ಕರ್ನಾಟಕ

karnataka

ETV Bharat / bharat

ಆಧಾರ್​ಗೆ 10 ವರ್ಷಗಳ ಹಿಂದೆ ನೀಡಿದ ದಾಖಲೆ ನವೀಕರಿಸಿ: ಯುಐಡಿಎಐ - ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ

10 ವರ್ಷಗಳ ಹಿಂದೆ ಆಧಾರ್​ಗೆ ನೀಡಿದ ಮಾಹಿತಿ ಮತ್ತು ದಾಖಲೆಗಳನ್ನು ಪುನಃ ಇನ್ನೊಮ್ಮೆ ನೀಡಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಕೋರಿದೆ.

aadhar-card-update
ಆಧಾರ್​ಗೆ 10 ವರ್ಷಗಳ ಹಿಂದೆ ನೀಡಿದ ದಾಖಲೆ ನವೀಕರಿಸಿ

By

Published : Oct 12, 2022, 2:27 PM IST

ನವದೆಹಲಿ:ತಪ್ಪು ಮಾಹಿತಿ ಮತ್ತು ನಿಖರತೆ ಕಾಪಾಡಲು ಹತ್ತು ವರ್ಷಗಳ ಹಿಂದೆ ಆಧಾರ್​ ಸಂಖ್ಯೆಗೆ ನೀಡಿದ ದಾಖಲೆ, ಮಾಹಿತಿಯನ್ನು ನವೀಕರಿಸುವಂತೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಮಂಗಳವಾರ ಕೋರಿದೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, 10 ವರ್ಷಗಳ ಹಿಂದೆ ಆಧಾರ್ ಸಂಖ್ಯೆ ಪಡೆದಿರುವ ಮತ್ತು ಅಂದಿನಿಂದ ಈವರೆಗೂ ಒಮ್ಮೆಯೂ ನವೀಕರಿಸದವರು ಕೊಟ್ಟಿರುವ ಮಾಹಿತಿಯನ್ನು ಪುನಃ ದೃಢೀಕರಿಸಿ ನವೀಕರಿಸಬೇಕು. ವಿಶಿಷ್ಟ ಗುರುತಿನ ಸಂಖ್ಯೆ ಹೊಂದಿರುವವರು ನಿಗದಿತ ಶುಲ್ಕದೊಂದಿಗೆ ದಾಖಲೆಗಳನ್ನು ನವೀಕರಿಸುವ ಸೌಲಭ್ಯ ನೀಡಲಾಗಿದೆ. ಆಧಾರ್ ಡೇಟಾದಲ್ಲಿ ವೈಯಕ್ತಿಕ ಗುರುತಿನ ಪುರಾವೆ ಮತ್ತು ವಿಳಾಸ ಪುರಾವೆಗೆ ಸಂಬಂಧಿಸಿದ ದಾಖಲೆಗಳನ್ನು ನವೀಕರಿಸಿ ಎಂದು ಹೇಳಿದೆ.

ಈ ಸೌಲಭ್ಯವನ್ನು ಆನ್‌ಲೈನ್‌ನಲ್ಲಿಯೂ ಪಡೆಯಬಹುದು. ನವೀಕರಣದ ಯಾವುದೇ ಯೋಜನೆಗೆ ತೊಂದರೆ ಉಂಟಾಗದು. ನಿಖರ ಮಾಹಿತಿಯನ್ನು ಕಲೆ ಹಾಕುವ ಸಲುವಾಗಿ ಈ ನಿಯಮವಾಗಿದೆ ಎಂದು ಸಂಸ್ಥೆ ಹೇಳಿದೆ.

ಓದಿ:ಆ್ಯಪ್ ಆಧಾರಿತ ಆಟೋಗಳಿಗೆ ನಿರ್ಬಂಧ.. ನಿಯಮ ಜಾರಿಗೆ ಸೈಬರ್ ಕ್ರೈಂ ಸಹಾಯ

ABOUT THE AUTHOR

...view details