ಪುರಿ(ಓಡಿಶಾ):ಬಿಜೆಪಿಯ ಹಿರಿಯ ನಾಯಕಿ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಭಾನುವಾರ ಪುರಿ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ ಅವರನ್ನು ಭೇಟಿ ಮಾಡಿದರು.
ಉಮಾ ಭಾರತಿ ಹಾಗೂ ನಿಶ್ಚಲಾನಂದ ಸರಸ್ವತಿ ಭೇಟಿ ಸಂದರ್ಭದಲ್ಲಿ ಯಾವ ವಿಚಾರದ ಬಗ್ಗೆ ಚರ್ಚೆ ನಡೆಸಿದರು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಕೋವಿಡ್ ಹಿನ್ನೆಲೆ ಪುರಾತನ (12 ನೇ ಶತಮಾನ) ಜಗನ್ನಾಥ ದೇವಾಲಯಕ್ಕೆ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಈ ಹಿನ್ನೆಲೆ ಉಮಾ ಭಾರತಿ ಇಲ್ಲಿಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ನಿನ್ನೆ (ಭಾನುವಾರ) ದೇಗುಲಕ್ಕೆ ಭೇಟಿ ನೀಡುವ ಮುನ್ನ ಅವರು ಸಿಂಹದ್ವಾರದ ಬಳಿ ದೇವಾಲಯದ ಹೊರಗಿನಿಂದ ಪತಿತಪಾಬನ (ಜಗನ್ನಾಥನ ಪ್ರತಿರೂಪ) ದರ್ಶನ ಪಡೆದರು.