ಬೆತುಲ್(ಮಧ್ಯಪ್ರದೇಶ):ಮಹಿಳೆಯರು, ಯುವತಿಯರ ಮುಂದೆ ಅಶ್ಲೀಲವಾಗಿ ವರ್ತಿಸುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಊರಿನ ಜನರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಸಂತ್ರಸ್ತ ಮಾನಸಿಕ ರೋಗಿ ಎಂದು ಹೇಳಲಾಗಿದೆ.
ಮಧ್ಯಪ್ರದೇಶದ ಬೆತುಲ್ ಜಿಲ್ಲೆಯ ಕಜ್ಲಿ ಗ್ರಾಮದಲ್ಲಿ ಮಧ್ಯ ವಯಸ್ಕ ವ್ಯಕ್ತಿಯೊಬ್ಬ ದಿನವೂ ಮಹಿಳೆಯರು, ಯುವತಿಯರ ಮುಂದೆ ಬೆತ್ತಲಾಗುತ್ತಿದ್ದ. ತನ್ನ ಖಾಸಗಿ ಅಂಗಗಳನ್ನು ಅವರ ಮುಂದೆ ಪ್ರದರ್ಶಿಸುತ್ತಿದ್ದ. ಈ ಬಗ್ಗೆ ಗ್ರಾಮಸ್ಥರು ಹಲವು ಬಾರಿ ಆತನಿಗೆ ಎಚ್ಚರಿಕೆ ಕೂಡಾ ನೀಡಿದ್ದರು.