ಕರ್ನಾಟಕ

karnataka

ETV Bharat / bharat

ಬಂಜಾರ ಹಿಲ್ಸ್​​ನಲ್ಲಿ ಯುವತಿ ಮೇಲೆ ಅತ್ಯಾಚಾರ: ಆರೋಪಿ ವಶಕ್ಕೆ - ಈಟಿವಿ ಭಾರತ ಕನ್ನಡ

ಬಂಜಾರ ಹಿಲ್ಸ್​​ನಲ್ಲಿ ಯುವತಿ ಮೇಲೆ ಅತ್ಯಾಚಾರ ನಡೆದಿದೆ. ಪ್ರಕರಣ ಸಂಬಂಧ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

woman rape case
ಸಾಂದರ್ಭಿಕ ಚಿತ್ರ

By

Published : Aug 8, 2022, 11:05 AM IST

Updated : Aug 8, 2022, 11:12 AM IST

ಹೈದರಾಬಾದ್​(ತೆಲಂಗಾಣ):ಜುಬಿಲಿ ಹಿಲ್ಸ್‌ ಅತ್ಯಾಚಾರ ಪ್ರಕರಣ ಮಾಸುವ ಮುನ್ನವೇ ಬಂಜಾರ ಹಿಲ್ಸ್​​ನಲ್ಲಿ ಮತ್ತೊಂದು ಅತ್ಯಾಚಾರ ಘಟನೆ ನಡೆದಿದೆ. ಯುವತಿಯೊಬ್ಬರನ್ನು ಕೊಠಡಿಯೊಂದರಲ್ಲಿ ಕೂಡಿ ಹಾಕಿ ವಾಚ್​​​​​ಮ್ಯಾನ್​ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ . ಆ.4 ರಂದು ನಡೆದಿರುವ ಈ ದುಷ್ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.

ಬಂಜಾರಾ ಹಿಲ್ಸ್‌ನ ಕೊಳೆಗೇರಿಯ ಯುವತಿ ಮೇಲೆ ಅದೇ ಪ್ರದೇಶದಲ್ಲಿ ಸೆಕ್ಯುರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದ ಚಿನ್ಮಯಿ ಸೈಕ್ಯ (22) ಎಂಬಾತ ಯಾರೂ ಇಲ್ಲದ ವೇಳೆ ಅವರ ಕೊಠಡಿಗೆ ಬೀಗ ಹಾಕಿ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗ್ತಿದೆ. ಬಳಿಕ ವಿಚಾರವನ್ನು ಹೊರಗೆ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನಂತೆ.

ಈ ದುಷ್ಕೃತ್ಯವನ್ನು ಅರಗಿಸಿಕೊಳ್ಳದ ಯುವತಿ ತನ್ನ ಸ್ನೇಹಿತೆಗೆ ತಾನು ಸಾಯಬೇಕೆಂದು ಸಂದೇಶ ಕಳುಹಿಸಿದ್ದಳು. ಈ ವಿಚಾರವನ್ನು ಸಂತ್ರಸ್ತೆಯ ಸಹೋದರಿಗೆ ಹೇಳಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸಂತ್ರಸ್ತೆಯ ಸಹೋದರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಬಂಜಾರ ಹಿಲ್ಸ್ ಸಿಐ ಎಂ.ನರೇಂದರ್ ತಿಳಿಸಿದ್ದಾರೆ.

ಇದನ್ನೂ ಓದಿ:ಮಹಿಳೆಯರ ಮುಂದೆ ವ್ಯಕ್ತಿ ಅಶ್ಲೀಲ ವರ್ತನೆ: ಖಾಸಗಿ ಅಂಗಕ್ಕೆ ಬೆಂಕಿ ಹಚ್ಚಿದ ಜನರು!

Last Updated : Aug 8, 2022, 11:12 AM IST

ABOUT THE AUTHOR

...view details