ಕರ್ನಾಟಕ

karnataka

ETV Bharat / bharat

ನೋಡಿ: ಚಿಕ್ಕಮ್ಮನಿಗೆ ಬಾಯ್​ ಹೇಳಲು ಏರ್‌ಪೋರ್ಟ್ ಸೆಕ್ಯುರಿಟಿ ಅನುಮತಿ ಕೇಳಿದ ಪುಟಾಣಿ - ವಿಡಿಯೋ ವೈರಲ್​

ವಿಮಾನ ನಿಲ್ದಾಣದ ಅಧಿಕಾರಿ ಬಳಿ ಅನುಮತಿ ಪಡೆದು ಪುಟ್ಟ ಮಗುವೊಂದು ತನ್ನ ಚಿಕ್ಕಮ್ಮನನ್ನು ಬೀಳ್ಕೊಟ್ಟ ಕುತೂಹಲಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಡಿಯೋ ವೈರಲ್​
ವಿಡಿಯೋ ವೈರಲ್​

By

Published : Oct 17, 2021, 8:52 AM IST

ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಬಂದ ಪುಟಾಣಿಯೊಂದು ತನ್ನ ಚಿಕ್ಕಮ್ಮನನ್ನು ಬೀಳ್ಕೊಡಲು ವಿಮಾನ ನಿಲ್ದಾಣದ ಅಧಿಕಾರಿಗಳಿಂದ ಅನುಮತಿ ಪಡೆದ ವಿಡಿಯೋ ವೈರಲ್​ ಆಗಿದೆ.

ಏರ್‌ಪೋರ್ಟ್ ಸೆಕ್ಯುರಿಟಿ ನಿಂತಿರುವ ಕಡೆಗೆ ಬಂದಿರುವ ಹೆಣ್ಣು ಮಗು, 'ನಾನು ನನ್ನ ಚಿಕ್ಕಮ್ಮನಿಗೆ ಬಾಯ್​ ಹೇಳಬೇಕು' ಎಂದು ಅನುಮತಿ ಕೇಳುತ್ತಾಳೆ. ಇದಕ್ಕೆ ಸೆಕ್ಯುರಿಟಿ ತಕ್ಷಣ ಒಪ್ಪಿಗೆ ಸೂಚಿಸಿದ ನಂತರ, ಮಗು ಓಡಿ ಹೋಗಿ ಚಿಕ್ಕಮ್ಮನನ್ನು ತನ್ನ ತೋಳುಗಳಲ್ಲಿ ತಬ್ಬಿಕೊಳ್ಳುತ್ತದೆ.

ಮಕ್ಕಳ ಮುಗ್ಧತೆಯನ್ನು ನೋಡಿ ನಾವು ದೇವರಿಗೆ ಹೋಲಿಸುತ್ತೇವೆ. ಈ ವಿಡಿಯೋದಲ್ಲಿ ಮಗುವಿನ ನಿಷ್ಕಲ್ಮಶ ಮನಸ್ಸು ಖುಷಿಕೊಡುತ್ತದೆ. ಅಪರೂಪದ ವಿಡಿಯೋವನ್ನು 6 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details