ನವದೆಹಲಿ: ಮುಂಗಾರು ಅಧಿವೇಶನದ ವೇಳೆ ಪೆಗಾಸಸ್ ವಿವಾದ ಕುರಿತ ಚರ್ಚೆ ವೇಳೆ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರ ಕಾಗದ ಪತ್ರ ಹರಿದು ಹಾಕಿದ್ದ ಘಟನೆ ಸಂಬಂಧ ಟಿಎಂಸಿ ಸಂಸದ ಶಾಂತನು ಸೇನ್ ಅವರನ್ನ ಕಲಾದಿದಂದ ಅಮಾನತು ಮಾಡಲಾಗಿದೆ.
ನಿನ್ನೆ ನಡೆದ ಕಲಾಪದ ವೇಳೆ ವಿಪಕ್ಷ ನಾಯಕರ ಆರೋಪಗಳಿಗೆ ಉತ್ತರಿಸಲು ಎದ್ದು ನಿಂತು ಮಾತನಾಡುತ್ತಿದ್ದ ಸಚಿವ ವೈಷ್ಣವ್ ಅವರ ಕಾಗದ ಪತ್ರ ಹರಿದು ಗಾಳಿಯಲ್ಲಿ ತೂರಿ ಗದ್ದಲ ಮಾಡಿದ್ದರು. ವರ್ತನೆಗೆ ಸಭಾಪತಿ ವೆಂಕಯ್ಯ ನಾಯ್ಡು ಅಸಮಾಧಾನ ಹೊರಹಾಕಿದ್ದು, ಈ ಮುಂಗಾರು ಅಧಿವೇಶನದ ಎಲ್ಲ ಕಲಾಪದಿಂದಲೂ ಅವರನ್ನು ಅಮಾನತು ಮಾಡಿ ಆದೇಶಿಸಿದ್ದಾರೆ.
ಶಾಂತನು ಸೇನ್ ವರ್ತನೆಗೆ ಸ್ವಪಕ್ಷೀಯರಿಂದಲೇ ಅಸಮಾಧಾನ ಕೇಳಿ ಬಂದಿತ್ತು. ಗದ್ದಲದ ನಡುವೆ ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್ ಸಹ ಸದನ ಸುಗಮವಾಗಿ ನಡೆಯಲು ಬಿಡಬೇಕು ಎಂದು ತಿಳಿಸಿದ್ದರು.