ನಾಸಿಕ್(ಮಹಾರಾಷ್ಟ್ರ):ಬೇಸಿಗೆ ಬಿಸಿ ಜೋರಾಗಿದೆ. ದೇಶದ ಕೆಲವೊಂದು ಪ್ರದೇಶಗಳಲ್ಲಿ ಅಂತರ್ಜಲ ಬತ್ತಿ ಹೋಗಿರುವ ಕಾರಣ ಜನರು ನಿತ್ಯ ನೀರಿಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಮಹಾರಾಷ್ಟ್ರದ ನಾಸಿಕ್ನ ರೋಹಿಲೆ ಗ್ರಾಮದಲ್ಲಿ ನೀರಿನ ಕೊರತೆ ಉಂಟಾಗಿದ್ದು, ಮಹಿಳೆಯರು ಪ್ರತಿದಿನ ತಮ್ಮ ಪ್ರಾಣ ಪಣಕ್ಕಿಡುತ್ತಿದ್ದಾರೆ.
ಗ್ರಾಮದಲ್ಲಿ ಯಾವುದೇ ರೀತಿಯ ನೀರಿನ ಸೌಲಭ್ಯ ಇಲ್ಲದ ಕಾರಣ ಪ್ರತಿ ದಿನ 2 ಕಿಲೋ ಮೀಟರ್ ದೂರ ಹೋಗಿ ಬಾವಿ ನೀರು ತರುವಂತಹ ದುಸ್ಥಿತಿಯಿದೆ. ಅದಕ್ಕಾಗಿ ಬಾವಿಯೊಳಗಿಳಿದು ನೀರು ತುಂಬುವುದು ಅನಿವಾರ್ಯವಾಗಿದೆ. ಈ ವೇಳೆ ಕೆಲವೊಮ್ಮೆ ಮಹಿಳೆಯರು ಕಾಲು ಜಾರಿ ಅದರೊಳಗೆ ಬಿದ್ದಿರುವ ಅನೇಕ ನಿದರ್ಶನಗಳಿವೆ. ಆದರೆ, ಪ್ರತಿದಿನ ನೀರು ಹೊತ್ತು ತರುವುದು ಅನಿವಾರ್ಯವಾಗಿದೆ.