ಕರ್ನಾಟಕ

karnataka

ETV Bharat / bharat

ಉಮೇಶ್ ಪಾಲ್ ಹತ್ಯೆ ಪ್ರಕರಣ: ಪತ್ರಕರ್ತ ಜಾಫರ್ ಅಹ್ಮದ್ ಮನೆ ಧ್ವಂಸ - ವಿಡಿಯೋ ಹೇಳಿಕೆ ಬಿಡುಗಡೆ - ಪತ್ರಕರ್ತ ಜಾಫರ್ ಅಹ್ಮದ್ ಮನೆ ನೆಲಸಮ

ಜಾಫರ್ ಅಹ್ಮದ್ 2021ರಲ್ಲಿ ಮನೆಯನ್ನು ಖರೀದಿಸಿದ್ದಾರೆ. ನಂತರ ಅವರ ಸೋದರ ಮಾವ ಅದನ್ನು ಅತೀಕ್ ಅಹ್ಮದ್ ಅವರ ಪತ್ನಿ ಶೈಸ್ತಾ ಪರ್ವೀನ್ ಅವರಿಗೆ ಬಾಡಿಗೆಗೆ ನೀಡಿದ್ದರು. ಸೂಚನೆಯಿಲ್ಲದೇ ಮನೆ ನೆಲಸಮಗೊಳಿಸಿರುವುದು ಸರಿಯಲ್ಲ ಎಂದು ಜಾಫರ್ ಅಹ್ಮದ್ ವಿಡಿಯೋದಲ್ಲಿ ಹೇಳಿದ್ದಾರೆ.

Journalist Zafar Ahmad house demolished
ಪತ್ರಕರ್ತ ಜಾಫರ್ ಅಹ್ಮದ್

By

Published : Mar 3, 2023, 7:31 PM IST

Updated : Mar 3, 2023, 8:13 PM IST

ಪತ್ರಕರ್ತ ಜಾಫರ್ ಅಹ್ಮದ್ ಮನೆ ಧ್ವಂಸಗೊಳಿಸಿದ ಹಿನ್ನೆಲೆ ವಿಡಿಯೋ ಹೇಳಿಕೆ ಬಿಡುಗಡೆ.

ಬಂದಾ (ಉತ್ತರ ಪ್ರದೇಶ):ಉಮೇಶ್ ಪಾಲ್ ಹತ್ಯೆ ಪ್ರಕರಣದ ಆರೋಪಿ, ದರೋಡೆಕೋರ ರಾಜಕಾರಣಿ ಅತೀಕ್ ಅಹ್ಮದ್ ಅವರ ಪತ್ನಿ ಶೈಸ್ತಾ ಪರ್ವೀನ್ ಅವರಿಗೆ ಬಾಡಿಗೆಗೆ ನೀಡಿದ್ದ ಪತ್ರಕರ್ತ ಜಾಫರ್ ಅಹ್ಮದ್ ಅವರ ಮನೆಯನ್ನೇ ನೆಲಸಮಗೊಳಿಸಲಾಗಿದೆ. ಈ ಕುರಿತು ಪತ್ರಕರ್ತರ ವಿಡಿಯೊ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ತಮಗೆ ಯಾವುದೇ ಸೂಚನೆ ನೀಡದೇ ಮನೆಯನ್ನು ನೆಲಸಮ ಮಾಡಿದ್ದಾರೆ ಎಂದು ಅವರು ತಿಳಿಸಿದರು.

''ವೃತ್ತಿಯಲ್ಲಿ ವಕೀಲರಾಗಿರುವ ತನ್ನ ಸೋದರಮಾವ ಖಾನ್ ಸೌಲತ್ ಹನೀಫ್ ಮೂಲಕ ಜನವರಿ 2021ರಲ್ಲಿ ಬಂದಾದಲ್ಲಿ ತಾನು ಕಷ್ಟಪಟ್ಟು ಸಂಪಾದಿಸಿದ ಉಳಿತಾಯದಿಂದ ಮನೆಯನ್ನು ಖರೀದಿಸಿದ್ದೇನೆ'' ಎಂದು ಜಾಫರ್ ಹೇಳಿದರು. ಮನೆ ಖರೀದಿಸಿದ ಕೆಲವೇ ದಿನಗಳಲ್ಲಿ, ಅವರ ಸೋದರಮಾವ ಸೌಲತ್ ಹನೀಫ್ ಖಾನ್ ಈ ಮನೆಯನ್ನು ಶೈಸ್ತಾ ಪರ್ವೀನ್‌ಗೆ ಬಾಡಿಗೆಗೆ ನೀಡಿದ್ದರು. ಆ ಸಮಯದಲ್ಲಿ ಯಾವುದೇ ಪ್ರಕರಣ ಬುಕ್ ಆಗಿರಲಿಲ್ಲ'' ಎಂದು ಜಾಫರ್ ನೆನಪಿಸಿಕೊಂಡರು.

''ಮನೆ ಖರೀದಿಸಿದ ನಂತರ ಕಳೆದ ಎರಡು ವರ್ಷಗಳಲ್ಲಿ ಅವರು ಮನೆ ನೋಡಲು ಹೋಗಿಲ್ಲ. ಪ್ರಸ್ತುತ ಅವರ ಸೋದರಮಾವ ಸೌಲತ್ ಹನೀಫ್ ಖಾನ್ ಅವರಲ್ಲಿ ಮನೆಯ ಕೀ ಮತ್ತು ದಾಖಲೆಗಳ ಇವೆ. ಆರ್ಥಿಕ ತೊಂದರೆಯಿಂದ ಮನೆಗಾಗಿ ಸೌಲತ್ ಹನೀಫ್ ಖಾನ್ ಬಳಿ ಸಾಲ ಮಾಡಿಕೊಂಡಿದ್ದೆ'' ಎಂದು ಜಾಫರ್ ಹೇಳಿದ್ದಾರೆ. ಬಂದಾ ಜಿಲ್ಲಾಡಳಿತ ಮತ್ತು ಪೊಲೀಸ್ ಆಡಳಿತವು ಸೂಚನೆ ನೀಡದೇ ಮನೆಯನ್ನು ಧ್ವಂಸ ಪ್ರಕರಣವನ್ನು ತನಿಖೆ ನಡೆಸಬೇಕು ಎಂದು ಜಾಫರ್ ಅಹ್ಮದ್ ಮನವಿ ಮಾಡಿದರು.

ಬುಧವಾರ, ಭಾರಿ ಪೊಲೀಸ್ ಪಡೆಗಳ ಸಮ್ಮುಖದಲ್ಲಿ, ಬಂದಾ ಆಡಳಿತವು ಚಕಿಯಾ ಪ್ರದೇಶದ ಕಸರಿ ಮಸಾರಿ ಪ್ರದೇಶದಲ್ಲಿ ಕಳೆದ ಎರಡು ವರ್ಷಗಳಿಂದ ಅತೀಕ್ ಅಹ್ಮದ್ ಅವರ ಪತ್ನಿ ಮತ್ತು ಕುಟುಂಬ ಬಾಡಿಗೆಗೆ ವಾಸಿಸುತ್ತಿದ್ದ ಜಾಫರ್ ಅವರ ಮನೆಯನ್ನು ನೆಲಸಮಗೊಳಿಸಲಾಗಿದೆ.

ಶಸ್ತ್ರಾಸ್ತ್ರ ಮಾರಾಟಗಾರರ ಮನೆಯೂ ನೆಲಸಮವಾಗಿತ್ತು: ಉಮೇಶ್ ಪಾಲ್ ಹತ್ಯೆ ಪ್ರಕರಣ ಹಿನ್ನೆಲೆ ಪ್ರಯಾಗ್‌ರಾಜ್‌ನಲ್ಲಿ ಗುರುವಾರ ಮತ್ತೆ ಮಹತ್ವದ ಘಟನೆ ನಡೆದಿತ್ತು. ಪ್ರಯಾಗ್‌ರಾಜ್ ಅಭಿವೃದ್ಧಿ ಪ್ರಾಧಿಕಾರದ ತಂಡವು ಧುಮನ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಜ್‌ರೂಪ್‌ಪುರ ಪ್ರದೇಶವನ್ನು ತಲುಪಿತ್ತು. ಸಫ್ದರ್ ಅಲಿ ಅವರ ಐಷಾರಾಮಿ ಎರಡು ಅಂತಸ್ತಿನ ಮನೆಯನ್ನು ಬುಲ್ಡೋಜರ್​ನಿಂದ ಹೊಡೆದುರುಳಿಸಿತ್ತು. ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಶಸ್ತ್ರಾಸ್ತ್ರ ಮತ್ತು ಕಾರ್ಟ್ರಿಜ್​ಗಳನ್ನು ಒದಗಿಸಿದ್ದರು ಎಂಬ ಆರೋಪ ಸಫ್ದರ್ ಅಲಿ ಎಂದು ಮೂಲಗಳು ತಿಳಿಸಿವೆ. ನಂತರ ಶಸ್ತ್ರಾಸ್ತ್ರ ವ್ಯಾಪಾರಿ ಸಫ್ದರ್ ಅಲಿ ಅವರ ಮನೆಯನ್ನು ನೆಲಸಮ ಮಾಡಲಾಗಿತ್ತು.

ಜಾನ್ಸೆಂಗಂಜ್ ಪ್ರದೇಶದಲ್ಲಿ ಸಫ್ದರ್ ಅಲಿ ಅವರು ಶಸ್ತ್ರಾಸ್ತ್ರ ಮತ್ತು ಕಾರ್ಟ್ರಿಜ್​ಗಳ ಅಂಗಡಿ ಹೊಂದಿದ್ದಾರೆ. ಎಸ್‌ಎಸ್‌ಎ ಗನ್ ಹೌಸ್‌ನ ಮಾಲೀಕ ಸಫ್ದರ್ ಅಲಿ ಅವರು ನಗರದ ಧುಮನ್‌ಗಂಜ್ ಪ್ರದೇಶದಲ್ಲಿ 250 ಚದರ ಗಜಗಳಿಗಿಂತ ಹೆಚ್ಚು ಜಾಗದಲ್ಲಿ ಎರಡು ಅಂತಸ್ತಿನ ಐಷಾರಾಮಿ ಮನೆಯನ್ನು ನಿರ್ಮಿಸಿದ್ದರು. ಇದರ ಬೆಲೆ 3 ಕೋಟಿಗೂ ಹೆಚ್ಚು ಎನ್ನಲಾಗಿದೆ. ಮತ್ತೊಂದೆಡೆ ನಕ್ಷೆ ಮಂಜೂರಾತಿ ಪಡೆಯದೇ ನಿಯಮಾವಳಿಗೆ ವಿರುದ್ಧವಾಗಿ ಮನೆಗಳನ್ನು ನಿರ್ಮಿಸಿರುವ ಕಾರಣ, ಬುಲ್ಡೋಜರ್​ಗಳ ಮೂಲಕ ಮನೆ ನೆಲಸಮ ಮಾಡುವ ಕ್ರಮಕ್ಕೆ ಪಿಡಿಎ ತಂಡ ಮುಂದಾಗಿತ್ತು.

ಉಮೇಶ್ ಪಾಲ್ ಹತ್ಯೆಯ ನಂತರ, ಗುಜರಾತ್ ಜೈಲಿನಲ್ಲಿರುವ ಅತೀಕ್ ಅಹ್ಮದ್, ಅವರ ಸಹೋದರ ಅಶ್ರಫ್, ಪತ್ನಿ ಶೈಸ್ತಾ ಪರ್ವೀನ್, ಇಬ್ಬರು ಪುತ್ರರು ಮತ್ತು ಇತರ 11 ಮಂದಿಯ ವಿರುದ್ಧ ಪಾಲ್ ಅವರ ಪತ್ನಿ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿತ್ತು.

ಇದನ್ನೂ ಓದಿ:ಉಮೇಶ್​ ಪಾಲ್​ ಹತ್ಯೆ ಕೇಸ್​: ಶಸ್ತ್ರಾಸ್ತ್ರ ಮಾರಾಟಗಾರ ಸಫ್ದರ್ ಅಲಿ ವಿರುದ್ಧ ಬುಲ್ಡೋಜರ್ ಘರ್ಜನೆ..!

Last Updated : Mar 3, 2023, 8:13 PM IST

ABOUT THE AUTHOR

...view details