ಕರ್ನಾಟಕ

karnataka

ETV Bharat / bharat

ಹಣದಾಸೆಗೆ ದೇಶದ್ರೋಹ.. ಪಾಕ್​ನ ಐಎಸ್​ಐಗೆ ಗೌಪ್ಯ ಮಾಹಿತಿ ಹಂಚುತ್ತಿದ್ದ ಇಬ್ಬರು ಸೇನಾ ಸಿಬ್ಬಂದಿ ಅರೆಸ್ಟ್​

ಹಣದಾಸೆಗೆ ಡ್ರಗ್ ಸ್ಮಗ್ಲರ್​ ಮೂಲಕ ಭಾರತೀಯ ಸೇನೆಯ ಗೌಪ್ಯ ಮಾಹಿತಿಗಳನ್ನು ಹಂಚುತ್ತಿದ್ದ ಇಬ್ಬರು ಸೇನಾ ಸಿಬ್ಬಂದಿಯನ್ನು ಪಂಜಾಬ್​ನಲ್ಲಿ ಬಂಧಿಸಲಾಗಿದೆ.

Two Army jawans held for spying for Pak's ISI: Punjab Police
ಇಬ್ಬರು ಸೇನಾ ಸಿಬ್ಬಂದಿ ಬಂಧನ

By

Published : Jul 7, 2021, 7:13 AM IST

ಚಂಡೀಗಢ : ಹಣ ಅಂದ್ರೆ ಹೆಣವೂ ಬಾಯ್ಬಿಡುತ್ತೆ ಎಂಬ ಮಾತಿದೆ. ಅದರಂತೆ ಇಲ್ಲಿಬ್ಬರು ಸೈನಿಕರು ಪಾಕಿಸ್ತಾನದ ಆಮಿಷಕ್ಕೊಳಗಾಗಿ ಮಣ್ಣು ತಿನ್ನೋ ಕೆಲಸ ಮಾಡಿರುವ ಆರೋಪ ಕೇಳಿಬಂದಿದೆ. ಪಾಕಿಸ್ತಾನದ ಐಎಸ್‌ಐ ಗೆ ಭಾರತೀಯ ಸೇನೆಯ ಗೌಪ್ಯ ಮಾಹಿತಿಗಳನ್ನು ಹಂಚುತ್ತಿದ್ದ ಇಬ್ಬರು ಸೇನಾ ಜವಾನರನ್ನು ಬಂಧಿಸಿರುವುದಾಗಿ ಪಂಜಾಬ್ ಪೊಲೀಸರು ತಿಳಿಸಿದ್ದಾರೆ.

ಜಮ್ಮು ಕಾಶ್ಮೀರದ ಅನಂತ್​ನಾಗ್ ಜಿಲ್ಲೆಗೆ ನೇಮಕ ಮಾಡಲಾಗಿದ್ದ 19ನೇ ರಾಷ್ಟ್ರೀಯ ರೈಫಲ್ಸ್​​ನ ಸಿಪಾಯಿ ಹರ್​ಪ್ರೀತ್​ ಸಿಂಗ್ (23) ಮತ್ತು ಕಾರ್ಗಿಲ್​​ಗೆ ನೇಮಕ ಮಾಡಲಾಗಿದ್ದ 18 ನೇ ಸಿಖ್ ಲೈಟ್​ ಇನ್​ಫಾಂಟಿಯಾ ಸಿಪಾಯಿ ಗುರ್​​ಬೇಜ್ ಸಿಂಗ್ (23) ಬಂಧಿತ ಸೇನಾ ಸಿಬ್ಬಂದಿ.

ಈ ಬಗ್ಗೆ ಮಾಹಿತಿ ನೀಡಿರುವ ಪಂಜಾಬ್ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ದಿನಾರ್ ಗುಪ್ತಾ, ಇಬ್ಬರು ಆರೋಪಿಗಳು ಈಗಾಗಲೇ ದೇಶದ ರಕ್ಷಣೆ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ 900 ಕ್ಕೂ ಹೆಚ್ಚು ವರ್ಗೀಕೃತ ದಾಖಲೆಗಳ ಚಿತ್ರಗಳನ್ನು ಗಡಿಯಾಚೆಗಿನ ಮಾದಕವಸ್ತು ಕಳ್ಳ ಸಾಗಣೆದಾರ ರಣವೀರ್ ಸಿಂಗ್ ಎಂಬಾತನೊಂದಿಗೆ ಹಂಚಿಕೊಂಡಿದ್ದಾರೆ. ಆತ 2021ರ ಫೆಬ್ರವರಿ ಮತ್ತು ಮೇ ನಡುವಿನ ನಾಲ್ಕು ತಿಂಗಳಲ್ಲಿ ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳಿಗೆ ಅದನ್ನು ಹಸ್ತಾಂತರಿಸಿದ್ದಾನೆ ಎಂದು ತಿಳಿಸಿದ್ದಾರೆ.

ಮಾದಕ ದ್ರವ್ಯ ಮತ್ತು ಸೈಕೋಟ್ರೋಪಿಕ್ ಸಬ್​ಸ್ಟ್ಯಾನ್ಸಸ್​ (ಎನ್‌ಡಿಪಿಎಸ್) ಪ್ರಕರಣದ ತನಿಖೆಯನ್ನು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ನವೀನ್ ಸಿಂಗ್ಲಾ ನೇತೃತ್ವದಲ್ಲಿ ಜಲಂಧರ್ ಗ್ರಾಮೀಣ ಪೊಲೀಸರು ನಡೆಸುತ್ತಿದ್ದಾರೆ. ಆರೋಪಿ ರಣವೀರ್‌ ಸಿಂಗ್​ನಿಂದ ಭಾರತೀಯ ಸೇನೆಯ ಕಾರ್ಯ ಮತ್ತು ನಿಯೋಜನೆಗೆ ಸಂಬಂಧಿಸಿದ ಗೌಪ್ಯ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಗುಪ್ತಾ ಹೇಳಿದ್ದಾರೆ. ಮೇ 24 ರಂದು 70 ಗ್ರಾಂ. ಹೆರಾಯಿನ್‌ನೊಂದಿಗೆ ರಣವೀರ್​ ಸಿಂಗ್​ನ್ನು ಬಂಧಿಸಲಾಗಿದೆ.

ಓದಿ : ಮೀನು ಲಾರಿಯಲ್ಲಿ ಗೋವಾ ಮದ್ಯ ಸಾಗಾಟ: ಆರೋಪಿ ಸಹಿತ ಮದ್ಯ ವಶಕ್ಕೆ

ವಿಚಾರಣೆ ವೇಳೆ, ಆರೋಪಿ ರಣವೀರ್ ಸಿಂಗ್ ತನ್ನ ಸ್ನೇಹಿತರಾದ ಹರ್​ಪ್ರೀತ್ ಸಿಂಗ್​ನಿಂದ ಈ ದಾಖಲೆಗಳನ್ನು ಪಡೆದುಕೊಂಡಿದ್ದಾಗಿ ಬಾಯ್ಬಿಟ್ಟಿದ್ದಾನೆ. ಸೇನಾ ಸಿಬ್ಬಂದಿ ಹರ್​ಪ್ರೀತ್ ಸಿಂಗ್ ಮತ್ತು ಸ್ಮಗ್ಲರ್​ ರಣವೀರ್ ಸಿಂಗ್ ಒಂದೇ ಹಳ್ಳಿಯವರು. ಹಾಗಾಗಿ, ಇಬ್ಬರು ಮೊದಲಿನಿಂದಲೂ ಸ್ನೇಹಿತರಾಗಿದ್ದಾರೆ. ​

ರಣವೀರ್ ಸಿಂಗ್ ಹರ್​ಪ್ರೀತ್​ಗೆ ಹಣದ ಆಮಿಷವೊಡ್ಡಿ ಸೇನಾ ಮಾಹಿತಿಗಳನ್ನು ನೀಡುವಂತೆ ಪ್ರೇರೇಪಿಸಿದ್ದ. ಬಳಿಕ ಇನ್ನೋರ್ವ ಸೇನಾ ಸಿಬ್ಬಂದಿ ಗುರ್​ಬೇಜ್​ ಸಿಂಗ್​ನನ್ನು ತಮ್ಮೊಂದಿಗೆ ಸೇರಿಸಿಕೊಂಡಿದ್ದರು. ಬಳಿಕ, ಹರ್​ಪ್ರೀತ್ ಮತ್ತು ಗುರ್​ಬೇಜ್ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡೇ ಗೌಪ್ಯ ಮಾಹಿತಿಗಳನ್ನು ಸ್ಮಗ್ಲರ್​ಗೆ ನೀಡುತ್ತಿದ್ದ. ಆತ, ಅದನ್ನು ಐಎಸ್​ಐಗೆ ಹಸ್ತಾಂತರ ಮಾಡುತ್ತಿದ್ದ ಎಂದು ಪೊಲೀಸ್ ಮಹಾನಿರ್ದೇಶಕ ದಿನಾರ್ ಗುಪ್ತಾ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details