ಕರ್ನಾಟಕ

karnataka

ETV Bharat / bharat

ಗಂಗಾ ನದಿಯಲ್ಲಿ ಐವರು ನೀರುಪಾಲು.. ಮೂವರ ರಕ್ಷಣೆ, ಇಬ್ಬರಿಗಾಗಿ ಶೋಧ - ಗೋವಿಂದ್ ಮತ್ತು ಅನುಜ್

ಮಾಘ ಪೂರ್ಣಿಮೆ ಹಿನ್ನೆಲೆ ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಐವರು ನೀರುಪಾಲಾಗಿದ್ದು, ಪೊಲೀಸರು ಮೂವರನ್ನು ರಕ್ಷಿಸಿದ್ದಾರೆ. ಉಳಿದ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

Uttar Pradesh
ಗಂಗಾ ನದಿಯಲ್ಲಿ ಐವರು ನೀರುಪಾಲು.. ಮೂವರ ರಕ್ಷಣೆ, ಇಬ್ಬರಿಗಾಗಿ ಶೋಧ

By

Published : Feb 27, 2021, 2:01 PM IST

ಕಾಸ್​ಗಂಜ್ (ಉತ್ತರಪ್ರದೇಶ): ಮಾಘ ಪೂರ್ಣಿಮೆ ಹಿನ್ನೆಲೆ ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಐವರು ನೀರುಪಾಲಾಗಿದ್ದಾರೆ. ಪೊಲೀಸರ ಸಮಯ ಪ್ರಜ್ಞೆಯಿಂದ ತಕ್ಷಣವೇ ಮೂವರನ್ನು ರಕ್ಷಿಸಲಾಗಿದೆ. ಉಳಿದ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಗಂಗಾ ನದಿಯಲ್ಲಿ ಐವರು ನೀರುಪಾಲು.. ಮೂವರ ರಕ್ಷಣೆ, ಇಬ್ಬರಿಗಾಗಿ ಶೋಧ

ನಾಪತ್ತೆಯಾದವರನ್ನು ಗೋವಿಂದ್ ಮತ್ತು ಅನೂಜ್ ಎಂದು ಗುರುತಿಸಲಾಗಿದ್ದು, ಪೊಲೀಸರು ಶೋಧ ಕಾರ್ಯವನ್ನು ಚುರುಕುಗೊಳಿಸುತ್ತಿದ್ದಾರೆ. ಈ ಸಂಬಂಧ ಥಾಣೆ ಕಡರ್​​ಗಂಜದ್​ನಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ABOUT THE AUTHOR

...view details