ಜೈಪುರ್(ರಾಜಸ್ಥಾನ) :ಆರು ವರ್ಷದ ಮಗನ ಮುಂದೆ ಮಹಿಳಾ ಕಾನ್ಸ್ಟೇಬಲ್ ಹಾಗೂ ರಾಜಸ್ಥಾನ ಪೊಲೀಸ್ ಸೇವಾ (ಆರ್‌ಪಿಎಸ್) ಅಧಿಕಾರಿ ಅಶ್ಲೀಲದಾಟದಲ್ಲಿ ಭಾಗಿಯಾಗಿರುವ ಘಟನೆ ನಡೆದಿದೆ. ಸುಮಾರು ಎರಡು ನಿಮಿಷಗಳ ವಿಡಿಯೋವೊಂದು ಇದೀಗ ವೈರಲ್ ಆಗಿದೆ.
ರಾಜಸ್ಥಾನದ ಜೈಪುರದಲ್ಲಿ ಈ ಘಟನೆ ನಡೆದಿದೆ. ಪೊಲೀಸ್ ಅಧಿಕಾರಿ ಹಾಗೂ ಮಹಿಳಾ ಕಾನ್ಸ್ಟೇಬಲ್ ಈಜುಕೊಳದಲ್ಲಿ ಅಶ್ಲೀಲ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಎರಡು ನಿಮಿಷಗಳ ವಿಡಿಯೋ ಇದಾಗಿದೆ. ಪೊಲೀಸ್ ಅಧಿಕಾರಿ ಹೀರಾಲಾಲ್ ಸೈನಿ ಇದರಲ್ಲಿ ಭಾಗಿಯಾಗಿದ್ದಾರೆ.
ಇವರು ಅಜ್ಮೀರ್ದ ಬೇವಾರ್ನಲ್ಲಿ ಡಿಎಸ್ಪಿಯಾಗಿ ನೇಮಕಗೊಂಡಿದ್ದರು ಎನ್ನಲಾಗಿದೆ. ಇದೇ ಪೊಲೀಸ್ ಠಾಣೆಯಲ್ಲಿ ಮಹಿಳಾ ಕಾನ್ಸ್ಟೇಬಲ್ ಆಗಿದ್ದ ಮಹಿಳೆ ಇದರಲ್ಲಿ ಭಾಗಿಯಾಗಿದ್ದಳು ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದ ವಿಡಿಯೋ ಒಂದು ವೈರಲ್ ಆಗುತ್ತಿದ್ದಂತೆ, ರಾಜಸ್ಥಾನ ಪೊಲೀಸ್ ಇಲಾಖೆ ಅಧಿಕಾರಿ ಹಾಗೂ ಮಹಿಳಾ ಕಾನ್ಸ್ಟೇಬಲ್ ಅಮಾನತುಗೊಂಡಿದ್ದಾರೆ. ಹೀರಾಲಾಲ್ ಸೈನಿಯನ್ನ ಬಂಧನಕ್ಕೊಳಪಡಿಸಿ, ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಆರು ವರ್ಷದ ಮಗನ ಸಮ್ಮುಖದಲ್ಲೇ ಇಬ್ಬರು ಲೈಂಗಿಕ ಕೃತ್ಯದಲ್ಲಿ ಭಾಗಿಯಾಗಿರುವ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಇಬ್ಬರು ತಲೆಮರೆಸಿಕೊಂಡಿದ್ದರು. ತಕ್ಷಣವೇ ಇವರನ್ನ ಅಮಾನತುಗೊಳಿಸಿ, ಬಂಧನಕ್ಕೆ ಸೂಚನೆ ನೀಡಲಾಗಿತ್ತು.
ವಿಶೇಷ ಕಾರ್ಯಾಚರಣೆ ಗುಂಪು ಪೊಲೀಸ್ ಅಧಿಕಾರಿ ಬಂಧನ ಮಾಡುವಲ್ಲಿ ಯಶಸ್ವಿಯಾಗಿದೆ. ಇನ್ನೂ ಮಹಿಳಾ ಕಾನ್ಸ್ಟೇಬಲ್ ಬಂಧನವಾಗಿಲ್ಲ. ಘಟನೆಗೆ ಸಂಬಂಧಿಸಿದಂತೆ ಮಹಿಳಾ ಕಾನ್ಸ್ಟೇಬಲ್ ಪತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು ಎಂದು ವರದಿಯಾಗಿದೆ.