ಕರ್ನಾಟಕ

karnataka

ETV Bharat / bharat

Chess-  ಸಾರ್ಕ್​​ಸ್ಸೆನ್ ಟ್ರೋಫಿ: ವಿಶ್ವನಾಥನ್ ಆನಂದ್ - ಕ್ರಾಮ್ನಿಕ್ ನಡುವಣ ಪಂದ್ಯ ಡ್ರಾ - No-Castling event

ಸ್ಪಾರ್ಕಸ್ಸೆನ್ ಟ್ರೋಫಿಗಾಗಿ ನಡೆದ ನಾಲ್ಕು ಪಂದ್ಯಗಳ ಎರಡನೇ ಆಟದಲ್ಲಿ ವಿಶ್ವನಾಥನ್ ಆನಂದ್ ಅವರು ರಷ್ಯಾದ ಗ್ರ್ಯಾಂಡ್ ಮಾಸ್ಟರ್ ವ್ಲಾಡಿಮಿರ್ ಕ್ರಾಮ್ನಿಕ್ ವಿರುದ್ಧ ಆಡಿದ ಚೆಸ್​ ಪಂದ್ಯದಲ್ಲಿ ಡ್ರಾ ಮಾಡಿಕೊಂಡಿದ್ದಾರೆ.

Viswanathan Anand
ಆನಂದ್-ಕ್ರಾಮ್ನಿಕ್ ಪಂದ್ಯ

By

Published : Jul 16, 2021, 10:45 AM IST

ಡಾರ್ಟ್ಮಂಡ್ (ಜರ್ಮನಿ):ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರು ರಷ್ಯಾದ ಗ್ರ್ಯಾಂಡ್ ಮಾಸ್ಟರ್ ವ್ಲಾಡಿಮಿರ್ ಕ್ರಾಮ್ನಿಕ್ ವಿರುದ್ಧ ಆಡಿದ ಚೆಸ್​ ಪಂದ್ಯದಲ್ಲಿ ಡ್ರಾ ಮಾಡಿಕೊಂಡಿದ್ದಾರೆ. ಸ್ಪಾರ್ಕಸ್ಸೆನ್ ಟ್ರೋಫಿಗಾಗಿ ನಡೆದ ನಾಲ್ಕು ಪಂದ್ಯಗಳ ಎರಡನೇ ಆಟದಲ್ಲಿ ಡ್ರಾ ಆಗಿದೆ.

ಇಂಗ್ಲಿಷ್ ಫೋರ್ ನೈಟ್ಸ್ ಮಾರ್ಪಾಡು ಆಟದಲ್ಲಿ ಕಪ್ಪು ಚೆಸ್​ ಪಾನ್​ ಆಯ್ದುಕೊಂಡಿದ್ದ ಆನಂದ್​ 39 ಚಲನೆಯ ನಂತರ ಡ್ರಾ ಮಾಡಿಕೊಂಡಿದ್ದಾರೆ. ಇದಕ್ಕೂ ಮುನ್ನ ಬುಧವಾರ ನಡೆದ ಮೊದಲ ಪಂದ್ಯದಲ್ಲಿ ಬಿಳಿ ಪಾನ್​ ಜೊತೆ ಆನಂದ್‌ ಆಡಿದ್ದರು. ಈ ಸಂದರ್ಭದಲ್ಲಿ 66 ಚಲನೆಯ ಬಳಿಕ ಕ್ರಾಮ್ನಿಕ್​ನನ್ನು ಹಿಮ್ಮೆಟ್ಟಿಸಿದ್ದರು.

ಇನ್ನು ಮುಂಬರುವ ಆಟದಲ್ಲಿ ಮತ್ತೆ ಮಾಜಿ ವಿಶ್ವ ಚಾಂಪಿಯನ್ ಕ್ರಾಮ್ನಿಕ್ ವಿರುದ್ಧ ಸೆಣಸಾಡಲಿದ್ದಾರೆ. ಇನ್ನೆರಡು ಪಂದ್ಯ ಬಾಕಿ ಇದ್ದು, ಈಗಾಗಲೇ ಒಂದು ಪಂದ್ಯ ಗೆದ್ದು, ಇನ್ನೊಂದು ಪಂದ್ಯ ಡ್ರಾದಲ್ಲಿ ಅಂತ್ಯವಾಗಿದೆ.

ABOUT THE AUTHOR

...view details