ಕರ್ನಾಟಕ

karnataka

ETV Bharat / bharat

ವಿಮಾನದ ಬಿಸಿನೆಸ್ ಕ್ಲಾಸ್‌ನಲ್ಲಿ ಕೆನಡಾಕ್ಕೆ ಹಾರಲಿವೆ ಬೀದಿ ನಾಯಿಗಳು! - ಶ್ವಾನಗಳು

ಪ್ರಾಣಿ ಕಲ್ಯಾಣ ಮತ್ತು ಆರೈಕೆ ಸೊಸೈಟಿ ಎಂಬ ಮೂಲಕ ಅಮೃತಸರದ ಎರಡು ಬೀದಿ ನಾಯಿಗಳನ್ನು ಕೆನಡಾ ಮಹಿಳೆಯೊಬ್ಬರು ದತ್ತು ಪಡೆದಿದ್ದಾರೆ. ಈ ಶ್ವಾನಗಳು ವಿಮಾನದ ಬಿಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸಿ ಕೆನಡಾ ತಲುಪಲಿವೆ.

Etv Bharat
Etv Bharat

By

Published : Jul 7, 2023, 8:44 PM IST

Updated : Jul 7, 2023, 10:33 PM IST

ಅಮೃತಸರ (ಪಂಜಾಬ್​): ಇತ್ತೀಚೆಗೆ ದೇಶದ ಹಲವೆಡೆ ಬೀದಿ ನಾಯಿಗಳ ಹಾವಳಿ ಬಗ್ಗೆ ನಿರಂತರವಾಗಿ ಸುದ್ದಿಗಳು ಆಗುತ್ತಿದೆ. ಮಕ್ಕಳು ಮೇಲೆ ದಾಳಿ ಮಾಡುವುದು ಹಾಗೂ ಕಚ್ಚಿ ಗಾಯಗೊಳಿಸಿ ಸಾಯಿಸಿದ ಘಟನೆಗಳು ಬೆಳಕಿಗೆ ಬರುತ್ತಿವೆ. ಇದರ ನಡುವೆ ಪಂಜಾಬ್​ನ ಅಮೃತಸರದಿಂದ ಎರಡು ಬೀದಿ ನಾಯಿಗಳು ಕೆನಾಡಕ್ಕೆ ವಿಮಾನದಲ್ಲಿ ಹಾರಲು ಸಜ್ಜಾಗಿವೆ.!

ಹೌದು, ಅಮೃತಸರದ ಬೀದಿ - ಬೀದಿಗಳಲ್ಲಿ ಓಡಾಡುತ್ತಿದ್ದ ಎರಡು ಶ್ವಾನಗಳು ವಿಮಾನದ ಬಿಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸಿ ಕೆನಡಾ ತಲುಪಲಿವೆ. ಪ್ರಾಣಿ ಕಲ್ಯಾಣ ಮತ್ತು ಆರೈಕೆ ಸೊಸೈಟಿ (Animal Welfare and Care Society - AWCS) ಮೂಲಕ ಈ ಶ್ವಾನಗಳನ್ನು ಕೆನಾಡದ ಮಹಿಳೆಯೊಬ್ಬರು ದತ್ತು ಪಡೆದಿದ್ದಾರೆ. ಜುಲೈ 15ರಂದು ಎರಡೂ ಹೆಣ್ಣು ನಾಯಿಗಳು ದೆಹಲಿಯಿಂದ ಕೆನಡಾಕ್ಕೆ ತೆರಳಲಿವೆ.

ಶ್ವಾನ ಪ್ರೇಮಿ ಡಾ.ನವನೀತ್ ಕೌರ್ ಅನಿಮಲ್ ವೆಲ್ಫೇರ್ ಅಂಡ್ ಕೇರ್ ಸೊಸೈಟಿಯ ಸ್ಥಾಪಕರಾಗಿದ್ದಾರೆ. ಬೀದಿ ನಾಯಿಗಳಿಗೆ ಯಾರೂ ರಕ್ಷಕರಿಲ್ಲ. ಅವುಗಳು ಬೀದಿ - ಬೀದಿಗಳಲ್ಲಿ ಓಡಾಡುತ್ತಿರುತ್ತವೆ. ಅನಾರೋಗ್ಯ ಅಥವಾ ಗಾಯಗೊಂಡ ನಾಯಿಗಳನ್ನು ನೋಡಿಕೊಳ್ಳಲು ಯಾರೂ ಇರುವುದಿಲ್ಲ ಎಂಬ ಆಲೋಚನೆ ಮಾಡಿ 2020ರ ಲಾಕ್‌ಡೌನ್ ಸಂದರ್ಭದಲ್ಲಿ ಈ ಸೊಸೈಟಿಯನ್ನು ಡಾ.ನವನೀತ್ ಕೌರ್ ಆರಂಭಿಸಿದ್ದಾರೆ.

ಡಾ.ನವನೀತ್ ಕೌರ್ ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ. ಅಮೃತಸರದಲ್ಲಿ ಮನೆಯೊಂದನ್ನು ಹೊಂದಿದ್ದಾರೆ. ಅಮೃತಸರದಲ್ಲಿ ಸುಖ್ವಿಂದರ್ ಸಿಂಗ್ ಜಾಲಿ ಎಂಬುವರು ಅನಿಮಲ್ ವೆಲ್ಫೇರ್ ಅಂಡ್ ಕೇರ್ ಸೊಸೈಟಿಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಸೂಸೈಟಿ ಮೂಲಕ ಅನೇಕ ಬೀದಿ ನಾಯಿಗಳಿಗೆ ಆಶ್ರಯ ನೀಡಲಾಗುತ್ತಿದೆ. ಈ ಬೀದಿ ನಾಯಿಗಳ ಪೈಕಿ ಲಿಲಿ ಮತ್ತು ಡೈಸಿ ಎಂಬ ಶ್ವಾನಗಳು ಈಗ ಕೆನಾಡಕ್ಕೆ ವಿಮಾನದಲ್ಲಿ ಹಾರಲು ಸಜ್ಜಾಗಿವೆ.

ಈ ಕುರಿತು ಡಾ.ನವನೀತ್ ಕೌರ್ ಮಾಹಿತಿ ನೀಡಿದ್ದು, ಕೆನಡಾದ ಬ್ರಾಂಡಾ ಎಂಬ ಮಹಿಳೆಯು ಲಿಲಿ ಮತ್ತು ಡೈಸಿಯನ್ನು ದತ್ತು ಪಡೆದಿದ್ದಾರೆ. ಈ ಕುರಿತ ದಾಖಲೆಗಳು ಪೂರ್ಣಗೊಂಡಿದ್ದು, ಜುಲೈ 15ರಂದು ಎರಡೂ ಶ್ವಾನಗಳನ್ನು ದೆಹಲಿಯಿಂದ ಕೆನಡಾಕ್ಕೆ ತೆಗೆದುಕೊಂಡು ಹೋಗಲಾಗುತ್ತಿದೆ. ಇದುವರೆಗೆ ಇದೇ ರೀತಿಯಾಗಿ ಆರು ಭಾರತೀಯ ನಾಯಿಗಳನ್ನು ವಿದೇಶಕ್ಕೆ ತೆಗೆದುಕೊಂಡು ಹೋಗಲಾಗಿದೆ ಎಂದು ತಿಳಿಸಿದರು.

ಈ ಬೀದಿ ಶ್ವಾನಗಳನ್ನು ನಮ್ಮ ಸಂಸ್ಥೆಯಲ್ಲಿ ಯಾರೋ ಬಿಟ್ಟು ಹೋಗಿದ್ದರು. ಆಗ ಅವುಗಳ ಸ್ಥಿತಿ ಚೆನ್ನಾಗಿರಲಿಲ್ಲ. ಅವುಗಳಿಗೆ ಕಳೆದ ಇಂದು ತಿಂಗಳಿಂದ ಚಿಕಿತ್ಸೆ ನೀಡಿ ಉತ್ತಮವಾಗಿ ಆರೈಕೆ ಮಾಡಲಾಗಿದೆ. ಭಾರತೀಯರಾದ ನಾವು ಬೀದಿ ನಾಯಿಗಳನ್ನು ಸಾಕುವುದಿಲ್ಲ. ಆದರೆ, ಈ ವಿದೇಶಿ ನಾಗರಿಕರಿಗೆ ತಮ್ಮ ತಳಿಗಳು ತುಂಬಾ ಇಷ್ಟ. ವಿಶೇಷವಾಗಿ ಕೆನಡಾದ ಜನರು ಭಾರತೀಯ ನಾಯಿಗಳನ್ನು ದತ್ತು ತೆಗೆದುಕೊಳ್ಳಲು ಬಹಳ ಉತ್ಸುಕರಾಗಿದ್ದಾರೆ. ಏಕೆಂದರೆ, ಭಾರತೀಯ ನಾಯಿಗಳು ಹೆಚ್ಚು ಸ್ನೇಹಪರ ಎಂದು ವಿದೇಶಿಗರು ಭಾವಿಸುತ್ತಾರೆ. ಇದಕ್ಕಾಗಿಯೇ ಕೆನಡಾದ ಬ್ರಾಂಡಾ ಈ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಳ್ಳುತ್ತಿದ್ದಾರೆ ಎಂದು ವಿವರಿಸಿದರು.

ಇದನ್ನೂ ಓದಿ:ಪೊಲೀಸ್ ಇಲಾಖೆಗೆ 1.50 ಲಕ್ಷ ರೂ. ಮೌಲ್ಯದ ಬೆಲ್ಜಿಯಂ ಮಾಲಿನೋಯಿಸ್ ಶ್ವಾನ ಗಿಫ್ಟ್!

Last Updated : Jul 7, 2023, 10:33 PM IST

ABOUT THE AUTHOR

...view details