ಕರ್ನಾಟಕ

karnataka

ETV Bharat / bharat

ಕೇಂದ್ರ ಬಜೆಟ್ 2022: 400 ಹೊಸ ತಲೆಮಾರಿನ 'ವಂದೇ ಭಾರತ್​ ರೈಲು' ಸೇರಿ ರೈಲ್ವೆ ಇಲಾಖೆಗೆ ಸಿಕ್ಕಿದ್ದೇನು?

Railways Budget 2022: ಕೇಂದ್ರ ಸರ್ಕಾರದ ಸಾಮಾನ್ಯ ಬಜೆಟ್​​ ಜೊತೆಗೆ ರೈಲ್ವೆ ಇಲಾಖೆ ಬಜೆಟ್ ಕೂಡ ಮಂಡನೆಯಾಗಿದ್ದು, 400 ವಂದೇ ಭಾರತ್​ ಅತ್ಯಾಧುನಿಕ ರೈಲು ಸೇರಿದಂತೆ ಇಲಾಖೆಗೆ ಅನೇಕ ಪ್ರಮುಖ ಯೋಜನೆ ಘೋಷಣೆ ಮಾಡಲಾಗಿದೆ.

Railways Budget 2022
Railways Budget 2022

By

Published : Feb 1, 2022, 5:10 PM IST

ನವದೆಹಲಿ: 2017ರಿಂದಲೂ ಸಾಮಾನ್ಯ ಬಜೆಟ್​​​ನಲ್ಲಿ ರೈಲ್ವೆ ಬಜೆಟ್​ ಕೂಡ ಮಂಡನೆಯಾಗ್ತಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಮಂಡನೆ ಮಾಡಿರುವ 2022-23ನೇ ಸಾಲಿನ ಆಯವ್ಯಯದಲ್ಲಿ ರೈಲ್ವೆ ಇಲಾಖೆಗೆ ಅನೇಕ ಯೋಜನೆ ಘೋಷಣೆ ಮಾಡಿದ್ದಾರೆ.

  • 2022-23ನೇ ಕೇಂದ್ರ ಬಜೆಟ್​​ನಲ್ಲಿ ರೈಲ್ವೆ ಇಲಾಖೆಗೆ 1.4 ಲಕ್ಷ ಕೋಟಿ ರೂ. ಅನುದಾನ ನೀಡಲಾಗಿದ್ದು, ರೈಲ್ವೆಯ ಸುರಕ್ಷತೆ ಮತ್ತು ಸಾಮರ್ಥ್ಯ ವರ್ಧನೆಗಾಗಿ 2 ಸಾವಿರ ರೈಲು ಜಾಲವನ್ನು ಸ್ಥಳೀಯ ವಿಶ್ವ ದರ್ಜೆಯ ತಂತ್ರಜ್ಞಾನ ಕವಚ್ ಅಡಿಯಲ್ಲಿ ತರಲು ನಿರ್ಧಾರ

ಇದನ್ನೂ ಓದಿರಿ:ಕೇಂದ್ರ ಬಜೆಟ್-2022 : ಜನಸಾಮಾನ್ಯರಿಗೆ ಸಿಕ್ಕಿದ್ದೇನು?

  • ಪ್ರಮುಖವಾಗಿ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ 400 ವಂದೇ ಭಾರತ್ ಅತ್ಯಾಧುನಿಕ ರೈಲುಗಳ ಘೋಷಣೆ ಮಾಡಲಾಗಿದ್ದು ಜೊತೆಗೆ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ 100 ಕಾರ್ಗೋ ಟರ್ಮಿನಲ್ಸ್​​​ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ.
  • ಭಾರತೀಯ ರೈಲ್ವೆ ಇಲಾಖೆ ಮತ್ತಷ್ಟು ಆಧುನೀಕರಣಗೊಳಿಸಲು ನಿರ್ಧರಿಸಲಾಗಿದ್ದು, 7 ಸಾವಿರ ಕಿಲೋ ಮೀಟರ್ ರೈಲ್ವೆ ಟ್ರ್ಯಾಕ್​ ವಿದ್ಯುದ್ದೀಕರಣ ಮಾಡಲು ಬಜೆಟ್​ನಲ್ಲಿ ಪ್ರಸ್ತಾಪ, ಇದಕ್ಕಾಗಿ 10 ಸಾವಿರ ಕೋಟಿ ರೂ. ಮೀಸಲು.
  • ಬ್ರಾಡ್​ ಗೇಜ್​ ರೈಲ್ವೆ ಹಳಿಗಳನ್ನ ವಿದ್ಯುದ್ದೀಕರಣಗೊಳಿಸುವ ಯೋಜನೆಗೆ 7,452 ಕೋಟಿ ರೂಪಾಯಿ ಘೋಷಣೆ
  • 2030ರೊಳಗೆ ಭಾರತೀಯ ರೈಲ್ವೆ ಇಲಾಖೆಯನ್ನ ಸಂಪೂರ್ಣವಾಗಿ ಹಸಿರು ರೈಲ್ವೆ ವ್ಯವಸ್ಥೆ ಮಾಡಲು ನಿರ್ಧಾರ
  • ಒಂದು ಜಿಲ್ಲೆ ಒಂದು ಉತ್ಪನ್ನ ಮಾದರಿಯಲ್ಲೇ 'ಒನ್ ಮಾದರಿ ಒಂದು ರೈಲು ನಿಲ್ದಾಣ' ಪರಿಕಲ್ಪನೆ ಘೋಷಣೆ

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details