌

ಕಂಪನಿಯು ಇದನ್ನು ಐಚ್ಛಿಕ ಫೀಚರ್ ಆಗಿ ಬಿಡುಗಡೆ ಮಾಡಲಿದೆ. ಮುಂಬರುವ ವಾರಗಳಲ್ಲಿ ಇದನ್ನು ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಬಿಡುಗಡೆ ಮಾಡಲಾಗುವುದು. ವಾಟ್ಸ್‌ಆ್ಯಪ್‌ ಇತರ ಗೌಪ್ಯತೆ ವೈಶಿಷ್ಟ್ಯಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ..

WhatsApp announces end-to-end encrypted backups for privacy, security
WhatsApp ಗೌಪ್ಯತೆ, ಭದ್ರತೆಗಾಗಿ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಬ್ಯಾಕಪ್‌

ನವದೆಹಲಿ :ಫೇಸ್​ಬುಕ್ ಒಡೆತನದ ವಾಟ್ಸ್‌ಆ್ಯಪ್‌ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಬ್ಯಾಕಪ್‌ಗಳನ್ನು ಪೂರ್ಣಗೊಳಿಸಿದೆ ಮತ್ತು ಶೀಘ್ರದಲ್ಲೇ ಬಳಕೆದಾರರಿಗೆ ಗೌಪ್ಯತೆ ಮತ್ತು ಭದ್ರತಾ ರಕ್ಷಣೆ ನೀಡಲು ಆರಂಭಿಸಲಿದೆ ಎಂದು ಕಂಪನಿ ಶುಕ್ರವಾರ ಪ್ರಕಟಿಸಿದೆ.

ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಬ್ಯಾಕಪ್‌ಗಳೊಂದಿಗೆ, ವಾಟ್ಸ್‌ಆ್ಯಪ್‌ನ ಪ್ರಮಾಣದಲ್ಲಿ ಬೇರೆ ಯಾವುದೇ ಸಂದೇಶ ಸೇವೆಗಳು ಜನರ ಸಂದೇಶಗಳಿಗೆ ಈ ಮಟ್ಟದ ಭದ್ರತೆ ಒದಗಿಸುವುದಿಲ್ಲ ಎಂದು ಕಂಪನಿ ಹೇಳಿಕೊಂಡಿದೆ.

ನಮ್ಮ ಬೀಟಾ ಪರೀಕ್ಷಕರಿಗೆ ಮತ್ತು ಅಂತಿಮವಾಗಿ ದಿನನಿತ್ಯದ ಬಳಕೆದಾರರಿಗೆ ಲಭ್ಯವಾಗುವ ಮೊದಲು ನಮ್ಮ ವಿಧಾನವನ್ನು ವಿಶಾಲ ತಾಂತ್ರಿಕ ಸಮುದಾಯಕ್ಕೆ ಒದಗಿಸಲು ನಾವು ಈಗ ಇದನ್ನು ಘೋಷಿಸುತ್ತಿದ್ದೇವೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

ಮುಂಬರುವ ವಾರಗಳಲ್ಲಿ ನಾವು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಬ್ಯಾಕಪ್‌ಗಳನ್ನು ಹೆಚ್ಚುವರಿ ಭದ್ರತೆಯ ಲೇಯರ್ ಆಗಿ ಸೇರಿಸುತ್ತೇವೆ. ಯಾರಾದರೂ ತಮ್ಮ ಚಾಟ್ ಇತಿಹಾಸವನ್ನು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್‌ನೊಂದಿಗೆ ಬ್ಯಾಕಪ್ ಮಾಡಲು ಆಯ್ಕೆ ಮಾಡಿಕೊಂಡರೆ, ಅದು ಅವರಿಗೆ ಮಾತ್ರ ಲಭ್ಯವಾಗಲಿದೆ. ಯಾರೂ ಕೂಡ ತಮ್ಮ ಬ್ಯಾಕಪ್ ಅನ್ನು ಅನ್‌ಲಾಕ್ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಇದು ನಿಜವಾಗಿಯೂ ದೊಡ್ಡ ಗೌಪ್ಯತೆಯ ಪ್ರಗತಿಯಾಗಿದೆ. ನಿರ್ದಿಷ್ಟವಾಗಿ ನಮ್ಮ ಪ್ರಮಾಣದಲ್ಲಿ 2 ಶತಕೋಟಿಗೂ ಹೆಚ್ಚು ಬಳಕೆದಾರರು ದಿನಕ್ಕೆ 100 ಬಿಲಿಯನ್ ಸಂದೇಶಗಳನ್ನು ಕಳುಹಿಸುತ್ತಾರೆ. ಇದು ನಮ್ಮ ಬಳಕೆದಾರರಿಗೆ ಅವರ ವೈಯಕ್ತಿಕ ಸಂದೇಶಗಳ ಸುರಕ್ಷತೆಯಲ್ಲಿ ಅರ್ಥಪೂರ್ಣ ಪ್ರಗತಿ ನೀಡುತ್ತದೆ ಎಂದು ನಾವು ನಂಬುತ್ತೇವೆ ಎಂದು ಅದು ಸೇರಿಸಿದೆ.

ಕಂಪನಿಯು ಇದನ್ನು ಐಚ್ಛಿಕ ಫೀಚರ್ ಆಗಿ ಬಿಡುಗಡೆ ಮಾಡಲಿದೆ. ಮುಂಬರುವ ವಾರಗಳಲ್ಲಿ ಇದನ್ನು ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಬಿಡುಗಡೆ ಮಾಡಲಾಗುವುದು. ವಾಟ್ಸ್‌ಆ್ಯಪ್‌ ಇತರ ಗೌಪ್ಯತೆ ವೈಶಿಷ್ಟ್ಯಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ.

ಓದಿ:ಗುಜರಾತ್‌ನ ರಿಯಲ್‌ ಎಸ್ಟೇಟ್‌ ಗ್ರೂಪ್‌ಗೆ ಐಟಿ ಶಾಕ್‌: ₹1 ಸಾವಿರ ಕೋಟಿ ಅವ್ಯವಹಾರ ಪತ್ತೆ

For All Latest Updates

TAGGED:

ABOUT THE AUTHOR

...view details