ಕರ್ನಾಟಕ

karnataka

ETV Bharat / bharat

ಎಐಎಡಿಎಂಕೆ ಹಾಗೂ ಎಎಂಎಂಕೆ ಪಕ್ಷಗಳು ವಿಲೀನಗೊಳ್ಳಬೇಕು : ಜಯಲಲಿತಾ ಆಪ್ತೆ ಶಶಿಕಲಾ ಮನದಿಂಗಿತ - ತಮಿಳುನಾಡು ರಾಜಕೀಯ ಪಕ್ಷಗಳು

ನಾವು ಒಟ್ಟಾಗಿ ಚುನಾವಣೆಯಲ್ಲಿ ಸ್ಪರ್ಧಿಸಬೇಕು. ನಾನು ಶೀಘ್ರದಲ್ಲೇ ಕಾರ್ಯಕರ್ತರನ್ನು ಮತ್ತು ಜನರನ್ನು ಭೇಟಿಯಾಗುತ್ತೇನೆ..

shashikala
shashikala

By

Published : Feb 24, 2021, 3:07 PM IST

ಚೆನ್ನೈ(ತಮಿಳುನಾಡು) :ತಮಿಳುನಾಡಿನ ಮುಖ್ಯಮಂತ್ರಿ ಮಾಜಿ ಸಿಎಂ ದಿ.ಜಯಲಲಿತಾ ಆಪ್ತೆ ವಿ ಕೆ ಶಶಿಕಲಾ, ಎಐಎಡಿಎಂಕೆ ಹಾಗೂ ಎಎಂಎಂಕೆ ಪಕ್ಷ ಒಟ್ಟಾಗಿ ವಿಲೀನಗೊಳ್ಳಬೇಕೆಂದು ಇಂಗಿತ ವ್ಯಕ್ತಪಡಿಸಿದ್ದಾರೆ.

ಚೆನ್ನೈನಲ್ಲಿ ಜಯಲಲಿತಾ 73ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಅವರಿಗೆ ಗೌರವ ಸಲ್ಲಿಸಿ ಶಶಿಕಲಾ ಈ ಅಭಿಪ್ರಾಯ ವ್ಯಕ್ತಪಡಿಸಿದರು. ಎಐಎಡಿಎಂಕೆ ಸರ್ಕಾರವು ಅಮ್ಮನ (ಜಯಲಲಿತಾ) ಆಶಯದಂತೆ 100 ವರ್ಷಗಳ ನಂತರವೂ ಮುಂದುವರಿಯಬೇಕು ಎಂದು ಹೇಳಿದರು.

"ನಾವು ಒಟ್ಟಾಗಿ ಚುನಾವಣೆಯಲ್ಲಿ ಸ್ಪರ್ಧಿಸಬೇಕು. ನಾನು ಶೀಘ್ರದಲ್ಲೇ ಕಾರ್ಯಕರ್ತರನ್ನು ಮತ್ತು ಜನರನ್ನು ಭೇಟಿಯಾಗುತ್ತೇನೆ" ಎಂದು ಶಶಿಕಲಾ ಹೇಳಿದರು. ಸಮಾರಂಭದಲ್ಲಿ ಎಎಂಎಂಕೆ ಮುಖ್ಯಸ್ಥ ಟಿಟಿವಿ ದಿನಕರನ್ ಕೂಡ ಉಪಸ್ಥಿತರಿದ್ದರು.

ABOUT THE AUTHOR

...view details