ಬೆಂಗಳೂರು:ಕೇಂದ್ರ ಸರ್ಕಾರದ ವಿರುದ್ಧ ಟ್ವಿಟರ್ ಸಂಸ್ಥೆ ನ್ಯಾಯಾಲಯದ ಮೆಟ್ಟಿಲೇರಿದೆ. ಕೆಲ ನಿರ್ದಿಷ್ಟ ವಿಷಯಗಳನ್ನು ತೆಗೆದುಹಾಕುವ ಕುರಿತು ಹಾಗೂ ಇಂತಹ ವಿಷಯಗಳನ್ನು ನಿರ್ಬಂಧಿಸಬೇಕು ಎಂಬ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಆದೇಶದ ವಿರುದ್ಧ ಕರ್ನಾಟಕ ಹೈಕೋರ್ಟ್ನ ಮೊರೆ ಹೋಗಲಾಗಿದೆ.
ಕೆಲ ಕಂಟೆಂಟ್ ನಿರ್ಬಂಧಿಸುವ ಬಗ್ಗೆ ಸೆಕ್ಷನ್ 69 'ಎ' ಅಡಿ ಐಟಿ ಸಚಿವಾಲಯ ಹೊರಡಿಸಿದ ಆದೇಶ ಅನ್ವಯವಾಗಲ್ಲ. ಈ ಕಾರಣಕ್ಕಾಗಿ ಟ್ವಿಟರ್ ಸರ್ಕಾರದ ಆದೇಶದ ವಿರುದ್ಧ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ ಎಂದು ವರದಿಯಾಗಿದೆ.
ಅಲ್ಲದೇ, ಸೆಕ್ಷನ್ 69 'ಎ' ಅಡಿ ನಿರ್ಬಂಧಿಸುವುದಾಗಿ ಹೇಳುವ ಸರ್ಕಾರ, ಅದು ಹೇಗೆ ಅಥವಾ ಯಾವ ವಿಷಯದಲ್ಲಿ ಉಲ್ಲಂಘನೆಯಾಗಿದೆ ಎಂದು ಆದೇಶದಲ್ಲಿ ತಿಳಿಸಿಲ್ಲ ಎಂದು ಟ್ವಿಟರ್ ಆರೋಪಿಸಿದೆ. ಈ ನಿರ್ಬಂಧದ ಆದೇಶ ರದ್ದುಗೊಳಿಸಲು ಟ್ವಿಟರ್ ನ್ಯಾಯಾಲಯದ ಮೊರೆ ಹೋಗಿದೆ ಎಂದು ಹೇಳಲಾಗಿದೆ.
ಕೆಲ ನಿರ್ದಿಷ್ಟ ವಿಷಯಗಳನ್ನು ತೆಗೆದುಹಾಕುವ ಬಗ್ಗೆ ಜೂನ್ನಲ್ಲಿ ಆದೇಶದ ಹೊರಡಿಸಿದ್ದ ಐಟಿ ಸಚಿವಾಲಯವು ಈ ಆದೇಶ ಪಾಲಿಸದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಟ್ವಿಟರ್ಗೆ ಎಚ್ಚರಿಕೆ ನೀಡಿತ್ತು.
ಇದನ್ನೂ ಓದಿ:ನ್ಯೂಸ್ ಚಾನೆಲ್ನ ಆ್ಯಂಕರ್ ರೋಹಿತ್ ರಂಜನ್ ಅರೆಸ್ಟ್