ಚಂಡೀಗಡ (ಪಂಜಾಬ್): ಎಂಟು ಮಹಾನಗರ ಪಾಲಿಕೆ ಸೇರಿದಂತೆ ಪಂಜಾಬ್ನ 117 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುತ್ತಿದ್ದು, ಮತದಾನ ಪ್ರಕ್ರಿಯೆ ಆರಂಭವಾಗಿದೆ.
ಇಂದು ಬೆಳಗ್ಗೆ ಗಂಟೆಗೆ ಮತದಾನ ಪ್ರಾರಂಭವಾಗಿದ್ದು, ಸಂಜೆ 4 ಗಂಟೆಯವರೆಗೆ ನಡೆಯಲಿದೆ. ಆಡಳಿತ ಪಕ್ಷ ಕಾಂಗ್ರೆಸ್, ಪ್ರತಿಪಕ್ಷಗಳಾದ ಆಮ್ ಆದ್ಮಿ ಮತ್ತು ಶಿರೋಮಣಿ ಅಕಾಲಿದಳದ ಅಭ್ಯರ್ಥಿಗಳ ನಡುವೆ ಭಾರಿ ಸ್ಪರ್ಧೆ ಏರ್ಪಟ್ಟಿದೆ.
ಕೇಂದ್ರದ ವಿವಾದಾತ್ಮಕ ಕೃಷಿ ಕಾನೂನುಗಳ ವಿರೋಧ ಎದುರಿಸುತ್ತಿರುವ ಬಿಜೆಪಿ ಕೂಡ ಕಣದಲ್ಲಿದೆ. ಎರಡು ದಶಕಗಳಲ್ಲಿ ಮೊದಲ ಬಾರಿ ಅಕಾಲಿದಳದ ಮೈತ್ರಿಯಿಲ್ಲದೆ ಪಂಜಾಬ್ನಲ್ಲಿ ಬಿಜೆಪಿ ಚುನಾವಣೆ ಎದುರಿಸುತ್ತಿದೆ. ಕೃಷಿ ಕಾನೂನುಗಳ ವಿಚಾರದಲ್ಲಿ ಅಕಾಲಿದಳವು ಎನ್ಡಿಎನಿಂದ ಬೇರ್ಪಟ್ಟಿದೆ.