ಕರ್ನಾಟಕ

karnataka

ETV Bharat / bharat

ಎಷ್ಟೇ ಕುದಿಸಿದರೂ ಹಾಲು ಹೊರಚೆಲ್ಲದ ವಿಶಿಷ್ಟ ಪಾತ್ರೆ ಕಂಡು ಹಿಡಿದ ವಿದ್ಯಾರ್ಥಿನಿ.. ಅಮೆರಿಕದಲ್ಲೂ ಪ್ರದರ್ಶನಕ್ಕೆ ಸಿದ್ಧತೆ - ಅಮೇರಿಕಾದ ಐರಿಸ್ ಫೆಸ್ಟಿವಲ್

ಹಾಲು ಕುದಿಯುತ್ತದೆ, ಉಕ್ಕುವುದಿಲ್ಲ, ಹೊರ ಚೆಲ್ಲುವುದಿಲ್ಲ ಆ್ಯಂಟಿ ಮಿಲ್ಕ್ ಸ್ಪಿಲಿಂಗ್ ಯುಟೆನ್ಸಿಲ್ ಪಾತ್ರೆಯನ್ನೂ ಸಂಶೋಧಿಸಿದ ಛತ್ತೀಸ್ ಗಢ ಬಿಲಾಸ್ಪುರ್ ಜಿಲ್ಲೆಯ ವಿದ್ಯಾರ್ಥಿನಿ ಹಿಮಾಂಗಿ ಹಲ್ದಾರ್. ಮಹಿಳೆಯರ ದೈನಂದಿನ ಸಮಸ್ಯೆಗೆ ಪರಿಹಾರ ನೀಡುವ ಈ ಪಾತ್ರೆಗೆ ಪೇಟೆಂಟ್ ಪಡೆದುಕೊಂಡ ಭಾರತ ಸರಕಾರ. ಅಮೆರಿಕದಲ್ಲೂ ಪ್ರದರ್ಶನಕ್ಕೆ ಸಿದ್ಧತೆ.

student himangi haldar
ವಿದ್ಯಾರ್ಥಿನಿ ಹಿಮಾಂಗಿ ಹಲ್ದಾರ್

By

Published : Feb 11, 2023, 5:03 PM IST

ಬಿಲಾಸ್ಪುರ್: ಬಿಲಾಸ್‌ಪುರದ ವಿದ್ಯಾರ್ಥಿನಿ ಜೂನಿಯರ್ ಸೈಂಟಿಸ್ಟ್ ಹಿಮಾಂಗಿ ಅವರು ತಯಾರಿಸಿರುವ ಪಾತ್ರೆಯಲ್ಲಿ ಎಷ್ಟೋ ಹೊತ್ತು ಹಾಲು ಕುದಿಸಿದರೂ, ಹಾಲು ಹೊರ ಚೆಲ್ಲುವುದಿಲ್ಲ. ಮಹಿಳೆಯರ ಅಡುಗೆ ಮನೆಯ ಸಮಸ್ಯೆಯನ್ನೂ ವಿದ್ಯಾರ್ಥಿನಿ ಹಿಮಾಂಗಿ ಹೊಸ ಅವಿಷ್ಕಾರದಿಂದ ಪರಿಹರಿಸಿದ್ದಾಳೆ. ಕಿರಿಯ ವಿಜ್ಞಾನಿ ಹಿಮಂಗಿ ಅವರು ಅವಿಷ್ಕಾರದ ಆ್ಯಂಟಿ ಮಿಲ್ಕ್ ಸ್ಪಿಲಿಂಗ್ ಯುಟೆನ್ಸಿಲ್​​​​ಗೆ ಭಾರತ ಸರ್ಕಾರದ ಕಚೇರಿಯೂ ಪೇಟೆಂಟ್ ಪಡೆದುಕೊಂಡಿದೆ.

ಇತ್ತೀಚೆಗೆ ಮುಂಬೈನ ನೆಹರು ವಿಜ್ಞಾನ ಭವನದಲ್ಲಿ ನಡೆದ ವೆಸ್ಟರ್ನ್ ಇಂಡಿಯಾ ಫೆಸ್ಟಿವಲ್‌ದಲ್ಲಿಯೂ ಹಿಮಾಂಗಿ ಪ್ರಥಮ ಸ್ಥಾನವನ್ನೂ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಆ್ಯಂಟಿ ಮಿಲ್ಕ್ ಸ್ಪಿಲಿಂಗ್ ಯುಟೆನ್ಸಿಲ್​​​​ನ್ನು ಅಮೆರಿಕದ ಐರಿಸ್ ಫೆಸ್ಟಿವಲ್​ದಲ್ಲಿಯೂ ಪ್ರದರ್ಶಿಸಲು ನಿರ್ಧರಿಸಿದ್ದಾರೆ.

ಅವಿಷ್ಕಾರಕ್ಕಿದೆ ರೋಚಕ ಕಥೆ: ಆವಿಷ್ಕಾರದ ತಾಯಿ ಒಂದು ದಿನ ಹಾಲು ಕುದಿಸುತ್ತಿದ್ದ ವೇಳೆ ಬೇರೆ ಕೆಲಸದಲ್ಲಿ ಮಗ್ನಳಾಗಿದ್ದಳು. ಆ ವೇಳೆ, ಹಾಲು ಕುದಿಯುತ್ತಿದ್ದಂತೆ ಒಮ್ಮೆಲೆ ಹೊರ ಬಿದ್ದಿದೆ. ಇದನ್ನು ಆರಿಸಲು ಹೋಗಿ ಪಾತ್ರೆ ಸಹಿತ ಕೆಳಗೆ ಬಿದ್ದು ಗಾಯ ಮಾಡಿಕೊಂಡಳು. ಈ ವೇಳೆ, ಹಿಮಾಂಗಿ ಹಲ್ದಾರ್​​ಗೆ ಇದನ್ನೂ ನೋಡಿ ತುಂಬಾ ಬೇಸರವಾಯಿತು. ಅಂದಿನಿಂದ ಇದಕ್ಕೆ ಪರಿಹಾರ ಏನಾದರೂ ಕಂಡು ಹಿಡಿಯಬೇಕು ಎಂದು ನಿರ್ಧರಿಸಿದಳು. ಅಂದಿನಿಂದ ಹೊಸ ಅವಿಷ್ಕಾರದ ಚಿಂತನೆಯಲ್ಲಿ ತೊಡಗಿ ಈಗ ಆ ಅವಿಷ್ಕಾರದಲ್ಲಿ ಯಶಸ್ವಿಯಾಗಿದ್ದಾರೆ.

ಈಟಿವಿ ಭಾರತದೊಂದಿಗೆ ಹಿಮಾಂಗಿ ಹಲ್ದಾರ್​​ ಮಾತನಾಡಿ, ಒಂದು ಪಾತ್ರೆಯಲ್ಲಿ ಹಾಲನ್ನು ಬಿಸಿ ಮಾಡಿದಾಗಲೆಲ್ಲ ಅದು ಕುದಿಯುತ್ತದೆ ಮತ್ತು ಹೊರ ಚೆಲ್ಲುತ್ತದೆ. ಹೀಗಾಗಿ ಹಾಲು ಕಾಯಿಸುವ ಅಲ್ಲೇ ನಿಂತು ಗ್ಯಾಸ್​​ನ ಪ್ಲೇಮ್​ ಕಡಿಮೆ ಮಾಡಬೇಕಾಗುತ್ತದೆ. ಆದರೆ, ಮೇಲಿಂದ ಮೇಲೆ ಹಾಲು ಚೆಲ್ಲಿದರೆ ಅದನ್ನು ಸ್ವಚ್ಛಗೊಳಿಸುವಲ್ಲಿಯೂ ಬೇಜಾರು. ಇದನ್ನರಿತು ಹಾಲನ್ನು ಕಾಯಿಸಿದಾಗ ಅದು ಉಕ್ಕದೇ ಇರುವಂತೆ ಇರುವ ಪಾತ್ರೆಯನ್ನು ಏಕೆ ಮಾಡಬಾರದೆಂದು ನಿರ್ಧರಿಸಿದೆ. ಈ ಎಲ್ಲ ಸಮಸ್ಯೆಗೆ ಆ್ಯಂಟಿ ಮಿಲ್ಕ್ ಸ್ಪಿಲಿಂಗ್ ಯುಟೆನ್ಸಿಲ್ ಎಂಬ ಪಾತ್ರೆ ಪರಿಹಾರವಾಗಿದೆ ಎಂದು ಬಾಲಕಿ ತಿಳಿಸಿದ್ದಾರೆ.

ಆ್ಯಂಟಿ ಮಿಲ್ಕ್ ಸ್ಪಿಲಿಂಗ್ ಯುಟೆನ್ಸಿಲ್ ವಿಶೇಷತೆ: ಹಡಗಿನ ವಿಶಿಷ್ಟ ವಿನ್ಯಾಸದಲ್ಲಿ ಈ ಪಾತ್ರೆ ತಯಾರಿಸಲಾಗಿದೆ. ನೀರು ಕುದಿಯುವಾಗ ಏಕೆ ಚೆಲ್ಲುವುದಿಲ್ಲ, ಹಾಲು ಕುದಿಸಿದಾಗ ಏಕೆ ಮೊಸರು ಆಗುತ್ತದೆ ಎಂಬುವುದನ್ನೂ ಮೊದಲು ಅಧ್ಯಯನ ಮಾಡಿದೆ. ಆ ಬಳಿಕ ಪಾತ್ರೆಯ ವಿಶಿಷ್ಟ ವಿನ್ಯಾಸ ರಚಿಸಲಾಯಿತು. ಎರಡು ವಿಭಿನ್ನ ಆಕಾರದಲ್ಲಿ ಎರಡು ಪಾತ್ರೆಗಳನ್ನು ಪ್ರಯೋಗಕ್ಕೆ ತೆಗೆದುಕೊಳ್ಳಲಾಯಿತು. ಅದರಲ್ಲಿ ಕೆಳಭಾಗದ ಪಾತ್ರೆಯೂ ಕಿರಿದಾದ ಸೈಜ್​ದಲ್ಲಿ ಹಾಗೂ ಅದರ ಮೇಲೆ ಇನ್ನೊಂದು ಪಾತ್ರೆ ಸುತ್ತಳತೆ ಹೆಚ್ಚು ಅಗಲ ಇರುವ ಪಾತ್ರೆ ಅಳವಡಿಸಿ ಪ್ರಯೋಗ ಮಾಡಿದೆ ಎನ್ನುತ್ತಾರೆ ಹಿಮಾಂಗಿ ಹಲ್ದಾರ್​​

ಭೌತಶಾಸ್ತ್ರದ ಪರಿಕಲ್ಪನೆಯಡಿ ಅವಿಷ್ಕಾರ: ಹಾಲು ಬಿಸಿಗೆ ಹೆಚ್ಚಿನ ಒತ್ತಡ ಉಂಟಾಗಿ ಮೇಲೆ ಬಂದಾಗ, ಈ ಪಾತ್ರೆಯಲ್ಲಿ ವಿಸ್ತರಿಸಿದ ಭಾಗವು ಒತ್ತಡವನ್ನು ಕಡಿಮೆ ಮಾಡುತ್ತದೆ. ಭೌತಶಾಸ್ತ್ರದ ಪರಿಕಲ್ಪನೆಗೂ ಇದು ಸಾಮೀಪ್ಯವಿದೆ. ಹಾಲಿನ ಒತ್ತಡವು ಪ್ರದೇಶಕ್ಕೆ ವಿಲೋಮ ಅನುಪಾತದಲ್ಲಿರುತ್ತದೆ. ಮೇಲೆ ಪಾತ್ರೆ ಸುತ್ತಳತೆ ವಿಸ್ತೃತವಾಗಿದ್ದರೆ, ಮೇಲೆ ಬರುತ್ತಿದ್ದಂತೆ ಹಾಲಿನ ಒತ್ತಡವು ಕಡಿಮೆಯಾಗುತ್ತದೆ. ಹಾಲು ಕುದಿಯುತ್ತವೆ ಮತ್ತು ಮಡಕೆಯ ಹೊರಗೆ ಬೀಳುವುದಿಲ್ಲ. ಆ್ಯಂಟಿ ಮಿಲ್ಕ್ ಸ್ಪಿಲಿಂಗ್ ಯುಟೆನ್ಸಿಲ್ ಇದು ಈ ಪಾತ್ರೆಯ ವಿಶೇಷತೆ.

ತಂದೆ ಪಾನು ಹಲ್ದಾರ್ ಖುಷಿ: ವಿದ್ಯಾರ್ಥಿನಿ ಹಿಮಾಂಗಿ ಬಗ್ಗೆ ತಂದೆ ತಾಯಿಗಳು ಹೆಮ್ಮೆ ಪಡುತ್ತಾರೆ. ತಂದೆ ಪಾನು ಹಲ್ದಾರ್ ಮಾತನಾಡಿ, ಇಲ್ಲಿ ದೈನಂದಿನ ಜೀವನದ ಸಮಸ್ಯೆಯ ತೆಗೆದುಕೊಂಡು ಸಂಶೋಧನೆ ಮಾಡಲಾಗಿದೆ. ಈ ಪಾತ್ರೆ ಸಮಸ್ಯೆ ಪ್ರತಿ ಮನೆಯಲ್ಲಿದೆ. ಹಿಮಾಂಗಿಯನ್ನೂ ಜನರು ಪ್ರೋತ್ಸಾಹಿಸಿದರೆ, ದೇಶಕ್ಕಾಗಿ ಪ್ರಶಸ್ತಿಯನ್ನೂ ತರುತ್ತಾಳೆ ಎನ್ನುತ್ತಾರೆ.

ಇದನ್ನೂಓದಿ:ಶ್ರವಣ, ದೃಷ್ಟಿಹೀನರ ಬಾಳಿಗೆ ದಾರಿದೀಪ ವಿದ್ಯಾರ್ಥಿಗಳೇ ತಯಾರಿಸಿದ 'ಮ್ಯಾಜಿಕಲ್ ಸ್ಮಾರ್ಟ್ ಸ್ಟಿಕ್​'!

ABOUT THE AUTHOR

...view details