ನವದೆಹಲಿ: ಭಾರತದ ಕೊರೊನಾ ವಿರುದ್ಧದ ಹೋರಾಟಕ್ಕೆ ಅನೇಕ ದೇಶಗಳು ವೈದ್ಯಕೀಯ ಉಪಕರಣಗಳನ್ನು ರವಾನಿಸುವ ಮೂಲಕ ನೆರವು ನೀಡಿವೆ. ಇದನ್ನು ನೀವು ಸಹಾಯ ಎಂದು ವಿವರಿಸಬಹುದು. ಆದರೆ ನಾವು 'ಸ್ನೇಹ' ಎಂದು ವ್ಯಾಖ್ಯಾನಿಸುತ್ತೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಹೇಳಿದರು.
ಸಹಾಯ ಎನ್ನುವುದನ್ನು ನಾನು 'ಸ್ನೇಹ' ಎಂದು ಬಣ್ಣಿಸುವೆ: ಡಾ.ಎಸ್.ಜೈಶಂಕರ್ - ಭಾರತದ ಕೊರೊನಾ ಪ್ರಕರಣ
ವಿದೇಶಗಳಿಂದ ಬರುವ ನೆರವನ್ನು ನೀವು ಸಹಾಯ ಎಂದು ವಿವರಿಸಬಹುದು. ಆದರೆ ನಾವು 'ಸ್ನೇಹ' ಎಂದು ವ್ಯಾಖ್ಯಾನಿಸುತ್ತೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್.ಜೈಶಂಕರ್ ಹೇಳಿದರು.
ಎಎನ್‌ಐ ಮಾಧ್ಯಮ ಸಂಸ್ಥೆ ಜೊತೆ ಮಾತನಾಡಿದ ಅವರು, "ಕೊರೊನಾ ಜಗತ್ತಿನೆಲ್ಲೆಡೆ ಹರಡಿರುವ ಸಮಸ್ಯೆ. ಔಷಧಿಗಳ ವಿಷಯಕ್ಕೆ ಬಂದಾಗ ನಾವು ಯುಎಸ್, ಸಿಂಗಾಪುರ, ಯುರೋಪಿಯನ್ ದೇಶಗಳಿಗೆ ಎಚ್‌ಸಿಕ್ಯೂ ಅನ್ನು ನೀಡಿದ್ದೇವೆ. ಅಷ್ಟೇ ಅಲ್ಲದೆ ಕೆಲವು ದೇಶಗಳಿಗೆ ಲಸಿಕೆಗಳನ್ನು ರವಾನಿಸಿದ್ದೇವೆ. ನೀವು ಸಹಾಯ ಎಂದು ವಿವರಿಸುವುದನ್ನು ನಾವು 'ಸ್ನೇಹ' ಎನ್ನುತ್ತೇವೆ" ಎಂದು ಹೇಳಿದ್ದಾರೆ.
"ಈ ಎರಡನೇ ಕೊರೊನಾ ಅಲೆಯಲ್ಲಿ ನಮ್ಮ ಜನರು ಬಹಳ ಸಂಕಷ್ಟ ಎದುರಿಸುತ್ತಿದ್ದಾರೆ. ವಿದೇಶಾಂಗ ಸಚಿವರಾಗಿ ನಮ್ಮ ಜನರಿಗೆ ಸಹಾಯ ಮಾಡಲು ನಾನು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇನೆ" ಎಂದು ಅವರು ಹೇಳಿದರು.