ಕರ್ನಾಟಕ

karnataka

ETV Bharat / bharat

ಗನ್​ VS ಬಿಲ್ಲು-ಬಾಣ... ಬ್ರಿಟಿಷರ್ ಎದೆ ನಡುಗಿಸಿದ್ದ ಬುಡಕಟ್ಟು ಜನರ ಆಯುಧಗಳು!

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬುಡಕಟ್ಟು ಜನಾಂಗ ತಮ್ಮ ಸಾಂಪ್ರದಾಯಿಕ ಆಯುಧಗಳಿಂದ ಬ್ರಿಟಿಷರಿಗೆ ಕಬ್ಬಿಣದ ಕಡಲೆಯಾಗಿದ್ದರು. ಗನ್, ಕ್ಯಾನಾನ್​ಗಿಂತ ಇವರ ಬಿಲ್ಲು, ಬಾಣಗಳೇ ಇವರಿಗೆ ಶ್ರೇಷ್ಠ

ಬ್ರಿಟಿಷರ್ ಎದೆ ನಡುಗಿಸಿದ್ದ ಬುಡಕಟ್ಟು ಜನರ ಆಯುಧಗಳು
ಬ್ರಿಟಿಷರ್ ಎದೆ ನಡುಗಿಸಿದ್ದ ಬುಡಕಟ್ಟು ಜನರ ಆಯುಧಗಳು

By

Published : Aug 29, 2021, 4:22 AM IST

ಬ್ರಿಟಿಷ್ ವಸಾಹತುಶಾಹಿ ಅಂದ್ರೆನೇ ದೌರ್ಜನ್ಯ, ದಬ್ಬಾಳಿಕೆ ಮತ್ತು ಹಿಂಸಾಚಾರ. ಅಂತೆಯೇ ಇಂಗ್ಲೀಷರ್ ವಿರುದ್ಧ ದೇಶದಲ್ಲಿ ಆಗಗ ದಂಗೆಗಳು, ಹೋರಾಟಗಳು ಸಾಮಾನ್ಯವಾಗಿದ್ದವು. ಆದ್ರೆ ಅವೆಲ್ಲವನ್ನೂ ಬ್ರಿಟಿಷರ್ ಗನ್​ಗಳು ಸೋಲಿಸುತ್ತಿದ್ದವು. ಮೊದಲನೇ ಸ್ವಾತಂತ್ರ್ಯ ಸಂಗ್ರಾಮ ಸೇರಿ ಹಲವು ದಂಗೆಗಳನ್ನು ಹತ್ತಿಕ್ಕಿದ್ದ ಬ್ರಿಟಿಷರಿಗೆ ಜಾರ್ಖಂಡ್ ಬುಡಕಟ್ಟು ಜನರ ಬಂಡಾಯ ಸೋಲಿಸಲು ಆಗಲಿಲ್ಲ. ಇಂಗ್ಲಿಷರ ಬಳಿ ಗನ್, ಕ್ಯಾನಾನ್​ ಇದ್ದರೂ ಕೂಡ ಬುಡಕಟ್ಟು ಜನ ತಮ್ಮ ಬಳಿ ಇದ್ದ ಬಿಲ್ಲು, ಬಾಣದಂತಹ ಅಸ್ತ್ರಗಳನ್ನು ಉಪಯೋಗಿಸುವುದರಲ್ಲಿ ಪರಿಣತರು. ಜೊತೆಗೆ ಇವರ ಗೆರಿಲ್ಲಾ ಯುದ್ಧದ ಕಲೆ ನೋಡಿ ಆಂಗ್ಲರು ತಮ್ಮ ಶಸ್ತ್ರಾಸ್ತ್ರಗಳನ್ನು ಕೈಬಿಟ್ಟಿದ್ದರು. ಆ ಕಾಲದಲ್ಲೂ ವಿಭಿನ್ನವಾಗಿ ಹೋರಾಡಿದ ಜಾರ್ಖಂಡ್ ಬುಡಕಟ್ಟು ಜನರು, ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿಸಿದ್ದರು ಎಂಬುದು ಸತ್ಯ.

ಬುಡಕಟ್ಟು ಜನಾಂಗದವರಿಗೆ, ಬಿಲ್ಲು-ಬಾಣದಂತಹ ಆಯುಧಗಳು ನಂಬಿಕೆಯ ವಿಷಯ. ಏಕೆಂದರೆ ಈ ಆಯುಧಗಳು ಅವರಿಗೆ ವಿಶೇಷ ಶಕ್ತಿ ನೀಡುತ್ತವಂತೆ. ಜೊತೆಗೆ ತಮ್ಮ ರಕ್ಷಿಸಿಕೊಳ್ಳಲು ಚಿಕ್ಕ ವಯಸ್ಸಿನಿಂದಲೇ ಬಿಲ್ಲು, ಬಾಣ, ಈಟಿ, ಕೋಲು, ತುಪ್ಪಳ ಮತ್ತು ಅನೇಕ ಸಾಂಪ್ರದಾಯಿಕ ಆಯುಧಗಳ ಬಳಕೆಯಲ್ಲಿ ಮತ್ತು ಯುದ್ಧ ಕಲೆಗಳಲ್ಲಿ ಪರಿಣತರಾಗಿದ್ದರು.

ಗನ್​ VS ಬಿಲ್ಲು-ಬಾಣ... ಬ್ರಿಟಿಷರ್ ಎದೆ ನಡುಗಿಸಿದ್ದ ಬುಡಕಟ್ಟು ಜನರ ಆಯುಧಗಳು

ಬುಡಕಟ್ಟು ಜನರು ತಮ್ಮ ಆಯುಧಗಳನ್ನು ಇನ್ನಷ್ಟು ಡೆಡ್ಲಿ ಮಾಡಿಕೊಳ್ಳಲು, ವಿಶೇಷ ಗಿಡಮೂಲಿಕೆಗಳೊಂದಿಗೆ ತಯಾರಿಸಿದ ಲೇಪನ ಮಾಡುತ್ತಿದ್ದರು. ಈ ಲೇಪನ ಶತ್ರುಗಳಿಗೆ ಮಾರಕವಂತೆ.

ಗೆರಿಲ್ಲಾ ಪರಿಣತಿ:ಬುಡಕಟ್ಟು ಜನರ ಪರಣತಿಗಳಲ್ಲಿ ಇದು ಒಂದು. ಅರಣ್ಯದಲ್ಲಿ ಅಡಗಿಸಿಟ್ಟುಕೊಂಡು ಶತ್ರುಗಳ ಬಂದ್ಮೇಲೆ ಒಟ್ಟಿಗೆ ಅಟ್ಯಾಕ್ ಮಾಡುವುದು ಇವರ ಸ್ಟ್ರೆಟರ್ಜಿ. ಇನ್ನು ಈ ವೇಳೆ ಯಾರಾದ್ರೂ ಗಾಯಗೊಂಡರೂ ತಾವೇ ಗಿಡಮೂಲಿಕೆಗಳ ಔಷಧಿ ಮಾಡಿ ಕೊಡುತ್ತಿದ್ದರು. ಇದು ಬ್ರಿಟಿಷರಿಗೆ ಭಯ ಮೂಡಿಸಿತ್ತು.

ಈ ಸಮುದಾಯದವರು ವಾಸಿಸುವ ಸ್ಥಳದಲ್ಲಿ ಬಿದಿರು, ಕಬ್ಬಿಣದಂತಹ ವಸ್ತುಗಳು ಹೇರಳವಾಗಿ ಸಿಗುವುದರಿಂದ ಅದರಿಂದಲೇ ಆಯುಧ ಮಾಡಿ, ಬಳಸುವ ಕಲೆ ಕರಗತವಾಗಿರುತ್ತದೆ.

ಸ್ವಾತಂತ್ರ್ಯ ಹೋರಾಟದ ಮೊದಲ ಹುತಾತ್ಮರಾದ ಜಬ್ರಾ ಪಹಾರಿಯಾದಿಂದ ಸಿಡೋ ಕನ್ಹೋ ಮತ್ತು ನೀಲಾಬಂರ್, ಪೀತಾಂಬರ್​ದಿಂದ ಬಿರ್ಸಾ ಮುಂಡಾ ಇಂತಹ ಆಯುಧಗಳನ್ನು ಬಳಸುವುದರಲ್ಲಿ ಎತ್ತಿದ ಕೈ. ಈ ಸಮುದಾಯ ಸ್ವಾತಂತ್ರ್ಯಕ್ಕಾಗಿ ಮಾತ್ರವಲ್ಲ, ದೇವರಂತೆ ತಿಳಿದುಕೊಂಡಿರುವ ಜಲ-ನೆಲ-ಕಾಡನ್ನು ಉಳಿಸಿಕೊಳ್ಳಲು ಹೋರಾಡಿದ್ದಾರೆ.

ABOUT THE AUTHOR

...view details