ಕರ್ನಾಟಕ

karnataka

Ghaziabad ಕಿರುಕುಳ ಪ್ರಕರಣ: ತನಿಖೆಗೆ ಸಹಕರಿಸುವುದಾಗಿ ಹೇಳಿದ ಟ್ವಿಟರ್ ಇಂಡಿಯಾ

By

Published : Jun 21, 2021, 4:41 PM IST

ಗಾಜಿಯಾಬಾದ್​ನ ಲೋನಿ ಪ್ರಕರಣದಲ್ಲಿ ಟ್ವಿಟರ್ ಇಂಡಿಯಾಕ್ಕೆ ಈಗಾಗಲೇ ನೋಟಿಸ್​ ಜಾರಿ ಮಾಡಲಾಗಿದ್ದು, ಅವರ ನೀಡಿರುವ ಉತ್ತರಗಳಿಂದ ನಾವು ತೃಪ್ತಿಯಾಗಿಲ್ಲ. ಹೀಗಾಗಿ ಮತ್ತೊಮ್ಮೆ ನೋಟಿಸ್​ ನೀಡಲಿದ್ದೇವೆ ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Ghaziabad Assault Case
Ghaziabad Assault Case

ನವದೆಹಲಿ/ಗಾಜಿಯಾಬಾದ್​:ಗಾಜಿಯಾಬಾದ್​ನ ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಟ್ವಿಟರ್​ ಇಂಡಿಯಾ ತನಿಖೆಗೆ ಸಹಕಾರ ನೀಡುವುದಾಗಿ ಹೇಳಿಕೆ ನೀಡಿದೆ. ಆದರೆ ಈಗಾಗಲೇ ಅದು ನೀಡಿರುವ ಉತ್ತರದಿಂದ ನಾವು ತೃಪ್ತಿಕರವಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಲು ಸಿದ್ಧರಾಗಿದ್ದು, ಅಲ್ಲಿ ನಡೆದ ವಿವಾದಕ್ಕೂ ನಮಗೂ ಯಾವುದೇ ರೀತಿಯಲ್ಲೂ ಸಂಬಂಧವಿಲ್ಲ ಎಂದು ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ಉತ್ತರಿಸಿದ್ದಾರೆ. ಇದರಿಂದ ನಾವು ತೃಪ್ತಿಕರವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ನೋಟಿಸ್ ಜಾರಿ ಮಾಡಿದ್ದ ಪೊಲೀಸರು

ಗಾಜಿಯಾಬಾದ್​ನ ಲೋನಿ ಪ್ರಕರಣದಲ್ಲಿ ಟ್ವಿಟರ್ ಇಂಡಿಯಾಕ್ಕೆ ಈಗಾಗಲೇ ನೋಟಿಸ್​ ಜಾರಿ ಮಾಡಲಾಗಿದ್ದು, ಅವರ ನೀಡಿರುವ ಉತ್ತರಗಳಿಂದ ನಾವು ತೃಪ್ತಿಯಾಗಿಲ್ಲ. ಹೀಗಾಗಿ ಮತ್ತೊಮ್ಮೆ ನೋಟಿಸ್​ ನೀಡಲಿದ್ದೇವೆ ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಲೋನಿ ಪ್ರಕರಣದಲ್ಲಿ ಮುಸ್ಲಿಂ ವ್ಯಕ್ತಿ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ತನಿಖೆಗೆ ಸಹಕಾರ ನೀಡುವಂತೆ ಟ್ವಿಟರ್ ಇಂಡಿಯಾ ಬಳಿ ಪೊಲೀಸರು ಕೇಳಿಕೊಂಡಿದ್ದರು.

ಏನಿದು ಪ್ರಕರಣ

ವೃದ್ಧನೋರ್ವನ ಮೇಲೆ ಕೆಲವರು ಹಲ್ಲೆ ನಡೆಸಿದ್ದ ವಿಡಿಯೋ ಸಾಮಾಜಿಕ ಜಾಲತಾಣ ಟ್ವಿಟರ್​ನಲ್ಲಿ ವೈರಲ್​ ಆಗಿತ್ತು. ಇದರಲ್ಲಿ ಜೈಶ್ರೀರಾಮ, ವಂದೇ ಮಾತರಂ ಘೋಷಣೆ ಕೂಗುವಂತೆ ಒತ್ತಾಯ ಮಾಡಲಾಗಿತ್ತು. ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡುವ ಈ ವಿಡಿಯೋ ಶೇರ್​ ಆಗಿದ್ದರಿಂದ ಟ್ವಿಟರ್​ಗೆ ನೋಟಿಸ್ ನೀಡಲಾಗಿತ್ತು.

ABOUT THE AUTHOR

...view details