ನವದೆಹಲಿ: ಪದವಿ ಕಾಲೇಜುಗಳ ಆರಂಭದ ಬಗ್ಗೆ ಇದ್ದ ಗೊಂದಲಕ್ಕೆ ಯುಜಿಸಿ ತೆರೆ ಎಳೆದಿದ್ದು, ಅಕ್ಟೋಬರ್ 1ರಿಂದ ಪದವಿ ಕಾಲೇಜುಗಳನ್ನು (Degree College) ತೆರೆಯಲು ಸೂಚಿಸಿದೆ. ಈ ಬಗ್ಗೆ ಮಾರ್ಗಸೂಚಿ ಹೊರಡಿಸಿರುವ ಯುಜಿಸಿ, ಎಲ್ಲಾ ವಿಶ್ವವಿದ್ಯಾಲಯಗಳಿಗೆ, ಕಾಲೇಜುಗಳಿಗೆ ಮಾಹಿತಿ ನೀಡಿದೆ.
ಸೆಪ್ಟೆಂಬರ್ ತಿಂಗಳ 30ನೇ ತಾರೀಖಿನೊಳಗೆ 2021-22ನೇ ಶೈಕ್ಷಣಿಕ ಸಾಲಿನ ದಾಖಲಾತಿ ಮುಗಿಸಿ, ಅಕ್ಟೋಬರ್ 1ರಿಂದ ಕಾಲೇಜುಗಳನ್ನು ಪುನಾರಂಭಿಸಿ ಎಂದು ಸೂಚನೆ ನೀಡಿದೆ.
ಅಲ್ಲದೆ, ದಾಖಲಾತಿಗೆ ನೀಡಲಾದ ಗಡುವನ್ನು ಅಕ್ಟೋಬರ್ 31, 2021 ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ. ಅರ್ಹತಾ ಪರೀಕ್ಷೆ ಸಂಬಂಧಿತ ದಾಖಲೆಗಳನ್ನು ನೀಡಲು ಡಿಸೆಂಬರ್ 31, 2021 ರವರೆಗೆ ಕಾಲಾವಕಾಶ ನೀಡಿದೆ.
12 ನೇ ತರಗತಿಯ ಫಲಿತಾಂಶವನ್ನು ಜುಲೈ 31, 2021 ರೊಗಳಗೆ ಘೋಷಿಸುವ ನಿರೀಕ್ಷೆಯಿದೆ. ಒಂದು ವೇಳೆ ವಿಳಂಬವಾದರೆ, ಶಿಕ್ಷಣ ಸಂಸ್ಥೆಗಳು ಅಕ್ಟೋಬರ್ 18, 2021 ರ ವರೆಗೆ ದಾಖಲಾತಿಗೆ ಅನುಮತಿ ನೀಡಬಹುದು ಎಂದು ನಿರ್ದೇಶಿಸಿದೆ. ತರಗತಿಯು ಆನ್ಲೈನ್, ಆಫ್ಲೈನ್ನಲ್ಲಿ ನಡೆಸಬಹುದು ಎಂದು ಯುಜಿಸಿ ಹೇಳಿದೆ.