ಕರ್ನಾಟಕ

karnataka

ETV Bharat / bharat

ಕುಟುಂಬಸ್ಥರಿಂದ ಪ್ರಾಣ ಬೆದರಿಕೆ, ರಕ್ಷಣೆ ನೀಡುವಂತೆ ಪ್ರೇಮಿಗಳ ಮನವಿ: ವಿಡಿಯೋ ವೈರಲ್​ - ಕುಟುಂಬಸ್ಥರಿಂದ ಪ್ರಾಣ ಬೆದರಿಕೆ

ಪರಸ್ಪರ ಪ್ರೀತಿಸಿ ಮದುವೆಯಾಗಿರುವ ಈ ಜೋಡಿಗೆ ಕುಟುಂಬಸ್ಥರಿಂದಲೇ ಪ್ರಾಣ ಬೆದರಿಕೆ ಬಂದಿದೆ. ಹಾಗಾಗಿ, ತಮಗೆ ರಕ್ಷಣೆ ನೀಡುವಂತೆ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ.

love couple video viral
love couple video viral

By

Published : Aug 18, 2022, 3:26 PM IST

Updated : Aug 18, 2022, 10:51 PM IST

ದರ್ಭಾಂಗ್​(ಬಿಹಾರ): ಬಿಹಾರದ ದರ್ಭಾಂಗ್​ನಲ್ಲಿ ಪರಸ್ಪರ ಪ್ರೀತಿಸುತ್ತಿದ್ದ ಯುವಕ ಹಾಗು ಯುವತಿಯ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ. ತಮಗೆ ಕುಟುಂಬಸ್ಥರಿಂದ ಪ್ರಾಣ ಬೆದರಿಕೆ ಇದೆ. ರಕ್ಷಣೆ ನೀಡುವಂತೆ ಪೊಲೀಸರು, ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ಪ್ರೇಮ ಜೋಡಿ ವಿಡಿಯೋ ವೈರಲ್​

ದರ್ಭಾಂಗ್​​ನ ಬಹೇರಿ ಬ್ಲಾಕ್​​ನ ಹಡ್ಚಾ ಗ್ರಾಮದ ಪ್ರಕರಣ ಇದಾಗಿದೆ ಎಂದು ಹೇಳಲಾಗ್ತಿದೆ. ಸ್ವಇಚ್ಛೆಯಿಂದ ತಾನು ಯುವಕನನ್ನು ಮದುವೆಯಾಗಿದ್ದೇನೆ. ನನ್ನನ್ನು ಯಾರೂ ಸಹ ಕಿಡ್ನಾಪ್ ಮಾಡಿಲ್ಲ ಎಂದು ಯುವತಿ ಹೇಳುತ್ತಾಳೆ.

ಅಂತರ್ಜಾತಿ ವಿವಾಹ:ಹಡ್ಚಾ ಗ್ರಾಮದ ಯುವತಿ ಮನೆಯವರ ವಿರೋಧದ ನಡುವೆ ಅನ್ಯ ಜಾತಿಯ ಯುವಕನನ್ನು ವರಿಸಿದ್ದಾಳೆ. ಇದರಿಂದ ಕೊಪಗೊಂಡಿರುವ ಆಕೆಯ ಮನೆಯವರು ಬಹೇದಿ ಪೊಲೀಸ್ ಠಾಣೆಯಲ್ಲಿ ಯುವಕ ಹಾಗೂ ಆತನ ಕುಟುಂಬದ ಸದಸ್ಯರ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಯುವತಿಯ ವಿಚಾರಣೆ ನಡೆಸಿದಾಗ ತಾನು ಹುಡುಗನೊಂದಿಗೆ ಇರುವುದಾಗಿ ಹೇಳಿದ್ದಾಳೆ. ಇಬ್ಬರೂ ವಯಸ್ಕರಾಗಿದ್ದು, ಯಾರೂ ಸಹ ನನ್ನನ್ನು ಅಪಹರಿಸಿಲ್ಲ ಎಂದಿದ್ದಾಳೆ.

ಯುವಕನ ಕುಟುಂಬಕ್ಕೆ ಬೆದರಿಕೆ:ಯುವಕ ಅನ್ಯ ಜಾತಿಗೆ ಸೇರಿದವ. ಮೇಲ್ಜಾತಿ ಯುವತಿ ಜೊತೆ ಮದುವೆ ಮಾಡಿಕೊಂಡಿದ್ದರಿಂದ ಆಕೆಯ ತಂದೆ ವಿಕ್ರಮ್ ಸಿಂಗ್ ಮತ್ತು ಕುಟುಂಬದವರು ಹೆಚ್ಚು ಆಕ್ರೋಶಕ್ಕೊಳಗಾಗಿದ್ದಾರೆ. ಹೀಗಾಗಿ, ಯುವಕನ ಕುಟುಂಬ, ಯುವಕ ಹಾಗೂ ಯುವತಿಗೆ ಜೀವ ಬೆದರಿಕೆ ಹಾಕಿದ್ದಾರೆ.

ಇದನ್ನೂ ಓದಿ:ಮಹಾರಾಷ್ಟ್ರದ ರಾಯಗಢದಲ್ಲಿ ಶಸ್ತ್ರಾಸ್ತ್ರ ತುಂಬಿದ್ದ ಬೋಟ್‌ ಪತ್ತೆ: ಪೊಲೀಸರಿಂದ ಕಟ್ಟೆಚ್ಚರ

ಈ ಹಿನ್ನೆಲೆಯಲ್ಲಿ ತಮಗೆ ರಕ್ಷಣೆ ನೀಡುವಂತೆ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ. ಕುಟುಂಬಸ್ಥರ ಬೆದರಿಕೆಯಿಂದ ಯುವಕನ ಮನೆಯವರು ಭಯಗೊಂಡು ಈಗಾಗಲೇ ಗ್ರಾಮ ತೊರೆದಿದ್ದಾರಂತೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Last Updated : Aug 18, 2022, 10:51 PM IST

ABOUT THE AUTHOR

...view details