ಕರ್ನಾಟಕ

karnataka

ETV Bharat / bharat

ಗುಟ್ಕಾ ತಿಂದು ಆಸ್ಪತ್ರೆ ಮುಂಭಾಗದಲ್ಲಿ ಉಗುಳಿದ ವ್ಯಕ್ತಿ: ಆತನ ಕೈಯಿಂದಲೇ ಸ್ವಚ್ಛಗೊಳಿಸಿದ ಜಿಲ್ಲಾಧಿಕಾರಿ

ಗುಟ್ಕಾ ಜಗಿದು ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಬೇಜವಾಬ್ದಾರಿಯಿಂದ ಉಗಿದ ವ್ಯಕ್ತಿಯೋರ್ವನಿಗೆ ಜಿಲ್ಲಾಧಿಕಾರಿ ವಿಶೇಷವಾದ ಶಿಕ್ಷೆ ನೀಡಿ ಬುದ್ದಿ ಹೇಳಿದರು.

Dindori Collector
Dindori Collector

By

Published : Sep 15, 2021, 4:30 PM IST

Updated : Sep 15, 2021, 5:52 PM IST

ದಿಂಡೋರಿ(ಮಧ್ಯಪ್ರದೇಶ): ಕೊರೊನಾದೊಂದಿಗೆ ಕಾಲ ದೂಡುತ್ತಿರುವ ಇಂಥ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಆರೋಗ್ಯ ಇಲಾಖೆಗಳು ಅಗತ್ಯ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡುತ್ತಿವೆ. ಜನರು ತಮ್ಮ ಸುತ್ತಮುತ್ತ ಶುಚಿತ್ವಕ್ಕೆ ಹೆಚ್ಚಿನ ಮಹತ್ವ ನೀಡಬೇಕಿದ್ದು, ರಾಜಾರೋಷವಾಗಿ ಕಂಡಲ್ಲಿ ಉಗುಳುವ ಹಾಗಿಲ್ಲ. ಒಂದುವೇಳೆ ಇದೇ ರೀತಿ ಕೆಟ್ಟ ಚಾಳಿ ಮುಂದುವರೆಸಿದರೆ ಅಂಥವರ ಮೇಲೆ ದಂಡ ವಿಧಿಸಿರುವ ಅನೇಕ ಘಟನೆಗಳು ಈಗಾಗಲೇ ನಡೆದಿವೆ. ಇದೀಗ ಅಂಥದ್ದೇ ಹೊಸ ಪ್ರಕರಣ ಮಧ್ಯಪ್ರದೇಶದ ದಿಂಡೋರಿಯಲ್ಲಿ ನಡೆಯಿತು.

ಗುಟ್ಕಾ ತಿಂದು ಆಸ್ಪತ್ರೆ ಮುಂಭಾಗದಲ್ಲಿ ಉಗುಳಿದ ವ್ಯಕ್ತಿ

ದಿಂಡೋರಿ ಜಿಲ್ಲಾಧಿಕಾರಿ ರತ್ನಾಕರ್​ ಜಾ ಪರಿಶೀಲನೆಗೆಂದು ದಿಢೀರ್​​ ಆಗಿ ಸರ್ಕಾರಿ ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಆಸ್ಪತ್ರೆಯ ಆವರಣದಲ್ಲಿ ಬೈಕ್​ ಮೇಲೆ ತೆರಳುತ್ತಿದ್ದ ಯುವಕನೋರ್ವ ಗುಟ್ಕಾ ತಿಂದು ರಸ್ತೆಗೆ ಉಗುಳಿದ್ದಾನೆ. ಇದನ್ನು ನೋಡಿರುವ ಜಿಲ್ಲಾಧಿಕಾರಿ ಆಕ್ರೋಶಗೊಂಡರು.

ಇದನ್ನೂ ಓದಿ: ಐಸಿಸಿ ಟಿ-20 ವಿಶ್ವಕಪ್​ ಬಳಿಕ ರವಿಶಾಸ್ತ್ರಿ ರಾಜೀನಾಮೆ ಖಚಿತ: ಹೊಸ ಕೋಚ್ ಇವರೇನಾ?

ಜಿಲ್ಲಾಧಿಕಾರಿ ನೀಡಿದ್ರು ಶಿಕ್ಷೆ..

ವ್ಯಕ್ತಿ ರಸ್ತೆ ಮೇಲೆ ಉಗುಳಿರುವುದನ್ನು ಕಂಡ ಡಿಸಿ, ಆತನ ಕೈಯಿಂದಲೇ ಸ್ವಚ್ಛಗೊಳಿಸಿದ್ದಾರೆ. ಈ ಘಟನೆಯ ವಿಡಿಯೋ ವೈರಲ್​​ ಆಗಿದೆ. ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಡಿಸಿ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದಿಂಡೋರಿ ಜಿಲ್ಲಾಸ್ಪತ್ರೆಗೆ ಸಂಬಂಧಿಯನ್ನು ನೋಡುವ ಉದ್ದೇಶದಿಂದ ಬಂದಿದ್ದ ವ್ಯಕ್ತಿ, ಆಸ್ಪತ್ರೆ ಆವರಣದಲ್ಲಿ ಬೇಜವಾಬ್ದಾರಿಯಿಂದ ಉಗುಳಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಅಧಿಕಾರಿಗಳು ವ್ಯಕ್ತಿಗೆ ನೋಟಿಸ್​ ನೀಡಿ, ಆತನಿಂದ ಸ್ಪಷ್ಟೀಕರಣ ಕೇಳಿದ್ದಾರೆ.

Last Updated : Sep 15, 2021, 5:52 PM IST

ABOUT THE AUTHOR

...view details