ಕರ್ನಾಟಕ

karnataka

ETV Bharat / bharat

ವೃಂದಾವನ ಹೋಟೆಲ್​ನಲ್ಲಿ ಅಗ್ನಿ ಅವಘಡ.. ಇಬ್ಬರು ಸಿಬ್ಬಂದಿ ಮಲಗಿದ್ದಲ್ಲೇ ಸಜೀವದಹನ - vrindavan hotel tragedy

ವೃಂದಾವನ ಹೋಟೆಲ್​ನಲ್ಲಿ ನಡೆದ ಅಗ್ನಿ ದುರಂತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

Vrindavan hotel fire accident
ವೃಂದಾವನ ಹೋಟೆಲ್ ದುರಂತ

By

Published : Nov 3, 2022, 1:25 PM IST

ಮಥುರ: ವೃಂದಾವನ ಹೋಟೆಲ್​ನಲ್ಲಿ ಗುರುವಾರ ಬೆಳಗಿನ ಜಾವ ಅಗ್ನಿ ಅವಘಡ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಇಬ್ಬರು ಸಿಬ್ಬಂದಿ ಸಾವನ್ನಪಿದ್ದರೆ, ಹಲವರು ಗಾಯಗೊಂಡಿದ್ದಾರೆ. ಸಿಬ್ಬಂದಿ ಮಲಗಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಹಲವರು ಪ್ರಾಣಾಪಾಯದಿಂದ ಪಾರಾಗಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಪೈಕಿ ಒಬ್ಬರ ಪರಿಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಗ್ರಾ ಆಸ್ಪತ್ರೆಗೆ ಸೇರಿಸಲಾಗದೆ ಎಂದು ಎಸ್​.ಹೆಚ್.ಒ ಸೂರಜ್ ಶರ್ಮ ಹೇಳಿದರು.

ಮೂರು ಅಂತಸ್ತಿನ ಹೋಟೆಲ್​ನಲ್ಲಿ ಈ ಅಗ್ನಿ ಅವಘಡ ನಡೆದಿದ್ದು, ಮೂರು ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ನಂದಿಸಿದವು. ಆ ಸಮಯದಲ್ಲಿ ಹೊಗೆಯು ಹೋಟೆಲ್​ನ ಎಲ್ಲಾ 25 ಕೊಠಡಿಗಳಿಗೆ ಆವರಿಸಿತ್ತು ಎಂದು ತಿಳಿದುಬಂದಿದೆ.

ಈ ಕುರಿತು ನಗರದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಾರ್ತಾಂಡ್ ಪ್ರಕಾಶ್ ಸಿಂಗ್ ಮಾತನಾಡಿ, ಹೋಟೆಲ್ ವೃಂದಾವನ ಗಾರ್ಡನ್ ನಲ್ಲಿ ಎರಡು ಭಾಗಗಳಿವೆ. ಪ್ರವಾಸಿಗರು ಹೋಟೆಲ್​ನ ಒಂದು ಭಾಗದಲ್ಲಿ ತಂಗಿದರೆ, ಇನ್ನೊಂದು ಭಾಗದಲ್ಲಿ ರೆಸ್ಟೋರೆಂಟ್, ಉಗ್ರಾಣ ಮತ್ತು ಸ್ಟೋರ್ ರೂಮ್ ಇದೆ ಎಂದು ಅವರು ಹೇಳಿದರು. ಕರ್ಟನ್, ಬೆಡ್ ಶೀಟ್, ದಿಂಬಿನ ಕವರ್, ಬಟ್ಟೆಗಳು, ದಾಖಲೆಗಳನ್ನು ಇರಿಸಿದ ಉಗ್ರಣದಲ್ಲಿ ಅಗ್ನಿ ಅವಘಡ ಸಂಭವಿಸಿದೆ ಎಂದು ಅಧಿಕೃತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಬೆಂಕಿ ಅವಘಡಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಆದರೆ ಇದು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅಥವಾ ಸಿಗರೇಟ್​ ಕಿಡಿಯಿಂದ ಸಂಭವಿಸಿರಬಹುದು ಎಂದು ಅವರು ಶಂಕೆ ವ್ಯಕ್ತಪಡಿಸಿದರು. ಮೃತಪಟ್ಟ ನೌಕರರನ್ನು ಭುರಿ ಮತ್ತು ಮಹೇಶ್​ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ:ಕೆಂಪುಕೋಟೆ ದಾಳಿ: ಉಗ್ರ ಆರಿಫ್ ಗಲ್ಲು ಶಿಕ್ಷೆ ಮರುಪರಿಶೀಲನಾ ಅರ್ಜಿ ವಜಾ

ABOUT THE AUTHOR

...view details