ಕರ್ನಾಟಕ

karnataka

ETV Bharat / bharat

ಮುಂದುವರಿದ ಪ್ರತಿಭಟನೆ: ಬೇಸಿಗೆ ಹಿನ್ನೆಲೆ ದೆಹಲಿಗೆ ತೆರಳೋ ಟ್ರ್ಯಾಕ್ಟರ್​ಗಳಿಗೆ ಫ್ಯಾನ್​ ಅಳವಡಿಕೆ​

ಬೇಸಿಗೆ ಹಿನ್ನೆಲೆ ದೆಹಲಿಗೆ ತೆರಳಲಿರುವ ಟ್ರ್ಯಾಕ್ಟರ್​ಗಳಿಗೆ ಫ್ಯಾನ್​ಗಳನ್ನು ಅಳವಡಿಸಿದ್ದೇವೆ. ಪ್ರತಿಭಟನಾಕಾರರಿಗೆ ಸೊಳ್ಳೆಗಳ ಕಾಟ ತಪ್ಪಿಸಲು ಸೊಳ್ಳೆ ಪರದೆಗಳನ್ನು ಅಳವಡಿಸಲಿದ್ದೇವೆ ಎಂದು ಕಿಸಾನ್ ಮಜದೂರ್ ಸಂಘರ್ಷ ಸಮಿತಿ ಸ್ಟೇಟ್​ ಸೆಕ್ರೆಟರಿ ಎಸ್​ಎಸ್​ ಪಂಧೇರ್​ ತಿಳಿಸಿದ್ದಾರೆ.

By

Published : Mar 5, 2021, 8:11 AM IST

leaving for Delhi tomorrow
ದೆಹಲಿಗೆ ತೆರಳೋ ಟ್ರ್ಯಾಕ್ಟರ್​ಗಳಿಗೆ ಫ್ಯಾನ್​ ಅಳವಡಿಕೆ​

ಅಮೃತಸರ (ಪಂಜಾಬ್​):ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ರೈತರ ಪ್ರತಿಭಟನೆ ಇಂದಿಗೂ ಮುಂದುವರಿದಿದೆ.

ಅತ್ತ ತಮ್ಮ ತಮ್ಮ ಊರುಗಳಿಗೆ ತೆರಳಿದ್ದ ಪಂಜಾಬ್​ ರೈತರು ಈಗ ಮತ್ತೆ ದೆಹಲಿಯತ್ತ ಮುಖ ಮಾಡುತ್ತಿದ್ದಾರೆ. ಬೇಸಿಗೆ ಹಿನ್ನೆಲೆ ದೆಹಲಿಗೆ ತೆರಳಲಿರುವ ಟ್ರ್ಯಾಕ್ಟರ್​ಗಳಿಗೆ ಫ್ಯಾನ್​ಗಳನ್ನು ಅಳವಡಿಸಿದ್ದೇವೆ. ಪ್ರತಿಭಟನಾಕಾರರಿಗೆ ಸೊಳ್ಳೆಗಳ ಕಾಟ ತಪ್ಪಿಸಲು ಸೊಳ್ಳೆ ಪರದೆಗಳನ್ನು ಅಳವಡಿಸಲಿದ್ದೇವೆ. ಕೇಂದ್ರ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ತನಕ ನಮ್ಮ ಈ ಹೋರಾಟ ಮುಂದುವರಿಯುತ್ತದೆ ಎಂದು ಕಿಸಾನ್ ಮಜದೂರ್ ಸಂಘರ್ಷ ಸಮಿತಿ ಸ್ಟೇಟ್​ ಸೆಕ್ರೆಟರಿ ಎಸ್​ಎಸ್​ ಪಂಧೇರ್​ ತಿಳಿಸಿದ್ದಾರೆ.

ಈ ನಡುವೆ ರೈತರ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್​ ತೋಮರ್​, ಕೃಷಿ ಕಾಯ್ದೆಗಳನ್ನ ಸಮರ್ಥಿಸಿಕೊಂಡಿದ್ದಾರೆ. ರೈತರ ಉತ್ಪನ್ನಗಳ ಮಾರಾಟಕ್ಕೆ ಅನುಕೂಲವಾಗುವಂತೆ ಮತ್ತು ಉತ್ತಮ ಆದಾಯವನ್ನು ಪಡೆಯುವ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸಲು ನಾವು ಹೊಸ ಕೃಷಿ ಕಾನೂನುಗಳನ್ನು ತಂದಿದ್ದೇವೆ. ಇದು ಕೃಷಿಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುತ್ತದೆ ಎಂದು ನಾವು ಭಾವಿಸುತ್ತೇವೆ ಎಂದುಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್​ ತೋಮರ್​ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡಿದ್ದಾರೆ.​

ಇದನ್ನೂ ಓದಿ:ಇಂದು ಪ್ರಧಾನಿ ಮೋದಿಗೆ 'ಸೆರಾವೀಕ್‌ ಲೀಡರ್‌ಶಿಪ್' ಪ್ರಶಸ್ತಿ ಪ್ರದಾನ

ABOUT THE AUTHOR

...view details