ಕರ್ನಾಟಕ

karnataka

ETV Bharat / bharat

ಮೂರು ವರ್ಷಗಳ ಕಾಲ ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ: ಪೋಕ್ಸೋ ಕಾಯ್ದೆಯಡಿ ದೂರು ದಾಖಲು - ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ

ತಂದೆಯಿಂದಲೇ ಹಿರಿಯ ಮಗಳ ಮೇಲೆ ಮೂರು ವರ್ಷ ಕಾಲ ಅತ್ಯಾಚಾರ - ಆಂಧ್ರಪ್ರದೇಶದ ವಿಜಯವಾಡದಲ್ಲಿ ವಿಚಿತ್ರ ಪ್ರಕರಣ ಬೆಳಕಿಗೆ - ಆರೋಪಿ ತಂದೆ ವಿರುದ್ಧ ದಿಶಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ದೂರು ದಾಖಲು.

Disha police station
ದಿಶಾ ಪೊಲೀಸ್ ಠಾಣೆ

By

Published : Jan 14, 2023, 4:25 PM IST

ವಿಜಯವಾಡ( ಆಂಧ್ರಪ್ರದೇಶ): ತಂದೆಯೊಬ್ಬ ತನ್ನ ಹಿರಿಯ ಮಗಳ ಮೇಲೆ ಮೂರು ವರ್ಷಗಳಿಂದ ಅತ್ಯಾಚಾರ ಎಸಗಿರುವ ಅವಮಾನವೀಯ ಪ್ರಕರಣ ಶುಕ್ರವಾರ ವಿಜಯವಾಡ ನಗರದಲ್ಲಿ ಬೆಳಕಿಗೆ ಬಂದಿದೆ. ತನ್ನ ಗಂಡ ಮೊಬೈಲ್ ​ದೊಳಗೆ ಮಗಳ ಅಶ್ಲೀಲ ಚಿತ್ರಗಳನ್ನು ಪತ್ನಿ ವೀಕ್ಷಿಸಿದ ಬಳಿಕ ಈ ವಿಷಯ ಹೊರಗಡೆ ಬಂದಿದೆ. ಆರೋಪಿ ತಂದೆ ವಿರುದ್ಧ ದಿಶಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದೆ.

ಆರೋಪಿ ಮಚಹ್ವರಂ ಮೂಲದ ವ್ಯಕ್ತಿಯಾಗಿದ್ದು, ಆತನಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಖಾಸಗಿ ಟ್ರಾವೆಲ್ಸ್ ನಲ್ಲಿ ಕಾರು ಓಡಿಸಿಕೊಂಡು ಬಂದ ಹಣದಲ್ಲಿ ಕುಟುಂಬವನ್ನು ಸಲಹುತ್ತಿದ್ದನು. ಒಮ್ಮೆ ತನ್ನ ಗಂಡನ ಕಾರಿನಲ್ಲಿ ಹಿರಿಯ ಮಗಳ (13) ನಗ್ನ ಚಿತ್ರಗಳನ್ನು ಗಮನಿಸಿದ ಹೆಂಡತಿ, ಗಂಡನನ್ನು ಗದರಿಸಿದ್ದಳು. ಅಷ್ಟೇ ಅಲ್ಲದೇ ಆತನನ್ನು ವಾಚಾಮಗೋಚರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು.

ಮೊದ ಮೊದಲು ಹೆಂಡತಿ ನಂಬಿಸಿದ್ದ ಪತಿ:ಆತನು ಪತ್ನಿಯನ್ನು ಅವು ನಿಜವಾಗಿರುವ ಪೋಟೊಗಳಲ್ಲ ಎಂದು ಸುಳ್ಳು ಹೇಳಿ ನಂಬಿಸಿದ್ದ. ಕಾರಿನಿಂದ ಪತ್ನಿ ಕೆಳಗಿಳಿದ ಪತ್ನಿ ಇದಕ್ಕೆ ಸುಮ್ಮನಾಗಿದ್ದಳು. ಪತಿಯ ದುರ್ವರ್ತನೆಯಿಂದಾಗಿ ಹಿಂದಿನ ವರ್ಷದ ಜುಲೈ ತಿಂಗಳಿನಿಂದ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಪತ್ನಿ ಸರಕಾರಿ ಶಾಲೆಯ ಹಾಸ್ಟೆಲ್‌ನಲ್ಲಿ ಓದಿಸುತ್ತಿದ್ದರು.

ಇದೇ ತಿಂಗಳು ಜನೇವರಿ 7 ರಂದು ಇಬ್ಬರು ಹೆಣ್ಣು ಮಕ್ಕಳು ಮನೆಗೆ ಬಂದಿದ್ದರು. ತಂದೆ ಹಾಗೂ 13 ವರ್ಷದ ಹಿರಿಯ ಮಗಳ ನಡುವೆ ಜಗಳ ನಡೆದಿದೆ. ಹಿರಿಯ ಮಗಳು ತಂದೆಯಿಂದ ದೂರ ಉಳಿದಿದ್ದರಿಂದ ಆಕೆಯನ್ನು ಆತ ಬೆಲ್ಟ್‌ನಿಂದ ತೀವ್ರವಾಗಿ ಹೊಡೆಯುತ್ತಿದ್ದ. ಈ ವೇಳೆ ಪತ್ನಿ ತಡೆಯಲು ಬಂದಿದ್ದಾರೆ. ಆತ ಆಗ ತನ್ನ ಪತ್ನಿಗೂ ಥಳಿಸಿ, ನಿಂದಿಸಿದ್ದನಂತೆ. ಇದೇ ವೇಳೆ, ಮೊಬೈಲ್​​ನಲ್ಲಿ ಹಿರಿಯ ಮಗಳ ಅಶ್ಲೀಲ ಚಿತ್ರಗಳನ್ನು ತಾಯಿ ನೋಡಿದ್ದಳು. ಗಂಡನ ದುರ್ವತನೆ ಕಂಡು ದಂಗಾದ ಹೆಂಡತಿ ಮತ್ತೆ ಹೆಣ್ಣು ಮಕ್ಕಳನ್ನು ಮಕ್ಕಳನ್ನು ಹಾಸ್ಟೆಲ್​​​ಗೆ ವಾಪಸ್​ ಕಳುಹಿಸಿಕೊಟ್ಟಿದ್ದರು.

ಕೆಲವು ದಿನಗಳ ನಂತರ ಮತ್ತೆ ಜನವರಿ 10 ರಂದು ಹಾಸ್ಟೇಲ್ ರಜೆ ಇದ್ದುದ್ದರಿಂದ ಹಬ್ಬಕ್ಕಾಗಿ ಆ ಇಬ್ಬರು ಹೆಣ್ಣುಮಕ್ಕಳು ಮನೆಗೆ ಬಂದಿದ್ದರು. ಆ ವ್ಯಕ್ತಿ ತನ್ನ ಹಿರಿಯ ಮಗಳನ್ನು ದ್ವಿಚಕ್ರ ವಾಹನದಲ್ಲಿ ಬ್ಯಾಂಕ್ ಕೆಲಸಕ್ಕಾಗಿ ತನ್ನೊಂದಿಗೆ ಕರೆದುಕೊಂಡು ಹೋಗಿ ಸಂಜೆ 6 ಗಂಟೆಗೆ ಮನೆಗೆ ಕರೆತಂದಿದ್ದ. ತಂದೆ ಮಾಡಿದ ದೌರ್ಜನ್ಯವನ್ನು ಅದೇ ದಿನ ರಾತ್ರಿ 11 ಗಂಟೆಗೆ ಹಿರಿಯ ಮಗಳು ತನ್ನ ತಾಯಿಯ ಬಳಿ ಹೇಳಿಕೊಂಡಿದ್ದರು.

ಅಂದು ನಡೆದಿದ್ದೇನು?:ತಂದೆ ಬ್ಯಾಂಕ್‌ಗೆ ಹೋಗುತ್ತೇನೆ ಎಂದು ಹೇಳಿ ರಾಮವರಪ್ಪಡು ಸೇತುವೆ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಈ ದೌರ್ಜನ್ಯ ಕೃತ್ಯವನ್ನು ವಿರೋಧಿಸಿದಾಗ ತಂದೆ ಮಗಳಿಗೆ ಮುಳ್ಳು ತಂತಿಯಿಂದ ಥಳಿಸಿದ್ದ. ಈ ವಿಚಾರವನ್ನೇ ಮಗಳು ತಾಯಿಗೆ ವಿವರಿಸಿದ್ದಳು. ಇದೊಂದೆ ದಿನ ಅಲ್ಲ, ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಮೂರು ವರ್ಷಗಳಿಂದ ತನ್ನ ಮೇಲೆ ಅತ್ಯಾಚಾರವೆಸಗುತ್ತಿದ್ದ ಎಂದು ಮಗಳು ತಾಯಿಗೆ ಎಲ್ಲ ವಿಷಯವನ್ನು ಹೇಳಿದ್ದಳು.

ಗಂಡನ ಈ ಕೃತ್ಯದ ವಿಷಯ ಕೇಳಿ ಗಾಬರಿಗೊಳಗಾದ ತಾಯಿ, ಗಂಡನ ಕೃತ್ಯದ ವಿರುದ್ಧ ಪೊಲೀಸ್​ ಠಾಣೆಗೆ ಮುಟ್ಟಿಸಲು ನಿರ್ಧರಿಸಿದ್ದರು. ಅದರಂತೆ, ಮಗಳನ್ನು ದಿಶಾ ಮಹಿಳಾ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ಪತಿ ವಿರುದ್ಧ ದೂರು ಕೊಟ್ಟಿದ್ದಾರೆ. ಅಧಿಕಾರಿಗಳು ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ನಡುವೆ ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗಿದೆ.

ಇದನ್ನೂಓದಿ:ಊಟದ ವಿಚಾರವಾಗಿ ಜಗಳ... ತಾಯಿ, ಮಗ ಆತ್ಮಹತ್ಯೆ

ABOUT THE AUTHOR

...view details