ಕರ್ನಾಟಕ

karnataka

ETV Bharat / bharat

ಮಹಿಳೆಗೆ 32 ಲಕ್ಷ ರೂ. ಮೋಸ ಮಾಡಿದ ಇನ್​​ಸ್ಟಾಗ್ರಾಂ ವ್ಯಕ್ತಿ.. ಮೋಸ ಹೋಗಿದ್ದು ಹೇಗೆ? - ಉತ್ತರ ಪ್ರದೇಶ ನ್ಯೂಸ್​

ಆನ್​ಲೈನ್ ಮೂಲಕ ಮಹಿಳೆಯೊಬ್ಬಳ ನಂಬಿಕೆ ಗಳಿಸಿರುವ ವ್ಯಕ್ತಿಯೊಬ್ಬ ಆಕೆಗೆ ಬರೋಬ್ಬರಿ 32 ಲಕ್ಷ ರೂ. ಮೋಸ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

online prouds
online prouds

By

Published : Oct 8, 2021, 4:59 PM IST

ರಾಯ್​ಬರೇಲಿ(ಉತ್ತರ ಪ್ರದೇಶ):ಆನ್​ಲೈನ್​ ಮೂಲಕ ಅನೇಕರು ಮೋಸ ಹೋಗಿರುವ ಘಟನೆ ಈಗಾಗಲೇ ನಡೆದು ಹೋಗಿದ್ದು, ಇದರ ಮಧ್ಯೆ ಉತ್ತರ ಪ್ರದೇಶದಲ್ಲಿ ಮಹಿಳೆಯೊಬ್ಬಳು 32 ಲಕ್ಷ ರೂ. ಕಳೆದುಕೊಂಡಿದ್ದಾಳೆ. ಇನ್​​ಸ್ಟಾಗ್ರಾಂನಲ್ಲಿ ಸ್ನೇಹಿತನಾಗಿದ್ದ ವ್ಯಕ್ತಿಯೊಬ್ಬನಿಂದ ಮಹಿಳೆಯೊಬ್ಬರು ಬರೋಬ್ಬರಿ 32 ಲಕ್ಷ ರೂ. ವಂಚನೆಗೊಳಗಾಗಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇನ್​​ಸ್ಟಾಗ್ರಾಂನಲ್ಲಿ ಸ್ನೇಹಿತನಾಗಿರುವ ವ್ಯಕ್ತಿ ತನ್ನನ್ನು ಯುನೈಟೆಡ್​ ಕಿಂಗ್​​ಡಮ್​ ನಿವಾಸಿ ಎಂದು ಗುರುತಿಸಿಕೊಂಡಿದ್ದಾನೆ. ಇದಾದ ಬಳಿಕ ಉಡುಗೊರೆ ಹಾಗೂ 45 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ನೀಡುವುದಾಗಿ ನಂಬಿಸಿ, ಮಹಿಳೆಗೆ 32 ಲಕ್ಷ ರೂ. ವಂಚನೆ ಮಾಡಿದ್ದಾನೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಉತ್ತರ ಪ್ರದೇಶದ ರಾಯಬರೇಲಿ ಪೊಲೀಸ್ ವರಿಷ್ಠಾಧಿಕಾರಿ ಶ್ಲೋಕ್​ ಕುಮಾರ್ ಈ ಮಾಹಿತಿ ಹಂಚಿಕೊಂಡಿದ್ದು, ಇದೀಗ ಸೈಬರ್​​ ಸೆಲ್​​ನಿಂದ ಪ್ರಕರಣದ ತನಿಖೆ ನಡೆಯುತ್ತಿದ್ದು, ಅಪರಾಧಿಗಳ ಪತ್ತೆಗೋಸ್ಕರ ತಂಡ ರಚನೆ ಮಾಡಲಾಗಿದ್ದು, ಸಂತ್ರಸ್ತೆಯ ಹಣ ಮರಳಿ ತರುವ ಕೆಲಸ ನಡೆಯುತ್ತಿದೆ ಎಂದಿದ್ದಾರೆ.

ಇದನ್ನೂ ಓದಿರಿ:ಮರಳಿ ಗೂಡು ಸೇರಿದ Air India..18,000 ಕೋಟಿ ರೂಗೆ TATA ಗ್ರೂಪ್​ ಪಾಲಾದ ಸಂಸ್ಥೆ

ಮೋಸ ಹೋಗಿದ್ದು ಹೇಗೆ?

ಮಹಿಳೆ ಸೆಪ್ಟೆಂಬರ್​ ತಿಂಗಳಲ್ಲಿ ಇನ್​​​ಸ್ಟಾಗ್ರಾಂ ಮೂಲಕ ವ್ಯಕ್ತಿಗೆ ಪರಿಚಯವಾಗಿದ್ದಾಳೆ. ಈ ವೇಳೆ, ತನ್ನನ್ನು ಯುಕೆ ನಿವಾಸಿ ಹ್ಯಾರಿ ಎಂದು ಗುರುತಿಸಿಕೊಂಡಿದ್ದಾನೆ. ಈ ವೇಳೆ ಫೋನ್​ ನಂಬರ್​​ ವಿನಿಮಯವಾಗಿದ್ದು, ನಿರಂತರವಾಗಿ ಸಂಭಾಷಣೆ ಹಾಗೂ ಚಾಟ್​​ ಆರಂಭಗೊಂಡಿದೆ.

ಇತ್ತೀಚೆಗೆ, ಆಕೆಗೆ ಮಹಿಳೆಯೊಬ್ಬರಿಂದ ವ್ಯಾಟ್ಸ್​​ಆ್ಯಪ್​ ಮೂಲಕ ಕರೆ ಬಂದಿದ್ದು, ಈ ವೇಳೆ ದೆಹಲಿಗೆ ಉಡುಗೊರೆ ಬಾಕ್ಸ್​​ ಹಾಗೂ 45 ಲಕ್ಷ ರೂ. ಮೊತ್ತದ ಯುಕೆ ಕರೆನ್ಸಿ ಬಂದಿದೆ ಎಂದು ತಿಳಿಸಿದ್ದಾನೆ. ಅದನ್ನ ಸಂಗ್ರಹ ಮಾಡಲು ಸಂಸ್ಕರಣಾ ಶುಲ್ಕ ಪಾವತಿ ಮಾಡುವಂತೆ ತಿಳಿಸಿದ್ದಾರೆ.

ಆನ್​ಲೈನ್​ ಮೂಲಕ ವಿವಿಧ ಕಂತುಗಳಲ್ಲಿ ಹಣ ಪಾವತಿ ಮಾಡುವಂತೆ ಕೇಳಿದ್ದಾರೆ. ಹೀಗಾಗಿ ಮಹಿಳೆ ಒಟ್ಟು 32 ಲಕ್ಷ ರೂ. ವರ್ಗಾವಣೆ ಮಾಡಿದ್ದಾಳೆ. ಇದಾದ ಬಳಿಕ ಇನ್ನೊಂದು ಕಡೆಯಿಂದ ಯಾವುದೇ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಹೀಗಾಗಿ ಯುಕೆಯಿಂದ ಬಂದಿರುವ ಉಡುಗೊರೆ ಮಾಹಿತಿ ಪಡೆದುಕೊಳ್ಳುವ ಉದ್ದೇಶದಿಂದ ದೆಹಲಿಗೆ ತಲುಪಿದ್ದಾನೆ.

ಈ ವೇಳೆ ತಾನು ಮೋಸ ಹೋಗಿರುವ ವಿಚಾರ ಗೊತ್ತಾಗಿದೆ. ತಕ್ಷಣವೇ ಜಿಲ್ಲಾ ಪೊಲೀಸ್​ ಮುಖ್ಯಸ್ಥರಿಗೆ ಮಾಹಿತಿ ನೀಡಿದ್ದಾಳೆ. ಉತ್ತರ ಪ್ರದೇಶದಲ್ಲಿ ಈಗಾಗಲೇ ಅನೇಕ ಆನ್​ಲೈನ್​ ವಂಚನೆಯ ಪ್ರಕರಣ ದಾಖಲಾಗಿದ್ದು, ಇಲ್ಲಿಯವರೆಗೆ ಪೊಲೀಸರು ಸುಮಾರು 2 ಕೋಟಿ ರೂ. ವಸೂಲಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಉತ್ತರ ಪ್ರದೇಶದಲ್ಲಿ 5 ಕೋಟಿ ರೂ. ವಂಚನೆಯಾಗಿರುವುದು ತಿಳಿದು ಬಂದಿದೆ.

ABOUT THE AUTHOR

...view details