ಅಯೋಧ್ಯೆ (ಉತ್ತರ ಪ್ರದೇಶ): ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಎಲ್ಲರೂ ಚುನಾವಣಾ ಹಿಂದೂಗಳಾಗುತ್ತಿದ್ದಾರೆ ಎಂದು ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ವಿಪಕ್ಷಗಳ ವಿರುದ್ಧ ಗುಡುಗಿದ್ದಾರೆ.
ಅಯೋಧ್ಯೆ ರಾಮ ಮಂದಿರಕ್ಕೆ ಯಾರೇ ಬಂದರೂ ನಾವು ಅವರನ್ನು ಬರದಂತೆ ತಡೆಯುತ್ತಿಲ್ಲ, ಬರಬಾರದು ಎಂದು ಸಹ ಹೇಳುತ್ತಿಲ್ಲ. ಆದರೆ 2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗುವ ಮೊದಲು ಯಾವುದೇ ಪಕ್ಷವು ಇಲ್ಲಿಗೆ ಬರಲಿಲ್ಲ. ರಾಮ ಮಂದಿರ ನಿರ್ಮಾಣವನ್ನು ಬೆಂಬಲಿಸುವ ಬದಲು ಅದನ್ನು ವಿರೋಧಿಸಿದರು. ಅವರು ಕರಸೇವಕರಿಗೆ ಎಂದಿಗೂ ಸಹಾಯ ಮಾಡಲಿಲ್ಲ. ಆದ್ರೆ ಇತ್ತೀಚಿಗೆ ಎಲ್ಲರೂ ಚುನಾವಣಾ ಹಿಂದೂಗಳಾಗುತ್ತಿದ್ದಾರೆ ಎಂದಿದ್ದಾರೆ.