ಕರ್ನಾಟಕ

karnataka

ETV Bharat / bharat

ಗುಜರಾತ್​ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ: ಪಶ್ಚಿಮ ಬಂಗಾಳದಲ್ಲೂ ಇದೇ ಫಲಿತಾಂಶ ಎಂದ ಶಾ! - ಗುಜರಾತ್​ ಮುನ್ಸಿಪಾಲ್ ಕಾರ್ಪೋರೇಷನ್ ನ್ಯೂಸ್​

ಗುಜರಾತ್​ನ ಸ್ಥಳೀಯ ಚುನಾವಣೆ ಫಲಿತಾಂಶ ಬಹಿರಂಗಗೊಂಡಿದ್ದು, ಆರು ಪಾಲಿಕೆಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲು ಮಾಡಿದೆ.

Union Home Minister Amit Shah
Union Home Minister Amit Shah

By

Published : Feb 23, 2021, 8:34 PM IST

ನವದೆಹಲಿ:ಗುಜರಾತ್​ನ ಆರು ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆ ಫಲಿತಾಂಶ ಇಂದು ಬಹಿರಂಗಗೊಂಡಿದ್ದು, ಆರು ಕಾರ್ಪೋರೇಷನ್​ಗಳಲ್ಲಿ ಭಾರತೀಯ ಜನತಾ ಪಾರ್ಟಿ ಗೆಲುವು ದಾಖಲು ಮಾಡಿ ಕ್ಲೀನ್​ ಸ್ವೀಪ್​ ಸಾಧನೆ ಮಾಡಿದೆ.

ಇದನ್ನೂ ಓದಿ: ಗುಜರಾತ್​​ನಲ್ಲಿ​ 6 ಮುನ್ಸಿಪಾಲ್​ ಕ್ಲೀನ್​ ಸ್ವೀಪ್​ ಮಾಡಿದ ಬಿಜೆಪಿ: ​​576ರ ಪೈಕಿ 491ಸ್ಥಾನಗಳಲ್ಲಿ ಅರಳಿದ 'ಕಮಲ': ನಮೋ ಹರ್ಷ​!

ಬಿಜೆಪಿ ಭರ್ಜರಿ ಜಯಭೇರಿ ಭಾರಿಸುತ್ತಿದ್ದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿದ್ದು, ರೈತರ ಪ್ರತಿಭಟನೆ, ಕೋವಿಡ್​​-19 ವಿಚಾರವಾಗಿ ಬಿಜೆಪಿ ಮೇಲೆ ಇರುವ ತಪ್ಪು ಗ್ರಹಿಕೆ ಕೆಡವಿಹಾಕಿದೆ ಎಂದಿದ್ದಾರೆ. ಲೇಹ್​-ಲಡಾಖ್​ನಿಂದ ಹೈದರಾಬಾದ್ ಮತ್ತು ಗುಜರಾತ್​ವರೆಗೆ ಹಲವಾರು ತಪ್ಪು ಕಲ್ಪನೆ ಬಿತ್ತಲು ಪ್ರತಿಪಕ್ಷಗಳು ಪ್ರಯತ್ನಿಸಿದ್ದವು. ಆದರೆ ಈ ಚುನಾವಣೆ ಫಲಿತಾಂಶ ಇದಕ್ಕೆ ಉತ್ತರವಾಗಿದ್ದು, ಪಶ್ಚಿಮ ಬಂಗಾಳ ಚುನಾವಣೆಯಲ್ಲೂ ಇದೇ ರೀತಿಯ ಫಲಿತಾಂಶ ಬರಲಿದೆ ಎಂದಿದ್ದಾರೆ.

ಗುಜರಾತ್​ ಫಲಿತಾಂಶದ ಬಗ್ಗೆ ಅಮಿತ್ ಶಾ ಮಾತು

ಮಹಾನಗರ ಪಾಲಿಕೆ ಫಲಿತಾಂಶ ಮೋದಿ ಜೀ ಅವರ ನಾಯಕತ್ವದ ವಿಕಾಸ್ ಯಾತ್ರೆ ಮುಂದುವರೆಸಿದೆ. ಇಂದಿನ ಫಲಿತಾಂಶ ಗುಜರಾತ್​ನ ಅತ್ಯುತ್ತಮ ಫಲಿತಾಂಶಗಳಲ್ಲಿ ಒಂದಾಗಿದೆ ಎಂದಿದ್ದಾರೆ. ಬಿಜೆಪಿ ತಾನು ಸ್ಪರ್ಧೆ ಮಾಡಿದ್ದ ಸುಮಾರು 85 ಪ್ರತಿಶತ ಸ್ಥಾನಗಳಲ್ಲಿ ಗೆಲುವು ದಾಖಲು ಮಾಡಿದ್ದು, ಕಾಂಗ್ರೆಸ್​ ನೆಲಕಚ್ಚಿದೆ ಎಂದಿದ್ದಾರೆ.

ABOUT THE AUTHOR

...view details