ಕರ್ನಾಟಕ

karnataka

ETV Bharat / bharat

Watch - ಬಾಯ್​ ಫ್ರೆಂಡ್​ಗಾಗಿ ನಡುರಸ್ತೆಯಲ್ಲೇ ಬಡಿದಾಡಿಕೊಂಡ ಯುವತಿಯರು..! - ಯುವತಿಯರ ಗಲಾಟೆ

ಇಬ್ಬರು ಯುವತಿಯರು ಒಬ್ಬನೇ ಯುವಕನಿಗಾಗಿ ನಡುರಸ್ತೆಯಲ್ಲೆ ಹೊಡೆದಾಡಿಕೊಂಡಿರುವ ಘಟನೆಯ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಬಾಯ್​ ಫ್ರೆಂಡ್​ಗಾಗಿ ನಡುರಸ್ತೆಯಲ್ಲೇ ಬಡಿದಾಡಿಕೊಂಡ ಯುವತಿಯರು
ಬಾಯ್​ ಫ್ರೆಂಡ್​ಗಾಗಿ ನಡುರಸ್ತೆಯಲ್ಲೇ ಬಡಿದಾಡಿಕೊಂಡ ಯುವತಿಯರು

By

Published : Aug 12, 2021, 5:15 PM IST

Updated : Aug 12, 2021, 5:33 PM IST

ಸರೈಕೆಲಾ (ಜಾರ್ಖಂಡ್​): ಒಬ್ಬನೇ ಯುವಕನಿಗಾಗಿ ಇಬ್ಬರು ಯುವತಿಯರು ಹಾಡಹಗಲೇ ನಡುರಸ್ತೆಯಲ್ಲೆ ಹೊಡೆದಾಡಿಕೊಂಡಿರುವ ಘಟನೆ ಜಾರ್ಖಂಡ್​ನ ಸರೈಕೆಲಾ - ಖಾರಸ್ವಾನ್ ಜಿಲ್ಲೆಯ ಚಾಂದಿಲ್​ ಬಜಾರ್​ ರಸ್ತೆಯಲ್ಲಿ ನಡೆದಿದೆ.

ಬಾಯ್​ ಫ್ರೆಂಡ್​ಗಾಗಿ ನಡುರಸ್ತೆಯಲ್ಲೇ ಬಡಿದಾಡಿಕೊಂಡ ಯುವತಿಯರು

ಬಾಯ್ಬಿಟ್ಟುಕೊಂಡು ಹೆಣ್ಮಕ್ಕಳ ಜಗಳ ನೋಡುತ್ತಾ ಸುತ್ತಲೂ ನಿಂತಿದ್ದ ಜನರು ಘಟನೆಯ ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಈ ವಿಡಿಯೋ ಈಗ ಸಖತ್​ ವೈರಲ್​ ಆಗಿದೆ. ಒಬ್ಬ ಯುವತಿ ಪರವಾಗಿ ಒಬ್ಬ ಯುವಕ ಹಾಗೂ ಮತ್ತೊಬ್ಬ ಯುವತಿಯ ಪರವಾಗಿ ಒಬ್ಬ ಯುವತಿ ಇದ್ದು, ಜಗಳವನ್ನು ಶಾಂತಗೊಳಿಸುವ ಕಾರ್ಯದಲ್ಲಿ ತೊಡಗಿದ್ದರು.

ಇದನ್ನೂ ಓದಿ: ನಿಂತಿದ್ದ ಟ್ರಕ್​ಗೆ ಡಿಕ್ಕಿ ಹೊಡೆದ ಕಾರು: ಒಂದೇ ಕುಟುಂಬದ ಐವರ ಸಾವು, ಬದುಕುಳಿದ ಪುಟ್ಟ ಮಗು

ಬಹಳ ಸಮಯದ ನಂತರ ಸಮಸ್ಯೆ ಇತ್ಯರ್ಥವಾಯಿತು. ಪೊಲೀಸರು ಸ್ಥಳಕ್ಕೆ ಆಗಮಿಸುವ ಮುನ್ನವೇ ಎಲ್ಲರೂ ಅಲ್ಲಿಂದ ಹೊರಟು ಹೋಗಿದ್ದರು. ಸದ್ಯ ವಿಡಿಯೋ ಆಧಾರದ ಮೇಲೆ ಪೊಲೀಸರು ಪರಿಶೀಲನೆಯಲ್ಲಿ ತೊಡಗಿದ್ದು, ಯುವತಿಯರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ನೆರೆದಿದ್ದ ಜನರು ಹೇಳುವ ಪ್ರಕಾರ ಅವರಿಬ್ಬರು ಒಬ್ಬನೇ ಹುಡುಗನಿಗಾಗಿ ಕಿತ್ತಾಡಿಕೊಂಡಿದ್ದಾರೆ.

Last Updated : Aug 12, 2021, 5:33 PM IST

ABOUT THE AUTHOR

...view details