ಕರ್ನಾಟಕ

karnataka

ETV Bharat / bharat

ದೇಶದ ಮೊದಲ ವಾಟರ್​ ಸ್ಮಾರ್ಟ್​ ಸಿಟಿಯಾಗಲಿರುವ ವಾರಣಾಸಿ

ಪ್ರಸಿದ್ಧ ಧಾರ್ಮಿಕ ನಗರಿ ಕಾಶಿ ದೇಶದ ಮೊದಲ ವಾಟರ್​ ಸ್ಮಾರ್ಟ್ ಸಿಟಿ ಆಗಲಿದೆ. ಇದಕ್ಕಾಗಿ ಐಐಟಿ ಬಿಎಚ್‌ಯು ಯೋಜನೆ ಸಿದ್ಧಪಡಿಸಿದೆ.

Varanasi will become India first water smart city
ದೇಶದ ಮೊದಲ ನೀರಿನ ಸ್ಮಾರ್ಟ್​ ಸಿಟಿಯಾಗಲಿರುವ ವಾರಣಾಸಿ

By

Published : Dec 28, 2022, 5:17 PM IST

ವಾರಣಾಸಿ: ಡೆನ್ಮಾರ್ಕ್ ತಂತ್ರಜ್ಞಾನ ಬಳಸಿಕೊಂಡು ಧಾರ್ಮಿಕ ನಗರಿ ವಾರಣಾಸಿ (ಕಾಶಿ) ದೇಶದ ಮೊದಲ ವಾಟರ್ ಸ್ಮಾರ್ಟ್ ಸಿಟಿಯಾಗಿ ರೂಪುಗೊಳ್ಳಲಿದೆ. ಇದಕ್ಕಾಗಿ ಇಂಡಿಯನ್ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ವಾರಣಾಸಿ (ಐಐಟಿ ಬಿಎಚ್‌ಯು) ವಿಶೇಷ ಯೋಜನೆಯನ್ನು ಸಿದ್ಧಪಡಿಸಿದೆ. ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದ್ದು ವಾಟರ್ ಸ್ಮಾರ್ಟ್ ಸಿಟಿ ಅಡಿಯಲ್ಲಿ ನಗರದ ಎಲ್ಲ ಚರಂಡಿ, ನದಿ, ಕೆರೆಗಳ ನೀರಿನ ಮೂಲಗಳ ದುರಸ್ತಿ ಕಾರ್ಯವೂ ನಡೆಯಲಿದೆ.

ಈ ಕುರಿತು ದೆಹಲಿಯಲ್ಲಿ ಆಯೋಜಿಸಿದ್ದ ನೀರಿನ ಪರಿಣಾಮ ಕುರಿತ ಕಾರ್ಯಾಗಾರದಲ್ಲಿ ಐಐಟಿ ಬಿಹೆಚ್​ಯು ಪ್ರಸ್ತಾವನೆಯನ್ನು ಮಂಡಿಸಿತ್ತು. ವಾಟರ್ ಸ್ಮಾರ್ಟ್ ಸಿಟಿಗೆ ಸಂಬಂಧಿಸಿದಂತೆ ಪ್ರಸ್ತಾವನೆ ಸಿದ್ಧಪಡಿಸಿರುವ ಬಿಎಚ್‌ಯು, ಸಿವಿಲ್ ಎಂಜಿನಿಯರ್ ವಿಭಾಗದ ಪ್ರೊಫೆಸರ್ ಪಿ.ಕೆ.ಸಿಂಗ್, ಗಂಗಾನದಿಗೆ ಕಲುಷಿತ ನೀರು ಸರಬರಾಜು ತಡೆಯಲು ಯೋಜನೆ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.

ಇದಕ್ಕಾಗಿ ವರುಣಾ ನದಿ ಮತ್ತು ಅಸ್ಸಿ ಕಾಲುವೆಯ ಬಳಿ ಪ್ರಯೋಗಾಲಯವನ್ನು ತೆರೆಯಲಾಗುವುದು. ಅಲ್ಲಿ ವರುಣಾ ನೀರಿನ ಜೈವಿಕ ಸಂಸ್ಕರಣೆಯನ್ನು ಎಲ್ಲಾ ಸಮಯದಲ್ಲೂ ಮಾಡಲಾಗುತ್ತದೆ. ಸ್ಮಾರ್ಟ್ ವಾಟರ್ ಸಿಟಿ ಕಾಮಗಾರಿಯು ಬಿಎಚ್‌ಯು ಕ್ಯಾಂಪಸ್ ಮತ್ತು ಡಿಎಲ್‌ಡಬ್ಲ್ಯೂ ರೈಲ್ವೆ ಕ್ಯಾಂಪಸ್‌ನಲ್ಲಿ ಪ್ರಾರಂಭವಾಗಲಿದೆ. ನಗರವನ್ನು ಸ್ಮಾರ್ಟ್ ವಾಟರ್ ಒಳಚರಂಡಿ ನಗರವನ್ನಾಗಿ ಮಾಡಲಾಗುವುದಕ್ಕಾಗಿ ನಗರದ ಎಲ್ಲಾ ಚರಂಡಿಗಳನ್ನು ಸಹ ದುರಸ್ತಿ ಮಾಡಲಾಗುವುದು ಎಂದರು.

ಐಐಟಿ ಬಿಹೆಚ್​ಯುನಲ್ಲಿ ತೆರೆಯಲಿದೆ ಟೋಕಿಯೊ ವಿವಿ ಕಚೇರಿ:ಐಐಟಿ ಬಿಹೆಚ್​ಯು ಜೊತೆಗೆ, ಕಾಶಿ ಹಿಂದೂ ವಿಶ್ವವಿದ್ಯಾಲಯವೂ ಈ ಯೋಜನೆಯಲ್ಲಿ ಭಾಗವಹಿಸಲಿದೆ. ಬಿಹೆಚ್​ಯು ವಿದ್ಯಾರ್ಥಿಗಳಿಗೆ ಜಪಾನ್ ಕಂಪನಿಯಿಂದ ಆಫರ್ ಬಂದ ನಂತರ, ಈಗ ಬಿಹೆಚ್​ಯು ಮತ್ತು ಟೋಕಿಯೊ ವಿಶ್ವವಿದ್ಯಾಲಯಗಳು ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿವೆ. ಇದರೊಂದಿಗೆ ಎರಡೂ ಸಂಸ್ಥೆಗಳ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ನಡುವೆ ಸಹಕಾರವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಯೋಜನೆಯಿಂದ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣವಾಗುತ್ತದೆ. ಈ ಬಗ್ಗೆ ಜಪಾನ್‌ನ ಪ್ರತಿನಿಧಿಗಳು ಬಿಎಚ್‌ಯು ಉಪಕುಲಪತಿಗಳನ್ನು ಭೇಟಿ ಮಾಡಿದ್ದಾರೆ. ಶೀಘ್ರದಲ್ಲೇ ಟೋಕಿಯೊ ವಿಶ್ವವಿದ್ಯಾಲಯದ ಕಚೇರಿಯೂ ಬಿಎಚ್‌ಯುನಲ್ಲಿ ತೆರೆಯಲಿದೆ.

ಇದನ್ನೂ ಓದಿ:ನಿನ್ನಿಂದ ಆಗದು ಎಂದವರ ಮುಂದೆ ಸಾಧನೆ ಮಾಡಿ ತೋರಿಸಿದ ದಿಟ್ಟೆ: ಹಲವರಿಗೆ ಸ್ಪೂರ್ತಿ ಇವರು

ABOUT THE AUTHOR

...view details