ಕರ್ನಾಟಕ

karnataka

ETV Bharat / bharat

ಮೋದಿ -ಶಾ ಅಜೇಯರಲ್ಲ ಎಂದು ಬಂಗಾಳ ಫಲಿತಾಂಶ ಸಾಬೀತುಪಡಿಸಿದೆ: ಸಾಮ್ನಾ - ತೃಣಮೂಲ ಕಾಂಗ್ರೆಸ್

ಒಂದೇ ಮಾತಿನಲ್ಲಿ ಹೇಳುವುದಾದರೆ ಬಂಗಾಳದಲ್ಲಿ "ಬಿಜೆಪಿ ಸೋತಿದೆ, ಕೊರೊನಾ ಗೆದ್ದಿದೆ" ಇದು ಬಂಗಾಳ ಸಮೀಕ್ಷೆಯ ಫಲಿತಾಂಶಗಳ ಒಂದು ಸಾಲಿನ ವಿಶ್ಲೇಷಣೆಯಾಗಿದೆ, ಎಂದು ಸಂಪಾದಕೀಯ ಹೇಳಿದೆ.

modi
modi

By

Published : May 3, 2021, 3:06 PM IST

ಮುಂಬೈ: ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಜೇಯರಲ್ಲ ಎಂದು ಸಾಬೀತಾಗಿದೆ ಎಂದು ಶಿವಸೇನೆ ಹೇಳಿದೆ.

ಸೇನಾ ಮುಖವಾಣಿ 'ಸಾಮ್ನಾ'ದ ಸಂಪಾದಕೀಯವು ನಾಲ್ಕು ರಾಜ್ಯಗಳಲ್ಲಿ (ಪಶ್ಚಿಮ ಬಂಗಾಳ, ಅಸ್ಸೋಂ, ತಮಿಳುನಾಡು ಮತ್ತು ಕೇರಳ) ಮತ್ತು ಕೇಂದ್ರ ಪ್ರಾಂತ್ಯ ಪುದುಚೇರಿಯಲ್ಲಿ ನಡೆದ ಚುನಾವಣೆ ಕುರಿತು ಮಾತನಾಡಿದೆ. ಈ ಬಾರಿ ಎಲ್ಲರ ಕಣ್ಣು ಪಶ್ಚಿಮ ಬಂಗಾಳದತ್ತ ಇತ್ತು ಎಂದಿದೆ.

ಕೆರಳಿದ ಕೋವಿಡ್ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವ ಬದಲು, ಪ್ರಧಾನಿ ಮೋದಿ ಸೇರಿದಂತೆ ಇಡೀ ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳದ ಮತದಾನ ರಂಗದಲ್ಲಿ ಮಮತಾ ಬ್ಯಾನರ್ಜಿಯನ್ನು ಸೋಲಿಸಲು ಮುಂದಡಿಯಿಟ್ಟಿತ್ತು, ಎಂದು ಅದು ಹೇಳಿದೆ.

ಆದ್ರೆ ನಿನ್ನೆ ಬ್ಯಾನರ್ಜಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಎಲ್ಲ ಸವಾಲುಗಳನ್ನು ಎದುರಿಸಿ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷವು ಸತತ ಮೂರನೇ ಬಾರಿಗೆ ಭರ್ಜರಿ ಜಯ ಸಾಧಿಸಿತು.

ಚುನಾವಣಾ ಎಲ್ಲಾ ತಂತ್ರಜ್ಞಾನವನ್ನು ತಮ್ಮ ಇತ್ಯರ್ಥಕ್ಕೆ ಮಾಡಿಕೊಂಡಿದ್ದರೂ, ಮೋದಿ - ಶಾ ಅಜೇಯರಲ್ಲ ಎಂದು ನಿನ್ನೆಯ ಫಲಿತಾಂಶಗಳು ಸಾಬೀತುಪಡಿಸಿವೆ, ಎಂದು ಮರಾಠಿ ದಿನಪತ್ರಿಕೆ ಹೇಳಿದೆ.

ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಮತ್ತು ಕಾಂಗ್ರೆಸ್ ಜೊತೆ ಅಧಿಕಾರ ಹಂಚಿಕೊಂಡಿರುವ ಶಿವಸೇನೆ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ, ಆದರೆ, ಬ್ಯಾನರ್ಜಿಗೆ ಬೆಂಬಲವನ್ನು ನೀಡಿತ್ತು.

ಒಂದೇ ಮಾತಿನಲ್ಲಿ ಹೇಳುವುದಾದರೆ ಬಂಗಾಳದಲ್ಲಿ "ಬಿಜೆಪಿ ಸೋತಿದೆ, ಕೊರೊನಾ ಗೆದ್ದಿದೆ" ಇದು ಬಂಗಾಳ ಸಮೀಕ್ಷೆಯ ಫಲಿತಾಂಶಗಳ ಒಂದು ಸಾಲಿನ ವಿಶ್ಲೇಷಣೆಯಾಗಿದೆ, ಎಂದು ಸಂಪಾದಕೀಯ ಹೇಳಿದೆ.

ಪಶ್ಚಿಮ ಬಂಗಾಳವನ್ನು ಗೆಲ್ಲುವ ಏಕೈಕ ಗುರಿಯೊಂದಿಗೆ, ಮೋದಿ ಹಾಗೂ ಷಾ ಚುನಾವಣಾ ಕಣಕ್ಕೆ ಇಳಿದು, ಬೃಹತ್ ರ್ಯಾಲಿಗಳು ಮತ್ತು ರೋಡ್ ಶೋಗಳನ್ನು ನಡೆಸಿದ್ದರು. ಅದು ಎಲ್ಲಾ ಕೋವಿಡ್ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ, ಎಂದು ಸಾಮ್ನಾ ಆರೋಪಿಸಿದೆ.

ಪಶ್ಚಿಮ ಬಂಗಾಳದ ಜನರು ಕೃತಕ ಅಲೆಗೆ ಬಲಿಯಾಗದೆ, ತಮ್ಮದೇ ಆದ ಪ್ರತಿಷ್ಠೆಗಾಗಿ ಒಗ್ಗಟ್ಟಿನಿಂದ ನಿಂತಿದ್ದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸಬೇಕಾಗಿದೆ. ದೇಶವು ಬಂಗಾಳದಿಂದ ಕಲಿಯಬೇಕು, ಎಂದು ಸಂಪಾದಕೀಯದಲ್ಲಿ ತಿಳಿಸಲಾಗಿದೆ.

ABOUT THE AUTHOR

...view details