ನವದೆಹಲಿ:ಕೇಂದ್ರ ನಾಗರಿಕ ಸೇವಾ ಆಯೋಗ(ಯುಪಿಎಸ್‌ಸಿ) ಪ್ರತಿ ವರ್ಷ ನಡೆಸುವ ನಾಗರಿಕ ಸೇವಾ ಪರೀಕ್ಷೆಗೆ ದಿನ ಸಮೀಪಿಸುತ್ತಿದೆ. ಪ್ರಸ್ತುತ ವರ್ಷ ಮೇ 28 ರಂದು ಪೂರ್ವಭಾವಿ ಪರೀಕ್ಷೆ ನಿಗದಿಯಾಗಿದೆ. ದೇಶದ ಅತ್ಯಂತ ಕಠಿಣ ಪರೀಕ್ಷೆಯ ಬಗ್ಗೆ ಅಭ್ಯರ್ಥಿಗಳಿಗೆ ಆತಂಕ ಸಹಜವೇ. ಹೀಗಾಗಿ ಪರೀಕ್ಷೆಯನ್ನು ದಿಟ್ಟವಾಗಿ ಎದುರಿಸಲು ಇಲ್ಲಿವೆ ಉಪಯುಕ್ತ ಟಿಪ್ಸ್.
ಕಳೆದ ಬಾರಿಗೆ ಹೋಲಿಸಿದರೆ ದೇಶಾದ್ಯಂತ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಿದೆ. ಕೋವಿಡ್ ನಂತರದ ಪರಿಸ್ಥಿತಿ ಪರಿಗಣಿಸಿ, ಹೆಚ್ಚಿನ ಅಭ್ಯರ್ಥಿಗಳು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ. ಇದು ಹೆಚ್ಚು ಸ್ಪರ್ಧೆಗೆ ಅವಕಾಶ ನೀಡಿದ ಸವಾಲು ಹೆಚ್ಚಿಸುತ್ತದೆ. ಕಳೆದ ವರ್ಷಕ್ಕಿಂತ ಖಾಲಿ ಹುದ್ದೆಗಳ ಸಂಖ್ಯೆಯೂ ಹೆಚ್ಚಾಗಿದೆ. ಈಗ ಖಾಲಿ ಹುದ್ದೆಗಳ ಸಂಖ್ಯೆ 1,105.
*ಪಠ್ಯಕ್ರಮ ಗಮನಹರಿಸಿ:ಇದುವರೆಗೆ ಪಠ್ಯಕ್ರಮವನ್ನು ಹಲವು ಬಾರಿ ತಿರುವಿ ಹಾಕಿರುತ್ತೀರಿ. ಆದ್ರೂ ಮತ್ತೊಮ್ಮೆ ಎಚ್ಚರಿಕೆಯಿಂದ ಗಮನಿಸಿ. ಯಾವುದೇ ವಿಷಯಗಳು ಮರೆತುಹೋಗಿದ್ದರೆ, ಪ್ರಸ್ತುತ ವಿಷಯಗಳನ್ನು ಮೂಲಭೂತ ವಿಷಯಗಳೊಂದಿಗೆ ಜೋಡಿಸಿ, ಅಭ್ಯಾಸ ಮಾಡಬೇಕಿದೆ.
*ಸಿದ್ಧತೆ ಸ್ಪಷ್ಟತೆ ಇರಲಿ:ಕಳೆದ ಎರಡ್ಮೂರು ವರ್ಷಗಳಿಂದ ಯಾವ ವಿಷಯಗಳಿಂದ ಹೆಚ್ಚು ಪ್ರಶ್ನೆಗಳನ್ನು ಕೇಳಲಾಗಿದೆ ಎಂಬುದನ್ನು ಗಮನಿಸಿ. ನಿಮ್ಮ ಊಹೆ ನಿಖರವಾಗಿರಬೇಕಿಗಿಲ್ಲ. ಆದ್ರೆ ಸಿದ್ಧತೆಗೆ ಸ್ಪಷ್ಟತೆ ತರುತ್ತದೆ.
*ಪ್ರಮುಖ ವಿಷಯಗಳ ಬಗ್ಗೆ ಗಮನ:ನೀವು ಪಠ್ಯಕ್ರಮದ ಎಲ್ಲ ಮುಖ್ಯ ಭಾಗಗಳನ್ನು ಓದಬಹುದು. ಯಾವುದೇ ಭಾಗಗಳು ಮಿಸ್ ಆಗಿದೆಯಾ ಎಂದು ಪರಿಶೀಲಿಸಿ.
*ಯಾವುದು ಮುಖ್ಯ, ಅಮುಖ್ಯ: ನೀವು ಈಗಾಗಲೇ ಪ್ರೆಸೆಂಟ್ಸ್ ತಯಾರಿಯನ್ನು ಪೂರ್ಣಗೊಳಿಸಿರಬಹುದು. ಅವುಗಳಲ್ಲಿ ಪ್ರಮುಖವಾದವುಗಳನ್ನು ಗುರುತಿಸಿ. ಎಲ್ಲವೂ ಮುಖ್ಯವಾಗಿ ಕಾಣಿಸಬಹುದು. ಆದರೆ ನೀವು ಸಿವಿಲ್‌ಗೆ ತಯಾರಿ ನಡೆಸುತ್ತಿದ್ದೀರಿ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಿ. ಸಾರ್ವಜನಿಕ ಸೇವೆ ಮಾಡಲು ಆಸಕ್ತಿ ಮತ್ತು ದೂರದೃಷ್ಟಿ ಇರುವವರನ್ನು ಆಯ್ಕೆ ಮಾಡುವುದು ಈ ಪರೀಕ್ಷೆಯ ಉದ್ದೇಶ. ಇದನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಗುರುತಿಸಿ. ಉದಾಹರಣೆಗೆ, ‘ಮನ್ ಕಿ ಬಾತ್’ನಲ್ಲಿ ಪ್ರಧಾನಿ ಪ್ರಸ್ತಾಪಿಸಿದ ವಿಷಯಗಳ ಕುರಿತು ಪ್ರಶ್ನೆಗಳನ್ನು ಕೇಳಬಹುದು.
*ಕಲ್ಯಾಣ ಸಚಿವಾಲಯಗಳ ವೆಬ್‌ಸೈಟ್‌ಗಳು:ಎಲ್ಲ ಸರ್ಕಾರಿ ಸಚಿವಾಲಯಗಳು ಮುಖ್ಯ. ಇವುಗಳಲ್ಲಿ ಕಲ್ಯಾಣ ಸಚಿವಾಲಯಗಳು ಪ್ರಮುಖ. ಸರ್ಕಾರದ ಕಲ್ಯಾಣ ಯೋಜನೆಗಳ ಬಗ್ಗೆ ತಿಳಿದುಕೊಳ್ಳಿ. ಪ್ರಮುಖವಾದವುಗಳನ್ನು ಗುರುತಿಸಿ, ಅವುಗಳ ಬಗ್ಗೆ ಸಂಪೂರ್ಣ ವಿವರ ತಿಳಿದುಕೊಳ್ಳಿ. ಈ ಸಂದರ್ಭದಲ್ಲಿ, '5 WH'ಗಳ ಸೂತ್ರವನ್ನು ಅನುಸರಿಸಬೇಕು (ಯಾವುದು, ಏಕೆ, ಯಾರು, ಯಾವಾಗ, ಎಲ್ಲಿ, ಹೇಗೆ) ಸರ್ಕಾರದ ಯೋಜನೆ ಏನು? ಅದನ್ನು ಏಕೆ ಪ್ರಾರಂಭಿಸಲಾಯಿತು? ಫಲಾನುಭವಿಗಳು ಯಾರು? ಜಾರಿಗೆ ತರುವ ಹೊಣೆಗಾರಿಕೆ ಯಾರದ್ದು? ಯೋಜನೆಯನ್ನು ಯಾವಾಗ ಪ್ರಾರಂಭಿಸಲಾಯಿತು? ಯಾವಾಗ ಕೊನೆಗೊಳ್ಳಬಹುದು? ಎಲ್ಲಿ ಆರಂಭವಾಯಿತು?. ಹೀಗೆ ಎಲ್ಲ ವಿವರಗಳನ್ನು ತಿಳಿದುಕೊಂಡು ಮನದಟ್ಟು ಮಾಡಿಕೊಳ್ಳಬೇಕು.
*ನಿಖರವಾಗಿ ಉತ್ತರಿಸುವ ಪ್ರಶ್ನೆಗಳನ್ನು ಗಮನಿಸಿ:ನಾಗರಿಕ ಸೇವಾ ಪರೀಕ್ಷೆಗಳಲ್ಲಿ ನಿಖರ ಬರವಣಿಗೆ ಬಹಳ ಮುಖ್ಯ. ಕಷ್ಟಪಟ್ಟು ಕೆಲಸ ಮಾಡಿದ ಅನೇಕ ಅಭ್ಯರ್ಥಿಗಳು ಎಲ್ಲ ಪ್ರಶ್ನೆಗಳಿಗೆ ಸರಿಯಾದ ಉತ್ತರ ಬರೆಯಲು ಸಾಧ್ಯವಾಗುತ್ತದೆ. ಕಟ್ಆಫ್ ಮಾರ್ಕ್ ತಲುಪುವುದು ಅಥವಾ ತಲುಪದೇ ಇರುವುದು ನಿಮ್ಮ ಬರವಣಿಗೆಯ ಮೇಲೆ ಅವಲಂಬಿಸಿರುತ್ತದೆ. ಇದಕ್ಕೆ ಸಾಕಷ್ಟು ಅಭ್ಯಾಸದ ಅಗತ್ಯವಿದೆ. ಆದ್ದರಿಂದ ಸಾಧ್ಯವಾದಷ್ಟು ಅಭ್ಯಾಸ ಮುಂದುವರಿಸಿ.