ಮಹಾರಾಜ್‌ಗಂಜ್ (ಉತ್ತರ ಪ್ರದೇಶ): ತಾನು ಪ್ರೀತಿಸಿದ್ದ ಯುವತಿಗೆ ಬೇರೆ ಯುವಕನೊಂದಿಗೆ ಮದುವೆ ನಿಶ್ಚಯವಾಗಿದ್ದರಿಂದ ಮನನೊಂದ ಪ್ರಿಯಕರನೊಬ್ಬ ಗ್ಲಾಂಡರ್ ಯಂತ್ರದಿಂದ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅದೃಷ್ಟವಶಾತ್ ಯವಕ ಬದುಕುಳಿದಿದ್ದು, ಸದ್ಯ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯ ಪುರಂದರಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮದ ಶೈಲೇಶ್ ಎಂಬ ಯುವಕ ಉದ್ಯೋಗಕ್ಕೆ ಎಂದು ಹೈದರಾಬಾದ್ಗೆ ಬಂದು ನೆಲೆಸಿದ್ದು, ತನ್ನದೇ ಗ್ರಾಮದ ಹುಡುಗಿಯ ಮೇಲೆ ಬಹಳ ದಿನಗಳಿಂದ ವ್ಯಾಮೋಹ ಹೊಂದಿದ್ದ. ಆದರೆ, ಯುವತಿಗೆ ಬೇರೆ ಕಡೆ ಮದುವೆ ನಿಶ್ಚಯವಾಗಿತ್ತು ಎಂದು ಹೇಳಲಾಗಿದೆ.