ಕರ್ನಾಟಕ

karnataka

ETV Bharat / bharat

ಪ್ರೀತಿಸಿ, ಮದುವೆಯಾದ ಕಿರುತೆರೆ ತಾರೆಗಳು: ಗಂಡನ ವಿರುದ್ಧ ಕರ್ನಾಟಕ ಮೂಲದ ನಟಿಯಿಂದ ವಂಚನೆ ಆರೋಪ - TV Actress Divya

ತಮಿಳಿನ ಕಿರುತೆರೆ ನಟ ನೈನಾ ಮೊಹಮ್ಮದ್ ತನ್ನ ಹೆಸರನ್ನು ಅರ್ನವ್ ಎಂದು ಬದಲಾಯಿಸಿಕೊಂಡು ಕರ್ನಾಟಕ ಮೂಲದ ಕಿರುತೆರೆ ನಟಿ ದಿವ್ಯಾ ಅವರಿಗೆ ವಂಚಿಸಿದ್ದಾರೆ ಎಂದು ಹೇಳಲಾಗಿದೆ.

tv-actress-divya-accused-husband-of-cheating-her
ಪ್ರೀತಿಸಿ, ಮದುವೆಯಾದ ಕಿರುತೆರೆ ತಾರೆಗಳು: ಗಂಡನ ವಿರುದ್ಧ ಕರ್ನಾಟಕ ಮೂಲದ ನಟಿಯಿಂದ ವಂಚನೆ ಆರೋಪ

By

Published : Oct 6, 2022, 8:44 PM IST

ಚೆನ್ನೈ (ತಮಿಳುನಾಡು): ತಮಿಳಿನ ವಿವಿಧ ಪ್ರಮುಖ ಟಿವಿ ಧಾರಾವಾಹಿಗಳಲ್ಲಿ ನಟಿಸಿರುವ ಪ್ರಸಿದ್ಧ ಕಿರುತೆರೆ ನಟ ನೈನಾ ಮೊಹಮ್ಮದ್ ತನ್ನ ಹೆಸರನ್ನು ಅರ್ನವ್ ಎಂದು ಬದಲಾಯಿಸಿಕೊಂಡಿದ್ದರು. ಈ ನಡುವೆ ಕರ್ನಾಟಕ ಮೂಲದ ನಟಿಗೆ ಈ ನಟ ಮೋಸ ಮಾಡಿರುವ ಆರೋಪ ಕೇಳಿ ಬಂದಿದೆ.

ಕರ್ನಾಟಕ ಮೂಲದ ಕಿರುತೆರೆ ನಟಿ ದಿವ್ಯಾ ಅವರನ್ನು ಪ್ರೀತಿಸಿ, ಮದುವೆಯಾಗಿ ಅರ್ನವ್ ವಂಚಿಸಿದ್ದಾರೆ ಎಂದು ಹೇಳಲಾಗಿದೆ. ನಟಿ ವಿದ್ಯಾ ಕಣ್ಣೀರಿಟ್ಟು ವಿಡಿಯೋವೊಂದನ್ನು ಮಾಡಿ ಬಿಡುಗಡೆ ಮಾಡಿದ್ದಾರೆ. ಇಸ್ಲಾಂಗೆ ಮತಾಂತರವಾದರೆ ಮಾತ್ರ ನನ್ನ ಮನೆಯಲ್ಲಿ ಮದುವೆಯಾಗಲು ಒಪ್ಪುತ್ತಾರೆ ಎಂದು ದಿವ್ಯಾ ಅವರಿಗೆ ಅರ್ನವ್ ಹೇಳಿದ್ದರು. ಹೀಗಾಗಿ ದಿವ್ಯಾ ಕೂಡ ಇಸ್ಲಾಂಗೆ ಮತಾಂತರಗೊಂಡಿದ್ದಾರೆ. ಅರ್ನವ್ ಹಿಂದೂ ಮತ್ತು ಇಸ್ಲಾಂ ಧರ್ಮದ ಪ್ರಕಾರ ದಿವ್ಯಾಳನ್ನು ಮದುವೆ ಕೂಡಾ ಆಗಿದ್ದರು ಎನ್ನಲಾಗಿದೆ.

ಪ್ರೀತಿಸಿ, ಮದುವೆಯಾದ ಕಿರುತೆರೆ ತಾರೆಗಳು: ಗಂಡನ ವಿರುದ್ಧ ಕರ್ನಾಟಕ ಮೂಲದ ನಟಿಯಿಂದ ವಂಚನೆ ಆರೋಪ

ಸದ್ಯ ದಿವ್ಯಾ ಮೂರು ತಿಂಗಳ ಗರ್ಭಿಣಿಯಾಗಿದ್ದು, ಇಬ್ಬರೂ ಚೆನ್ನೈನ ತಿರುವೆಕ್ಕಾಡ್‌ನ ಅಪಾರ್ಟ್‌ಮೆಂಟ್‌ನಲ್ಲಿ ಕಳೆದ ಐದು ತಿಂಗಳಿಂದ ವಾಸಿಸುತ್ತಿದ್ದರು. ಆದರೆ, ಇದೇ ಸಂದರ್ಭದಲ್ಲಿ ದಿವ್ಯಾ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ವಿದ್ಯಾ ಕಣ್ಣೀರು ಸುರಿಸುತ್ತಾ ಮಾತನಾಡಿದ್ದು, ಕೊರೊನಾ ಅವಧಿಯಲ್ಲಿ ಅರ್ನವ್ ನಿರುದ್ಯೋಗಿಯಾಗಿದ್ದರು. ಆದರೆ, ನಾನು ಕೆಲಸಕ್ಕೆ ಹೋಗಿ ಅರ್ನವ್ ಅವರನ್ನು ನೋಡಿಕೊಂಡೆ ಮತ್ತು ಮನೆ ಕಟ್ಟಲು ಹಣ ನೀಡಿದ್ದೇನೆ ಎಂದು ಹೇಳಿದ್ದಾರೆ.

ಅಲ್ಲದೇ, ಅರ್ನವ್ ಇನ್ನೊಬ್ಬ ನಟಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ವರದಿಯಾಗಿತ್ತು. ನಂತರ ನಾನು ನಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದೇನೆ. ಇದೇ ನಮ್ಮ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಅಲ್ಲದೇ, ನಾನು ಗರ್ಭಿಣಿ ಎಂದೂ ಯೋಚಿಸದೇ ಅರ್ನವ್ ಥಳಿಸಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ.

ಇದೀಗ ವಿದ್ಯಾ ಚೆನ್ನೈನ ಕಿಲ್ಪಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ನಟಿ ದಿವ್ಯಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಕುರಿತು ಆಸ್ಪತ್ರೆ ಆಡಳಿತ ಮಂಡಳಿ ತಿರುವೇಕಾಡು ಠಾಣೆಗೆ ಮಾಹಿತಿ ನೀಡಿದೆ. ಈ ಮಾಹಿತಿ ಮೇರೆಗೆ ಮಹಿಳಾ ಪೊಲೀಸರು ಆಸ್ಪತ್ರೆಗೆ ತೆರಳಿ ನಟಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ, ಈ ಕುರಿತ ಅಧಿಕೃತವಾಗಿ ದೂರು ನೀಡಲು ನಟಿ ನಿರಾಕರಿಸಿದ್ದಾರೆ ಎಂದು ಹೇಳಲಾಗಿದೆ. ನಟಿಯ ಕಡೆಯಿಂದ ದೂರು ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಹೃದಯಾಘಾತ.. ಅಸ್ಸೋಂ ಬಾಲ ಕಲಾವಿದೆ ಸಾವು ; ಆಸ್ಪತ್ರೆ ಮೇಲ್ವಿಚಾರಕಿ ಅಮಾನತು!

ABOUT THE AUTHOR

...view details