ರಂಗಾರೆಡ್ಡಿ (ತೆಲಂಗಾಣ): ರಂಗಾರೆಡ್ಡಿ ಜಿಲ್ಲೆಯ ರಾಜೇಂದ್ರ ನಗರ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಇಬ್ಬರು ಸಜೀವ ದಹನವಾಗಿರುವ ಘಟನೆ ನಡೆದಿದೆ. ಆಂಧ್ರ ಪ್ರದೇಶದಿಂದ ಮುಂಬೈಗೆ ಸಮುದ್ರಾಹಾರ ತುಂಬಿಕೊಂಡು ಬರುತ್ತಿದ್ದ ಲಾರಿ ಮುಂದೆ ಹೋಗುತ್ತಿದ್ದ ಇನ್ನೊಂದು ವಾಹನಕ್ಕೆ ಡಿಕ್ಕಿ ಹೊಡೆದಿದೆ.
ನಡು ರಸ್ತೆಯಲ್ಲಿ ಹೊತ್ತಿ ಉರಿದ ಲಾರಿ: ಒಳಗಿದ್ದ ಚಾಲಕ-ಕ್ಲೀನರ್ ಸಜೀವ ದಹನ - ಇಬ್ಬರು ಸಾವು
ಅಪಘಾತದ ತೀವ್ರತೆಗೆ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಕ್ಯಾಬಿನ್ ಲಾಕ್ ಆಗಿದ್ದ ಕಾರಣ ಚಾಲಕ ಸೂರಜ್ ಹಾಗೂ ಕ್ಲೀನರ್ ಮೃತ್ಯುಂಜುಲು ಹೊರಬರಲಾಗದೆ ಸಾವನ್ನಪ್ಪಿದ್ದಾರೆ.
ಒಳಗಿದ್ದ ಚಾಲಕ-ಕ್ಲೀನರ್ ಸಜೀವ ದಹನ
ಅಪಘಾತದ ತೀವ್ರತೆಗೆ ಲಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಕ್ಯಾಬಿನ್ ಲಾಕ್ ಆಗಿದ್ದ ಕಾರಣ ಚಾಲಕ ಸೂರಜ್ ಹಾಗೂ ಕ್ಲೀನರ್ ಮೃತ್ಯುಂಜುಲು ಹೊರ ಬರಲಾಗದೆ ಸಾವನ್ನಪ್ಪಿದ್ದಾರೆ.
ಪೊಲೀಸರು ಘಟನಾ ಸ್ಥಳಕ್ಕಾಗಮಿಸಿ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಲಾರಿ ಚಾಲಕ ಸೂರ್ಯ ಕುಮಾರ್ ಉತ್ತರ ಪ್ರದೇಶ ಮೂಲದವನು ಹಾಗೂ ಕ್ಲೀನರ್ ಮಹಾರಾಷ್ಟ್ರ ಮೂಲದವನು ಎಂದು ತಿಳಿದು ಬಂದಿದೆ.