ಮೇಷ: ಕುಟುಂಬದಲ್ಲಿ ಔತಣಕೂಟಗಳು ನಡೆಯಲಿದ್ದು ಎಲ್ಲರೂ ಆನಂದಿಸಲಿದ್ದಾರೆ. ಈ ವಾರದಲ್ಲಿ ಉದ್ಯೋಗಿಗಳು ಸಾಕಷ್ಟು ಏರುಪೇರು ಕಾಣಲಿದ್ದಾರೆ. ಕೆಲಸದಲ್ಲಿ ಸಾಕಷ್ಟು ಚಟುವಟಿಕೆಗಳು ಇರಲಿವೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ಹಠಾತ್ ಆಗಿ ದೊಡ್ಡ ಪ್ರಮಾಣದ ಲಾಭವನ್ನು ಪಡೆಯಲಿದ್ದಾರೆ. ಇದನ್ನು ಹೂಡಿಕೆ ಮಾಡುವ ಮೂಲಕ ನಿಮ್ಮ ವ್ಯವಹಾರವನ್ನು ನೀವು ಮುಂದಕ್ಕೆ ಕೊಂಡೊಯ್ಯಲಿದ್ದೀರಿ. ಆದರೆ ನಿಮ್ಮ ಪಾಲುದಾರರ ಜೊತೆಗಿನ ನಿಮ್ಮ ಸಂಬಂಧವು ಹದಗೆಡಲಿದೆ. ವಿವಾಹಿತ ಜೋಡಿಗಳು ತಮ್ಮ ಜೀವನ ಸಂಗಾತಿಯ ಬದಲಾದ ವರ್ತನೆಯ ಕಾರಣ ಕೌಟುಂಬಿಕ ಜೀವನದಲ್ಲಿ ಸಮಸ್ಯೆ ಎದುರಿಸಬಹುದು. ನಿಮ್ಮ ಜೀವನ ಸಂಗಾತಿಯು ಕೋಪಗೊಂಡು ನಿಮ್ಮೊಂದಿಗೆ ನೇರವಾಗಿ ಮಾತನಾಡಬಹುದು. ನಿಮ್ಮ ಪ್ರೇಮ ಬದುಕಿನಲ್ಲಿ ಸಾಕಷ್ಟು ಪ್ರಣಯ ಕಾಣಿಸಿಕೊಳ್ಳಲಿದೆ. ವಿದ್ಯಾರ್ಥಿಗಳಿಗೆ ಈ ವಾರವು ಒಳ್ಳೆಯದು. ನೀವು ಅಧ್ಯಯನ ಮತ್ತು ಮೋಜು ಎರಡನ್ನೂ ಅನುಭವಿಸಲಿದ್ದು ಕಲಿಯುವ ಇಚ್ಛೆಯನ್ನು ವ್ಯಕ್ತಪಡಿಸಲಿದ್ದೀರಿ. ಇದರಿಂದ ಅಧ್ಯಯನದಲ್ಲಿ ಉತ್ತಮ ಫಲಿತಾಂಶ ದೊರೆಯಲಿದೆ. ವಾರದ ಮೊದಲ ಮೂರು ದಿನಗಳು ಪ್ರಯಾಣಿಸಲು ಅತ್ಯುತ್ತಮ.
ವೃಷಭ:ವಾರದ ಆರಂಭದಲ್ಲಿ ಸಣ್ಣ ಮಟ್ಟಿನ ಪ್ರಯಾಣ ಮಾಡಬೇಕಾದೀತು. ನೀವು ಸಾಕಷ್ಟು ಪ್ರಯತ್ನ ಮಾಡಲಿದ್ದು, ನಿಮ್ಮ ಮನೆಯ ಸೌಂದರ್ಯವನ್ನು ವೃದ್ಧಿಸಲು ತುಂಬಾ ಹಣವನ್ನು ಖರ್ಚು ಮಾಡಲಿದ್ದೀರಿ. ಮನೆಯ ವೆಚ್ಚಕ್ಕಾಗಿ ಸಾಕಷ್ಟು ಹಣ ಖರ್ಚಾದರೂ ನಿಮಗೆ ಇದು ಸಂತಸ ತಂದು ಕೊಡಲಿದೆ. ಉದ್ಯೋಗದಲ್ಲಿ ನಿಮ್ಮ ಸ್ಥಾನವು ಸದೃಢವಾಗಿರಲಿದ್ದು ಕಠಿಣ ಶ್ರಮದ ಮೂಲಕ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ಈ ವಾರದಲ್ಲಿ ವ್ಯಾಪಾರೋದ್ಯಮಿಗಳು ಸಾಕಷ್ಟು ಏರುಪೇರು ಕಾಣಲಿದ್ದಾರೆ. ಕೆಲವು ಎದುರಾಳಿಗಳು ನಿಮಗೆ ಸಮಸ್ಯೆಯನ್ನುಂಟು ಮಾಡಲು ಯತ್ನಿಸಲಿದ್ದಾರೆ. ನಿಮ್ಮ ಜೀವನ ಸಂಗಾತಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಅವರೊಂದಿಗೆ ನಿಮ್ಮ ಸಂಬಂಧವು ಹಳಸುವ ಸಾಧ್ಯತೆಯೂ ಇದ್ದು ಎಚ್ಚರಿಕೆಯಿಂದ ಹೆಜ್ಜೆ ಇಡಿ. ವೈಯಕ್ತಿಕ ಬದುಕಿನಲ್ಲಿ, ಪ್ರೇಮಿಯೊಂದಿಗಿನ ನಿಮ್ಮ ಸಂಬಂಧವು ಗಟ್ಟಿಗೊಳ್ಳಲಿದೆ. ತಪ್ಪು ಗ್ರಹಿಕೆಗಳು ಮತ್ತು ಸಂಘರ್ಷ ದೂರಗೊಳ್ಳಲಿವೆ. ವಿದ್ಯಾರ್ಥಿಗಳಿಗೆ ಇದು ಸಕಾಲ. ನಿಮ್ಮ ಏಕಾಗ್ರತೆಯ ಶಕ್ತಿಯು ಹೆಚ್ಚಲಿದ್ದು, ಸ್ಮರಣ ಶಕ್ತಿಯು ಮೊನಚಾಗಲಿದೆ. ವಾರದ ಆರಂಭಿಕ ದಿನಗಳು ಪ್ರಯಾಣಿಸಲು ಅನುಕೂಲಕರ.
ಮಿಥುನ:ಈ ವಾರವು ನಿಮ್ಮ ಕುಟುಂಬದಲ್ಲಿ ಸಂತಸ ತರಲಿದೆ. ನಿಮ್ಮ ಕುಟುಂಬದ ಸದಸ್ಯರ ಬೆಂಬಲದ ಹೆಚ್ಚಳದ ಕಾರಣ, ಮನೆಯ ಸನ್ನಿವೇಶದಲ್ಲಿ ಬದಲಾವಣೆ ಬರಲಿದ್ದು, ಎಲ್ಲರೂ ಪರಸ್ಪರ ಪ್ರೀತಿ ತೋರಲಿದ್ದಾರೆ. ನಿಮ್ಮ ಗೆಳೆಯರ ಬೆಂಬಲವನ್ನು ಪಡೆಯಲಿದ್ದೀರಿ. ಒಂದು ನಿರ್ದಿಷ್ಟ ಗೆಳೆಯ/ಗೆಳತಿಯತ್ತ ಮನಸ್ಸು ಆಕರ್ಷಣೆಗೊಳ್ಳುವ ಸಾಧ್ಯತೆ ಇದೆ. ಈ ವಾರವು ಪ್ರೇಮ ಜೀವನಕ್ಕೆ ದುರ್ಬಲವೆನಿಸಲಿದೆ. ಸಂಘರ್ಷ ಉಂಟಾಗುವ ಸಾಧ್ಯತೆ ಇದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಒತ್ತಡದಿಂದ ಕೂಡಿರಬಹುದು. ಆದರೆ ಜೀವನ ಸಂಗಾತಿಯು ಏನಾದರೂ ದೊಡ್ಡ ಲಾಭ ಗಳಿಸಬಹುದು. ವ್ಯವಹಾರ ನಡೆಸಲು ಈ ಸಮಯ ಅನುಕೂಲಕರವಾಗಿದ್ದು, ನೀವು ಯಶಸ್ಸು ಗಳಿಸಲಿದ್ದೀರಿ. ಕೆಲಸದಲ್ಲಿ ಒಂದಷ್ಟು ಅಡಚಣೆಗಳ ಮೂಲಕ ಮುಂದೆ ಸಾಗಲಿದ್ದೀರಿ. ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಆಹಾರಕ್ರಮಕ್ಕೆ ಗಮನ ಹರಿಸುವುದು ಅಗತ್ಯ. ವಾರದ ಆರಂಭಿಕ ಮತ್ತು ಮಧ್ಯದ ದಿನಗಳು ಪ್ರಯಾಣಿಸಲು ಉತ್ತಮ. ಶಿಕ್ಷಣದಲ್ಲಿ ಕೆಲವೊಂದು ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಇದಕ್ಕೆ ಗಮನ ನೀಡಿರಿ.
ಕರ್ಕಾಟಕ:ವಾರದ ಆರಂಭದಲ್ಲಿ ನಿಮ್ಮ ಮನಸ್ಸು ಸಾಕಷ್ಟು ಭಾವನಾತ್ಮಕವಾಗಿ ಪ್ರತಿಕ್ರಿಯಿಸಲಿದ್ದು, ನಿಮ್ಮ ಪ್ರೇಮಿಯನ್ನು ನೆನೆದು ನೀವು ಕಣ್ಣೀರು ಸುರಿಸುವ ಸಾಧ್ಯತೆ ಇದೆ. ಕೆಲವೊಮ್ಮೆ ನಿಮ್ಮ ಜೀವನ ಸಂಗಾತಿಯತ್ತ ನೀವು ಭಾವನಾತ್ಮಕ ವರ್ತನೆ ತೋರಲಿದ್ದು, ಅವರಿಗೆ ಕರುಣೆ ವ್ಯಕ್ತಪಡಿಸಲಿದ್ದೀರಿ. ಕುಟುಂಬದೊಳಗೆ ನಿಮ್ಮ ತಾಯಿಯ ಆರೋಗ್ಯ ಕೆಡಬಹುದು. ನೀವು ಸಹೋದರರು ಮತ್ತು ಸಹೋದರಿಯರ ಬೆಂಬಲವನ್ನು ಪಡೆಯಲಿದ್ದೀರಿ. ನಿಮ್ಮ ಆದಾಯವು ಚೆನ್ನಾಗಿರಲಿದೆ. ಮನೆಯ ಉತ್ತಮ ಆಹಾರ ದೊರೆಯಲಿದೆ. ಕೆಲಸದಲ್ಲಿ ನಿಮ್ಮ ಸ್ಥಾನವು ಚೆನ್ನಾಗಿರಲಿದೆ. ವ್ಯಾಪಾರೋದ್ಯಮಿಗಳಿಗೆ ಇದು ಸಕಾಲ. ಕಠಿಣ ಶ್ರಮವನ್ನು ಮುಂದುವರಿಸಿ. ಖಂಡಿತವಾಗಿಯೂ ನಿಮಗೆ ಯಶಸ್ಸು ದೊರೆಯಲಿದೆ. ನಿಮ್ಮ ಆತ್ಮವಿಶ್ವಾಸವು ಉತ್ತುಂಗದಲ್ಲಿರಲಿದ್ದು ನಿಮಗೆ ಪ್ರಯೋಜನವಾಗಲಿದೆ. ನಿಮ್ಮ ಬುದ್ಧಿಮತ್ತೆಯ ಮೂಲಕ, ನಿಮ್ಮ ಪ್ರೇಮಿಗಾಗಿ ಏನಾದರೂ ಹೊಸತನ್ನು ನೀವು ಯೋಜಿಸಲಿದ್ದೀರಿ ಹಾಗೂ ನೀವು ಅವರನ್ನು ಎಷ್ಟು ನೆಚ್ಚಿಕೊಂಡಿದ್ದೀರಿ ಎಂಬುದನ್ನು ತೋರಿಸಿ ಕೊಡಲಿದ್ದೀರಿ. ವಿದ್ಯಾರ್ಥಿಗಳಿಗೆ ಯಾರಾದರೂ ಹೊಸ ಜನರ ಅಗತ್ಯ ಬೀಳಬಹುದು. ಅವರು ಪಠ್ಯಕ್ರಮವನ್ನು ಪೂರ್ಣಗೊಳಿಸಲು ಸಹಾಯ ಮಾಡಲಿದ್ದಾರೆ.
ಸಿಂಹ:ಏನಾದರೂ ವಿಷಯದ ಕುರಿತು ನೀವು ಉದ್ವೇಗಕ್ಕೆ ಒಳಗಾಗಲಿದ್ದು ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ನಿಮ್ಮ ಆರೋಗ್ಯವನ್ನು ಕೆಡಿಸುವ ಯಾವುದೇ ಕೆಲಸವನ್ನು ಮಾಡಬೇಡಿ. ನೀವು ಪ್ರಯಾಣಿಸಲು ಇಚ್ಛಿಸುವುದಾದರೆ, ವಾರದ ಕೊನೆಯ ದಿನ ಉತ್ತಮ. ನಿಮ್ಮ ಜೊತೆಗೆ ಕೆಲಸ ಮಾಡುವವರು ನಿಮ್ಮನ್ನು ಬೆಂಬಲಿಸಲಿದ್ದು, ಇದರಿಂದ ನಿಮಗೆ ಲಾಭ ದೊರೆಯಲಿದೆ. ನೀವು ಕ್ರೀಡಾಳುವಾಗಿದ್ದರೆ ಈ ವಾರದಲ್ಲಿ ಉತ್ತುಂಗ ತಲುಪಲಿದ್ದೀರಿ. ಆದಾಯದಲ್ಲಿ ಸುಧಾರಣೆ ಉಂಟಾಗಲಿದ್ದು, ಖರ್ಚು ವೆಚ್ಚಗಳಲ್ಲಿ ಇಳಿಕೆಯಾಗಲಿದೆ. ವೈವಾಹಿಕ ಜೋಡಿಗಳ ಮನಸ್ಸಿನಲ್ಲಿ ಪ್ರೀತಿ ಮತ್ತು ಪ್ರಣಯವು ಬಲವಾಗಿ ನೆಲೆಯೂರಲಿದೆ. ನಿಮ್ಮ ಗೆಳೆಯರ ಬೆಂಬಲವನ್ನು ಪಡೆಯಲಿದ್ದೀರಿ. ನಿಮ್ಮ ಸಂಗಾತಿಗೆ ನಿಮ್ಮ ಭಾವನೆಯನ್ನು ನೀವು ವ್ಯಕ್ತಪಡಿಸಲಿದ್ದೀರಿ. ಉದ್ಯೋಗದಲ್ಲಿರುವವರು ತಮ್ಮ ಕೆಲಸದಲ್ಲಿ ಸಾಕಷ್ಟು ಸದೃಢತೆ ತೋರಲಿದ್ದಾರೆ. ನಿಮ್ಮ ಸಮರ್ಪಣಾಭಾವ ಮತ್ತು ದಕ್ಷತೆಯು ನಿಮ್ಮ ಮುನ್ನಡೆಗೆ ಕಾರಣವೆನಿಸಲಿದೆ. ನೀವು ವಿದ್ಯಾರ್ಥಿಯಾಗಿದ್ದರೆ ಈ ವಾರದ ಆರಂಭಿಕ ಮತ್ತು ಮಧ್ಯದ ದಿನಗಳು ಹೆಚ್ಚು ಮಂಗಳದಾಯಕ ಎನಿಸಲಿವೆ. ಈ ಸಂದರ್ಭದಲ್ಲಿ ಅಧ್ಯಯನವನ್ನು ನೀವು ಆನಂದಿಸಲಿದ್ದೀರಿ.
ಕನ್ಯಾ:ಪ್ರಯತ್ನಗಳಿಗೆ ತಕ್ಕುದಾದ ಫಲ ದೊರೆಯಲಿದ್ದು ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ವಾರದ ಆರಂಭದಲ್ಲಿ ನೀವು ಏನಾದರೂ ದೊಡ್ಡ ಲಾಭವನ್ನು ಪಡೆಯಬಹುದು. ನಿಮ್ಮ ಯೋಚನೆ ಮತ್ತು ಸಾಮರ್ಥ್ಯವನ್ನು ಅರಿಯುವ ಶಕ್ತಿಯಲ್ಲಿ ಬದಲಾವಣೆ ಉಂಟಾಗಬಹುದು. ಅಲ್ಲದೆ ಪ್ರತಿ ಕೆಲಸವನ್ನು ನೀವು ಜಾಣ್ಮೆಯಿಂದ ನಿಭಾಯಿಸಲಿದ್ದೀರಿ. ಹೀಗಾಗಿ ವ್ಯವಹಾರದಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ಆದರೆ ಆಲಸ್ಯದ ಕಾರಣ ವ್ಯವಹಾರದಲ್ಲಿ ನಿಮಗೆ ಹಿನ್ನಡೆಯಾಗಿದ್ದು, ಈ ಆಲಸ್ಯದಿಂದ ನೀವು ಹೊರಬರಲಿದ್ದೀರಿ. ಈ ಕುರಿತು ನೀವು ವಾರದಾದ್ಯಂತ ಕಾಳಜಿ ವಹಿಸಬೇಕಾದೀತು. ಸರಿಯಾದ ಸಂದರ್ಭದಲ್ಲಿ ಆಹಾರವನ್ನು ಸೇವಿಸುವುದು ಅಗತ್ಯ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಸಂತಸ ಅನುಭವಿಸಲಿದ್ದಾರೆ. ನಿಮ್ಮ ಜೀವನ ಸಂಗಾತಿಯ ಜೊತೆಗಿನ ಬಾಂಧವ್ಯವು ಚೆನ್ನಾಗಿರಲಿದೆ. ಅಲ್ಲದೆ ಪ್ರೇಮ ಜೀವನದಲ್ಲಿ ಪರಸ್ಪರ ಅನ್ಯೋನ್ಯತೆಯನ್ನು ಸಾಧಿಸಲಿದ್ದೀರಿ. ಮಾಡಲಾದ ಪ್ರಯತ್ನಗಳಿಗೆ ಯಶಸ್ಸು ದೊರೆಯಲಿದೆ. ನಿಮ್ಮ ಎದುರಾಳಿಗಳನ್ನು ನೀವು ಮಣಿಸಲಿದ್ದೀದಿ. ಅಲ್ಲದೆ ಎಲ್ಲಾದರೂ ದೂರದ ಸ್ಥಳಕ್ಕೆ ಹೋಗುವ ಕುರಿತು ನಿಮ್ಮ ಪ್ರೇಮಿಯೊಂದಿಗೆ ಮಾತನಾಡಲಿದ್ದೀರಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಮೇಲೆ ಚೆನ್ನಾಗಿ ಗಮನ ನೀಡಬೇಕಾಗುತ್ತದೆ.