ಮಥುರಾ (ಉತ್ತರ ಪ್ರದೇಶ):ಮಥುರಾ-ವೃಂದಾವನ ನಗರಗಳ ಸುತ್ತಲಿನ 10 ಕಿಲೋ ಮೀಟರ್ ಪ್ರದೇಶವನ್ನು ತೀರ್ಥಕ್ಷೇತ್ರವೆಂದು ಘೋಷಿಸಿರುವ ಉತ್ತರ ಪ್ರದೇಶ ಸರ್ಕಾರ, ಆ ಪ್ರದೇಶದಲ್ಲಿ ಮದ್ಯ ಮತ್ತು ಮಾಂಸ ಮಾರಾಟವನ್ನು ಅನುಮತಿಸಲಾಗುವುದಿಲ್ಲ ಎಂದು ತಿಳಿಸಿದೆ.
ಆಗಸ್ಟ್ 30 ರಂದು ಮಥುರಾದಲ್ಲಿ ಶ್ರೀ ಕೃಷ್ಣಾ ಜನ್ಮಾಷ್ಟಮಿ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಯೋಗಿ ಆದಿತ್ಯನಾಥ್, ಮಥುರಾ-ವೃಂದಾವನ ಅವಳಿ ನಗರಗಳಲ್ಲಿ ಮದ್ಯ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಲು ಯೋಜನೆ ರೂಪಿಸಿವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಇದೀಗ ಯುಪಿ ಸರ್ಕಾರವು ಈ ನಿಯಮವನ್ನು ಕಟ್ಟುಬದ್ಧವಾಗಿ ಜಾರಿಗೆ ತಂದಿದೆ.