ಕರ್ನಾಟಕ

karnataka

ETV Bharat / bharat

ಟ್ವಿಟರ್ ಹೊಸ ನಿಯಮ ಗೊತ್ತೇ?: ಅನುಮತಿ ಇಲ್ಲದೆ ಖಾಸಗಿ ವ್ಯಕ್ತಿಗಳ ಫೋಟೋ, ವಿಡಿಯೋ ಹಂಚಿಕೊಳ್ಳುವಂತಿಲ್ಲ - ಟ್ವಿಟರ್ ಹೊಸ ನಿಯಮ

ಟ್ವಿಟರ್‌ಗೆ ಭಾರತೀಯ ಮೂಲದ ಪರಾಗ್‌ ಅಗರ್ವಾಲ್ ನೂತನ ಸಿಇಒ ಆಗುತ್ತಿದ್ದಂತೆ, ಕಂಪನಿ ಹೊಸ ನಿಯಮವನ್ನು ಜಾರಿಗೆ ತಂದಿದೆ. ಇನ್ನು ಮುಂದೆ, ಸಮ್ಮತಿಯಿಲ್ಲದೆ ಖಾಸಗಿ ವ್ಯಕ್ತಿಗಳ ಫೋಟೋಗಳು ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುವುದನ್ನು ನಿಷೇಧಿಸಲಾಗಿದೆ.

ಟ್ವಿಟರ್
ಟ್ವಿಟರ್

By

Published : Dec 1, 2021, 10:38 AM IST

Updated : Dec 1, 2021, 11:13 AM IST

ನವದೆಹಲಿ: ಗೌಪ್ಯತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಟ್ವಿಟರ್ ಹೊಸ ನಿಯಮವನ್ನು ಜಾರಿಗೆ ತಂದಿದೆ. ಇನ್ನು ಮುಂದೆ, ಸಮ್ಮತಿಯಿಲ್ಲದೆ ಖಾಸಗಿ ವ್ಯಕ್ತಿಗಳ ಫೋಟೋಗಳು ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುವುದನ್ನು ಟ್ವಿಟರ್‌ ನಿಷೇಧಿಸಿದೆ.

ಹೊಸ ನಿಯಮದ ಪ್ರಕಾರ, ಇಂದಿನಿಂದ ಖಾಸಗಿ ವ್ಯಕ್ತಿಗಳ ಸಮ್ಮತಿಯಿಲ್ಲದೆ ಅವರ ಫೋಟೋ ಅಥವಾ ವೀಡಿಯೊಗಳಂತಹ ಖಾಸಗಿ ವಿಚಾರವನ್ನು ಹಂಚಿಕೊಳ್ಳಲು ನಾವು ಅನುಮತಿಸುವುದಿಲ್ಲ. ಈ ನೀತಿಯ ಅಡಿಯಲ್ಲಿ ಜನರ ಖಾಸಗಿ ಮಾಹಿತಿಯನ್ನು ಪ್ರಕಟಿಸುವುದನ್ನೂ ಸಹ ನಿಷೇಧಿಸಲಾಗಿದೆ. ಬಳಕೆದಾರರು ಭವಿಷ್ಯದಲ್ಲಿ ಅನುಮತಿ ಇಲ್ಲದೆ ಮಾಹಿತಿ ಹಂಚಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದೆ.

ಖಾಸಗಿ ಜನರಿಗೆ ಟ್ವಿಟರ್‌ನಲ್ಲಿ ಶೇರ್ ಆದ ತಮ್ಮ ಪರ್ಸನಲ್ ಫೋಟೋ ಅಥವಾ ಗ್ರೂಪ್ ಫೋಟೋಗಳನ್ನು ತೆಗೆಯಿರಿ ಎಂದು ವಿನಂತಿಸಲು ಈ ಹೊಸ ನಿಯಮಗಳಡಿಯಲ್ಲಿ ಅನುಮತಿ ನೀಡಲಾಗಿದೆ. ಖಾಸಗಿ ಮಾಹಿತಿ ರಿವೀಲ್ ಮಾಡುವುದರ ವಿರುದ್ಧ ಈಗಾಗಲೇ ಇರುವ ನಿಯಮದಲ್ಲಿಯೇ ಈ ಹೊಸ ಬದಲಾವಣೆ ಒಳಗೊಂಡಿದೆ.

ವ್ಯಕ್ತಿಯ ವಿಡಿಯೋ, ಫೋಟೋಗಳನ್ನು ಶೇರ್ ಮಾಡುವುದು ಅವರಿಗೆ ಮಾನಸಿಕವಾಗಿ ಅಥವಾ ದೈಹಿಕವಾಗಿ ನೋವುಂಟು ಮಾಡಬಹುದು ಎಂದು ಟ್ವಿಟರ್ ಸೇಫ್ಟಿ ಬ್ಲಾಗ್ ಪೋಸ್ಟ್ ಬದಲಾವಣೆ ಘೋಷಿಸಿದೆ. ಖಾಸಗಿ ಫೋಟೋ, ವಿಡಿಯೋ ದುರ್ಬಳಕೆ ಎಲ್ಲರ ಮೇಲೂ ಪರಿಣಾಮ ಬೀರುತ್ತದೆ. ಆದರೆ ಸ್ತ್ರೀಯರು, ಹಿಂದುಳಿದ ಸಮುದಾಯಗಳ ಜನರಿಗೆ ಹೆಚ್ಚಿನ ತೊಂದರೆಯಾಗುತ್ತದೆ ಎನ್ನಲಾಗಿದೆ.

Last Updated : Dec 1, 2021, 11:13 AM IST

ABOUT THE AUTHOR

...view details