ಪುದುಚೇರಿ: ಕಳೆದ 50 ವರ್ಷಗಳಲ್ಲಿ ಹಿಂದೆಂದೂ ಕಾಣದ ಅಭಿವೃದ್ಧಿ ಮಾಡಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಕೇಂದ್ರಾಡಳಿತ ಪ್ರದೇಶದ ಜನರಿಗೆ ಭರವಸೆ ನೀಡಿದ್ದಾರೆ.
ಮತದಾನ ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ ಮುಖಂಡ, ತಮಿಳುನಾಡು-ಪುದುಚೇರಿ ಸಂಪರ್ಕಕ್ಕಾಗಿ 11,000 ಕೋಟಿ ರೂ.ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ.
ಕೇಂದ್ರಾಡಳಿತ ಪ್ರದೇಶದಲ್ಲಿ ರಸ್ತೆ ಮಾರ್ಗಗಳಿಗಾಗಿ 20,000 ಕೋಟಿ ರೂ.ನಲ್ಲಿ ಪುದುಚೇರಿ - ಕನ್ಯಾಕುಮಾರಿ ಹಾಗೂ ಪುದುಚೇರಿ - ಚೆನ್ನೈ ಸಮುದ್ರ ಮಾರ್ಗ ಯೋಜನೆ ಜಾರಿಗೆ ಬರಲಿದೆ. ಕನ್ಯಾಕುಮಾರಿ - ಪಾಂಡಿಚೆರಿ ಮೂಲಕ ಚೆನ್ನೈಗೆ ಸಮುದ್ರ ಮಾರ್ಗ ಸಾರಿಗೆ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಅಧಿಕಾರಕ್ಕೆ ಬಂದರೆ ಮೀನುಗಾರರ ಜೀವನೋಪಾಯವನ್ನು ಸುಧಾರಿಸಲಾಗುವುದು ಎಂದ ಅವರು, ಮಾಜಿ ಸಿಎಂ ನಾರಾಯಸ್ವಾಮಿ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.